Site icon Vistara News

Athiya Shetty KL Rahul wedding: ಕೆ.ಎಲ್​. ರಾಹುಲ್​-ಅಥಿಯಾ ಶೆಟ್ಟಿ ವಿವಾಹದ ಸುಂದರ ಫೋಟೊಗಳು ಇಲ್ಲಿವೆ

Athiya Shetty KL Rahul wedding

ಮುಂಬಯಿ: ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ಕೆ.ಎಲ್​. ರಾಹುಲ್(Athiya Shetty KL Rahul wedding)​ ಮತ್ತು ಬಾಲಿವುಡ್‌ ತಾರೆ ಅಥಿಯಾ ಶೆಟ್ಟಿ(Athiya kl rahul marriage) ಸೋಮವಾರ(ಜನವರಿ 23) ಖಾಸಗಿ ಸಮಾರಂಭದಲ್ಲಿ ಸಪ್ತಪದಿ ತುಳಿದಿದ್ದಾರೆ.(athiya Shetty photos) ಇಲ್ಲಿಗೆ ಬಹು ಕಾಲದ ನಿರೀಕ್ಷೆ, ಕುತೂಹಲ, ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ. ಮದುವೆ ಸಮಾರಂಭದ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪತ್ನಿ ಅಥಿಯಾ ಶೆಟ್ಟಿ ಜತೆ ಹೆಜ್ಜೆ ಹಾಕಿದ ಕೆ. ಎಲ್​ ರಾಹುಲ್​


ಜನವರಿ 23ರ ಸೋಮವಾರದಂದು ಖಂಡಾಲಾದಲ್ಲಿರುವ ನಟ ಸುನೀಲ್ ಶೆಟ್ಟಿ(suniel Shetty) ಅವರ ಫಾರ್ಮ್​ ಹೌಸನಲ್ಲಿ ಈ ಇಬ್ಬರ ಮದುವೆ(athiya Shetty photos) ಅದ್ಧೂರಿಯಾಗಿ ನಡೆದಿದೆ. ಸಂಜೆ 4.15 ರ ಸುಮಾರಿಗೆ ಅಥಿಯಾ ಮತ್ತು ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಸಂಗಾತಿಯ ಕೈಗೆ ಸಿಹಿ ಮುತ್ತು ನೀಡಿದ ಕೆ.ಎಲ್​ ರಾಹುಲ್​​

ರಾಹುಲ್ ಹಾಗೂ ಅಥಿಯಾ(Athiya Shetty KL Rahul wedding) ಮದುವೆಯಾಗುವುದು ಖಚಿತ ಎಂದು ತಿಳಿದ ಬಳಿಕ ಮಾಧ್ಯಮ(rahul photos) ವರದಿಗಾರರು ಈ ಜೋಡಿಯ ಬಳಿ ಎಷ್ಟೋ ಬಾರಿ ಮದುವೆ ದಿನಾಂಕದ ವದಂತಿ ಕುರಿತು ಸ್ಪಷ್ಟನೆ ಕೇಳಿದ್ದಾರೆ. ಆದರೆ ಈ ಜೋಡಿ ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ. ಇದೀಗ ಕೊನೆಗೂ ರಾಹುಲ್​ ಅವರು ಅಥಿಯಾ ಅವರನ್ನು ಮದುವೆಯಾಗುವುದರ ಮೂಲಕ ತಮ್ಮ ಜೀವನದ ದ್ವಿತೀಯ ಇನಿಂಗ್ಸ್​ ಆರಂಭಿಸಿದ್ದಾರೆ.

ಸಂಜೆ 4.15 ರ ಸುಮಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಅಥಿಯಾ ಮತ್ತು ಕೆಎಲ್ ರಾಹುಲ್ ಸಂತಸದ ಕ್ಷಣ

ಇದನ್ನೂ ಓದಿ | Athiya Shetty KL Rahul wedding: ಹಸೆಮಣೆ ಏರಿದ ಕೆ.ಎಲ್​. ರಾಹುಲ್​-ಅಥಿಯಾ ಶೆಟ್ಟಿ

Exit mobile version