ನವ ದೆಹಲಿ: ಫಲಿತಾಂಶ ತಮ್ಮ ಪರವಾಗಿ ಬರುವಂತೆ ಮಾಡಲು ಕ್ರಿಕೆಟ್ನಲ್ಲಿ ಆಟಗಾರರು ನಾನಾ ತಂತ್ರಗಳನ್ನು ಬಳಸುತ್ತಾರೆ. ಅದರಲ್ಲೊಂದು ಟೈಮ್ ವೇಸ್ಟ್. ಚರ್ಚೆ ಮಾಡುತ್ತಾ ಸಮಯ ಕಳೆದು ಎದುರಾಳಿ ತಂಡದ ಏಕಾಗ್ರತೆಗೆ ಭಂಗ ತರುವುದೇ ಅದರ ಉದ್ದೇಶ. ಇದನ್ನು ನಿಯಂತ್ರಿಸಲು ಐಸಿಸಿ ಪಂದ್ಯದ ಸಂಭಾವನೆ ಕಡಿತ ಮಾಡುವ ದಂಡನೆಯನ್ನು ಜಾರಿಯಲ್ಲಿಟ್ಟಿದೆ. ಆದರೆ, ಲೀಗ್ ಕ್ರಿಕೆಟ್ಗಳು ಬಂದ ಬಳಿಕ ಆಟಗಾರರು ಹಣಕ್ಕೆ ಕ್ಯಾರೇ ಮಾಡುತ್ತಿಲ್ಲ. ಕೇಳಿದಷ್ಟು ದಂಡ ಕಟ್ಟಿ ಮತ್ತೆ ಮತ್ತೆ ಅದೇ ತಪ್ಪನ್ನು ಪುನರಾರ್ತಿಸುತ್ತಿದ್ದಾರೆ. ಈ ಪ್ರವೃತ್ತಿಯನ್ನು ತಡೆಯಲು ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (ಸಿಪಿಎಲ್ 2023) ಸಮಯ ವ್ಯರ್ಥವನ್ನು ತಡೆಯಲು ಫುಟ್ಬಾಲ್ನಂತೆಯೇ ರೆಡ್ ಕಾರ್ಡ್ ನಿಯಮ ಜಾರಿಗೆ ಬಂದಿದೆ. ಅದರ ಪ್ರಕಾರ ನಿಧಾನಗತಿಯ ಓವರ್ ರೇಟ್ಗಾಗಿ ತಂಡಗಳಿಗೆ 5 ರನ್ ದಂಡ ಮತ್ತು ‘ಅಮಾನತು’ ಶಿಕ್ಷೆಗೆ ವಿಧಿಸಲು ನಿರ್ಧರಿಸಲಾಗುತ್ತದೆ.
ಸಿಪಿಎಲ್ 2023 ಆಯೋಜಕರು ಶನಿವಾರ ತಮ್ಮ ನಿಗದಿತ ಓವರ್ಗಳನ್ನು ಸಮಯಕ್ಕೆ ಪೂರ್ಣಗೊಳಿಸದ ಫ್ರಾಂಚೈಸಿಗಳು ಎದುರಿಸಬಹುದಾದ ನಿರ್ಬಂಧಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಐಸಿಸಿ ನಿಯಮದಂತೆ ಸಿಪಿಎಲ್ ಇಡೀ ಇನಿಂಗ್ಸ್ಗೆ 85 ನಿಮಿಷಗಳ ಸಮಯವನ್ನು ಕೊಟ್ಟಿದೆ.
ಇದನ್ನೂ ಓದಿ : ICC World Cup: ಬೆನ್ ಸ್ಟೋಕ್ಸ್ಗೆ ಕಳಕಳಿಯ ಮನವಿ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ
ಬೌಲಿಂಗ್ ತಂಡವು 17 ನೇ ಓವರ್ ಅನ್ನು 72 ನಿಮಿಷ 15 ಸೆಕೆಂಡುಗಳಲ್ಲಿ ಮುಗಿಸಬೇಕಾಗಿದೆ. ಹಾಗೆ ಮಾಡಲು ವಿಫಲವಾದರೆ ಹೆಚ್ಚುವರಿ ಫೀಲ್ಡರ್ ಅನ್ನು 30 ಯಾರ್ಡ್ ಸರ್ಕಲ್ನಿಂದ ಒಳಕ್ಕೆ ಕರೆದುಕೊಂಡು ಬರಬೇಕಾಗುತ್ತದೆ. 18 ನೇಓವರ್ ಅನ್ನು 76 ನಿಮಿಷ 30 ಸೆಕೆಂಡುಗಳಲ್ಲಿ ಮುಗಿಸಬೇಕು. ಆಗದೇ ಹೋದರೆ ಇಬ್ಬರು ಫೀಲ್ಡರ್ಗಳು 30 ಯಾರ್ಡ್ ವೃತ್ತದೊಳಗೆ ಬರಬೇಕಾಗುತ್ತದೆ.
ಸಿಪಿಎಲ್ 2023: ಓವರ್ ರೇಟ್ ದಂಡ
- 18ನೇ ಓವರ್ ಆರಂಭಕ್ಕೆ ಮೊದಲು ನಿಗದಿತ ಸಮಯ ಮುಗಿದಿದ್ದರೆ ಒಬ್ಬ ಆಟಗಾರ ಫೀಲ್ಡಿಂಗ್ 30 ಯಾರ್ಡ್ನೊಳಗೆ ಬರಬೇಕಾಗುತ್ತದೆ. (ಒಟ್ಟು 5 ಆಟಗಾರರು ಕಡ್ಡಾಯ )
- 19 ನೇ ಓವರ್ ಆರಂಭದ ವೇಳೆಯೂ ಸಮಯ ಕಾಪಾಡಿಕೊಳ್ಳದಿದ್ದರೆ ಇಬ್ಬರು ಸರ್ಕಲ್ ಒಳಗೆ ಬರಬೇಕು (ಒಟ್ಟು 6 ಆಟಗಾರರು)
- 20 ನೇ ಓವರ್ನ ಆರಂಭದಲ್ಲಿ ಇನ್ನೂ ರೇಟ್ಗಿಂತ ಹಿಂದೆ ಇದ್ದರೆ, ಫೀಲ್ಡಿಂಗ್ ತಂಡ ಒಬ್ಬ ಆಟಗಾರನನ್ನು ಹೊರಕ್ಕೆ ಕಳುಹಿಸಬೇಕಾಗುತ್ತದೆ. ಸರ್ಕಲ್ ಒಳಗೆ ಆರು ಫೀಲ್ಡರ್ಗಳು ಇರಬೇಕು.
- ಬ್ಯಾಟಿಂಗ್ ಮಾಡುವ ತಂಡಗಳು ಸಮಯ ವ್ಯರ್ಥ ಮಾಡುವಂತಿಲ್ಲ. ಅಂಪೈರ್ಗಳಿಂದ ಮೂರು ಎಚ್ಚರಿಕೆ ಪಡೆದ ನಂತರವೂ ಆಟ ಶುರು ಮಾಡದಶೇ ಹೋದರೆ 5 ಪೆನಾಲ್ಟಿ ರನ್ ನೀಡಲಾಗುತ್ತದೆ.
19ನೇ ಓವರ್ 80 ನಿಮಿಷ 45 ಸೆಕೆಂಡುಗಳಿಗಿಂತ ಕಡಿಮೆ ಇಲ್ಲದಿದ್ದರೆ, ಒಬ್ಬ ಆಟಗಾರನನ್ನು ಮೈದಾನದಿಂದ ಹೊರಹಾಕಲಾಗುತ್ತದೆ. ಮೈದಾನದಲ್ಲಿ ನಾಯಕನು ಆಟಗಾರನನ್ನು ತೆಗೆದುಹಾಕುವ ಆಯ್ಕೆಯನ್ನು ಮಾಡುತ್ತಾನೆ.
ನಮ್ಮ ಟಿ 20 ಪಂದ್ಯಗಳು ವರ್ಷ ಕಳೆದಂತೆ ದೀರ್ಘವಾಗುತ್ತಿದೆ. ಇದು ನಿರಾಸೆಯ ಸಂಗತಿ. ಈ ಪ್ರವೃತ್ತಿಯನ್ನು ತಡೆಯಲು ನಾವು ಏನು ಮಾಡಲು ಬಯಸುತ್ತಿದ್ದೇವೆ ಎಂದು ಸಿಪಿಎಲ್ ಟೂರ್ನಮೆಂಟ್ ನಿರ್ದೇಶಕ ಮೈಕೆಲ್ ಹಾಲ್ ಹೇಳಿದ್ದಾರೆ.