Site icon Vistara News

ಖೇಲ್‌ ರತ್ನ ಸಿಗದ ನಿರಾಸೆಯಲ್ಲಿ ಕೋರ್ಟ್​ ಮೆಟ್ಟಿಲೇರಲು ಮುಂದಾದ ಜ್ಯೋತಿ ಸುರೇಖಾ

jyothi surekha

ನವದೆಹಲಿ: ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ(Khel Ratna) ಪ್ರಶಸ್ತಿಗೆ ತನ್ನನ್ನು ಪರಿಗಣಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಹಿಳೆಯರ ಕಂಪೌಂಡ್​ ಆರ್ಚರಿ ಸಿಂಗಲ್ಸ್​ನಲ್ಲಿ ವಿಶ್ವ ನಂ. 1 ಬಿಲ್ಗಾರ್ತಿಯಾಗಿರುವ ಜ್ಯೋತಿ ಸುರೇಖಾ(compound archer Jyothi Surekha), ನ್ಯಾಯಾಲಯದ ಮೆಟ್ಟಿಲೇರುವ ಚಿಂತನೆ ನಡೆಸಿದ್ದಾರೆ.

ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ಅವರು ಕಳೆದ 6 ತಿಂಗಳಲ್ಲಿ ಏಷ್ಯನ್​ ಗೇಮ್ಸ್​ ಚಿನ್ನ ಸಹಿತ 13 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಹೀಗಿದ್ದರೂ ಅವರಿಗೆ ಖೇಲ್​ರತ್ನ ಪ್ರಶಸ್ತಿ ಒಲಿಯಲಿಲ್ಲ. ಅರ್ಜುನ ಪ್ರಶಸ್ತಿಗೆ ಅವರನ್ನು ಪರಿಗಣಿಸಲಾಗಿದೆ. ಇದನ್ನು ಪ್ರಶ್ನಿಸಿ ಅವರು ಇದೀಗ ಕೋರ್ಟ್​ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಜ್ಯೋತಿ ಸುರೇಖಾ, ‘ಖೇಲ್​ರತ್ನ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದವರಲ್ಲಿ ಪದಕ ಗೆದ್ದ ಆಧಾರದಲ್ಲಿ ನನಗೆ ಗರಿಷ್ಠ 148.74 ಅಂಕ ಲಭಿಸುತ್ತದೆ. ಆದರೂ ನನ್ನನ್ನು ಕಡೆಗಣಿಸಲಾಗಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ಭಾರತದ ನಂಬರ್‌ 1 ಬ್ಯಾಡ್ಮಿಂಟನ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಕರ್ನಾಟಕ ಮೂಲದ ಚಿರಾಗ್‌ ಶೆಟ್ಟಿ ಜೋಡಿಗೆ ಮಾತ್ರ ಈ ಬಾರಿ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಒಲಿದು ಬಂದಿದೆ. ಕೇಂದ್ರ ಕ್ರೀಡಾ ಸಚಿವಾಲಯ ಬುಧವಾರ ಪ್ರಶಸ್ತಿಗೆ ನಾಮ ನಿರ್ದೇಶಗೊಂಡ ಪಟ್ಟಿಯನ್ನು ಪರಿಶೀಲಿಸಿ ಅಂತಿಮ ಪಟ್ಟಿ ಪಕಟಿಸಿತ್ತು. ರಾಷ್ಟ್ರಪತಿ ಭವನದಲ್ಲಿ ಜನವರಿ 9ರಂದು ನಡೆಯಲಿರುವ ಸಮಾರಂಭದಲ್ಲಿ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಇತ್ತೀಗೆಗೆ ಮುಕ್ತಾಯ ಕಂಡ ಏಕದಿನ ವಿಶ್ವಕಪ್‌ನಲ್ಲಿ ಅತ್ಯಧಿಕ 24 ವಿಕೆಟ್‌ ಉರುಳಿಸಿದ್ದ ಟೀಮ್​ ಇಂಡಿಯಾದ ಬೌಲರ್​ ಮೊಹಮ್ಮದ್ ಶಮಿ ಅವರಿಗೆ ಅರ್ಜುನ ಪ್ರಶಸ್ತಿ ಒಲಿದಿದೆ. ಈ ಪಟ್ಟಿಯಲ್ಲಿ ಒಟ್ಟು 25 ಕ್ರೀಡಾಪಟುಗಳು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ ಚಿರಾಗ್-ಸಾತ್ವಿಕ್​ಗೆ ಖೇಲ್ ರತ್ನ, ಮೊಹಮ್ಮದ್​ ಶಮಿಗೆ ಒಲಿದ ಅರ್ಜುನ ಪ್ರಶಸ್ತಿ

ಪ್ರಶಸ್ತಿ ಪಟ್ಟಿ ಇಲ್ಲಿದೆ

ಮೇಜರ್‌ ಧ್ಯಾನ್‌ಚಂದ್‌ ಖೇಲ್‌ರತ್ನ

ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ.

ಅರ್ಜುನ ಪ್ರಶಸ್ತಿ

ಓಜಸ್‌ ಪ್ರವೀಣ್‌ ದೇವತಾಲೆ (ಆರ್ಚರಿ), ಅದಿತಿ ಗೋಪಿಚಂದ್‌ ಸ್ವಾಮಿ (ಆರ್ಚರಿ), ಮುರಳಿ ಶ್ರೀಶಂಕರ್‌ (ಆರ್ಚರಿ), ಪಾರುಲ್‌ ಚೌಧರಿ (ಆ್ಯತ್ಲೆಟಿಕ್ಸ್‌), ಮೊಹಮ್ಮದ್‌ ಹುಸ್ಸಮುದ್ದೀನ್‌ (ಬಾಕ್ಸಿಂಗ್‌), ಆರ್‌. ವೈಶಾಲಿ (ಚೆಸ್‌), ಮೊಹಮ್ಮದ್‌ ಶಮಿ (ಕ್ರಿಕೆಟ್‌), ಅನುಷ್‌ ಅಗರ್ವಾಲ್‌ (ಈಕ್ವೆಸ್ಟ್ರಿಯನ್‌), ದಿವ್ಯಾಕೃತಿ ಸಿಂಗ್‌ (ಈಕ್ವೆಸ್ಟ್ರಿಯನ್‌ ಡ್ರೆಸ್ಸೇಜ್‌), ದೀಕ್ಷಾ ಡಾಗರ್‌ (ಗಾಲ್ಫ್), ಕೃಷ್ಣ ಬಹಾದೂರ್‌ ಪಾಠಕ್‌ (ಹಾಕಿ), ಸುಶೀಲಾ ಚಾನು (ಹಾಕಿ), ಪವನ್‌ ಕುಮಾರ್‌ (ಕಬಡ್ಡಿ), ರೀತು ನೇಗಿ (ಕಬಡ್ಡಿ), ನಸ್ರಿನ್‌ (ಖೋ ಖೋ), ಪಿಂಕಿ (ಲಾನ್‌ ಬೌಲ್ಸ್‌), ಐಶ್ವರಿ ಪ್ರತಾಪ್‌ ಸಿಂಗ್‌ ತೋಮರ್‌ (ಶೂಟಿಂಗ್‌), ಇಶಾ ಸಿಂಗ್‌ (ಶೂಟಿಂಗ್‌), ಹರೀಂದರ್‌ ಪಾಲ್‌ ಸಿಂಗ್‌ ಸಂಧು (ಸ್ಕ್ವಾಶ್‌), ಐಹಿಕಾ ಮುಖರ್ಜಿ (ಟಿಟಿ), ಸುನೀಲ್‌ ಕುಮಾರ್‌ (ಕುಸ್ತಿ), ಅಂತಿಮ್‌ ಪಂಘಲ್‌ (ಕುಸ್ತಿ), ಎನ್‌. ರೋಶಿಬಿನಾ ದೇವಿ (ವುಶು), ಶೀತಲ್‌ ದೇವಿ (ಆರ್ಚರಿ), ಅಜಯ್‌ ಕುಮಾರ್‌ ರೆಡ್ಡಿ (ಅಂಧ ಕ್ರಿಕೆಟ್‌), ಪ್ರಾಚಿ ಯಾದವ್‌ (ಪ್ಯಾರಾ ಕನೋಯಿಂಗ್‌).
ದ್ರೋಣಾಚಾರ್ಯ ಪ್ರಶಸ್ತಿ (ಮಾಮೂಲು ವಿಭಾಗ): ಲಲಿತ್‌ ಕುಮಾರ್‌ (ಕುಸ್ತಿ), ಆರ್‌.ಬಿ. ರಮೇಶ್‌ (ಚೆಸ್‌), ಮಹಾವೀರ್‌ ಪ್ರಸಾದ್‌ ಸೈನಿ (ಪ್ಯಾರ್ಯಾ ಆ್ಯತ್ಲೆಟಿಕ್ಸ್‌), ಶಿವೇಂದ್ರ ಸಿಂಗ್‌ (ಹಾಕಿ), ಗಣೇಶ್‌ ಪ್ರಭಾಕರ್‌ ದೇವ್ರುಕರ್‌ (ಮಲ್ಲಕಂಬ).

ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ಸಾಧನೆ): ಜಸ್ಕೀರತ್‌ ಸಿಂಗ್‌ ಗ್ರೆವಾಲ್‌ (ಗಾಲ್ಫ್), ಭಾಸ್ಕರನ್‌ (ಕಬಡ್ಡಿ), ಜಯಂತ್‌ ಕುಮಾರ್‌ ಪುಶಿಲಾಲ್‌ (ಟಿಟಿ).

ಧ್ಯಾನ್‌ಚಂದ್‌ ಪ್ರಶಸ್ತಿ (ಜೀವಮಾನ ಸಾಧನೆ): ಮಂಜುಷಾ ಕನ್ವರ್‌ (ಬ್ಯಾಡ್ಮಿಂಟನ್‌), ವಿನೀತ್‌ ಕುಮಾರ್‌ ಶರ್ಮ (ಹಾಕಿ), ಕವಿತಾ ಸೆಲ್ವರಾಜ್‌ (ಕಬಡ್ಡಿ).

Exit mobile version