Site icon Vistara News

ICC World Cup 2023 : ವಿಶ್ವ ಕಪ್​ನ ಆರಂಭಿಕ ಪಂದ್ಯಗಳಿಂದ ಕೇನ್​ ವಿಲಿಯಮ್ಸನ್​ ಔಟ್​

Kane williamson

ಚೆನ್ನೈ: ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೃತ್ತಿಪರ ಕ್ರಿಕೆಟ್​ಗೆ ಮರಳಿದ ಒಂಬತ್ತು ತಿಂಗಳ ನಂತರ ಮತ್ತೆ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದ ಸಮಯದಲ್ಲಿ ಅವರ ಬೆರಳಿಗೆ ಗಾಯವಾಗಿದ್ದು, ಅವರು ಬ್ಯಾಟಿಂಗ್ ಅರ್ಧಕ್ಕೆ ನಿಲ್ಲಿಸಿ ನಿವೃತ್ತಿ ಪಡೆಯಬೇಕಾಯಿತು. ಶನಿವಾರ ಅವರ ಸ್ಕ್ಯಾನಿಂಗ್​ ರಿಪೋರ್ಟ್​ ಪಡೆಯಲಾಗಿದ್ದು. ಅವರ ಎಡ ಹೆಬ್ಬೆರಳಿನ ಮೂಳೆ ಮುರಿತವಾಗಿದೆ ಎಂದು ದೃಢಪಡಿಸಲಾಯಿತು.

ಹಿನ್ನಡೆಯ ಹೊರತಾಗಿಯೂ, ವಿಲಿಯಮ್ಸನ್ ವಿಶ್ವಕಪ್​​ನಲ್ಲಿ ತಮ್ಮ ತಂಡದೊಂದಿಗೆ ಉಳಿಯಲು ನಿರ್ಧರಿಸಿದ್ದಾರೆ. ಚೇತರಿಸಿಕೊಳ್ಳುವುದು ಮತ್ತು ಮುಂದಿನ ತಿಂಗಳು ಲೀಗ್​ ಹಂತದ ಕೊನೆಯ ಪಂದ್ಯಗಲಿಗೆ ಲಭ್ಯರಾಗುವುದು ಅವರ ಗುರಿಯಾಗಿದೆ. ವಿಲಿಯಮ್ಸನ್ ಅನುಪಸ್ಥಿತಿಯನ್ನು ಸರಿದೂಗಿಸಲು, ಟಾಮ್ ಬ್ಲಂಡೆಲ್ ಅವರನ್ನು ಅವರ ಬದಲಿ ಆಟಗಾರನಾಗಿ ಹೆಸರಿಸಲಾಗಿದೆ. ಅವರು ತಂಡದೊಂದಿಗೆ ಭಾರತಕ್ಕೆ ಪ್ರಯಾಣಿಸಲಿದ್ದಾರೆ.

“ಕೇನ್ ವಿಲಿಯಮ್ಸನ್ ಅವರ ಎಡ ಹೆಬ್ಬೆರಳಿಗೆ ಹಾನಿಯಾಗಿರುವುದನ್ನು ಎಕ್ಸ್-ರೇ ದೃಢಪಡಿಸಿದೆ. ಮುಂದಿನ ತಿಂಗಳು ನಡೆಯುವ ಮುಂದಿನ ಹಂತದ ಪಂದ್ಯಗಳಿಗೆ ಲಭ್ಯವಾಗುವ ಉದ್ದೇಶದಿಂದ ಅವರು ವಿರ್ಶ ಕಪ್​ ಉಳಿಯಲಿದ್ದಾರೆ. ಟಾಮ್ ಬ್ಲಂಡೆಲ್ ತಂಡ ಜತೆ ಪ್ರಯಾಣಿಸಲಿದ್ದಾರೆ” ಎಂದು ನ್ಯೂಜಿಲೆಂಡ್​ನ ಅಧಿಕೃತ ಎಕ್ಸ್ ಖಾತೆ ದೃಢಪಡಿಸಿದೆ.

ವಿಲಿಯಮ್ಸನ್ ಈ ಹಿಂದೆ ವಿಶ್ವಕಪ್​ಗೆ ಅಭ್ಯಾಸ ಪಂದ್ಯಗಳಲ್ಲಿ ಬ್ಯಾಟರ್​​ ಆಗಿ ಆಗಿ ಲಭ್ಯವಿದ್ದರು. ಪಾಕಿಸ್ತಾನ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. ಈ ವಾರದ ಆರಂಭದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಮರಳಿದ ನಂತರ, ಕಿವೀಸ್ ನಾಯಕ ಹೆಬ್ಬೆರಳಿಗೆ ಗಾಯವಾಗುವ ಮೊದಲು 78 ರನ್ ಗಳಿಸಿ ಬ್ಯಾಟಿಂಗ್ ಮಾಡಿದ್ದರು.

ಇದನ್ನೂ ಓದಿ: Ind vs Pak : ಪಾಕ್ ವಿರುದ್ಧ ಪಂದ್ಯದ ವೇಳೆ ತಪ್ಪು ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಬಂದ ಕೊಹ್ಲಿ

“ಇದು ನಿರಾಶಾದಾಯಕ ಸುದ್ದಿಯಾಗಿದ್ದರೂ, ಆರಂಭಿಕ ರೋಗನಿರ್ಣಯವು ವಿಶ್ರಾಂತಿ ಮತ್ತು ಪುನರ್ವಸತಿಯ ಅವಧಿಯ ನಂತರ ಅವರು ಕೊನೆ ಹಂತದ ಪಂದ್ಯಗಳಲ್ಲಿ ಕಾಣಿಸಿಕೊಳ್ಳಬಹುದು ಎಂಬ ಆಶಾವಾದವನ್ನು ನಗೆ ಸಿಕ್ಕಿದೆ ಎಂಬುದಾಗಿ ನ್ಯೂಜಿಲ್ಯಾಂಡ್​ ತಂಡದ ಮೂಲಗಳು ತಿಳಿಸಿವೆ.

ಕೇನ್ ಸ್ಪಷ್ಟವಾಗಿ ನಮ್ಮ ತಂಡದ ಪ್ರಮುಖ ಭಾಗವಾಗಿದ್ದಾರೆ. ಅವರು ವಿಶ್ವ ದರ್ಜೆಯ ಆಟಗಾರ ಮತ್ತು ನಾಯಕ. ಆದ್ದರಿಂದ ಪಂದ್ಯಾವಳಿಯಲ್ಲಿ ಮರಳಲು ನಾವು ಅವರಿಗೆ ಸಾಧ್ಯವಿರುವ ಎಲ್ಲ ಅವಕಾಶಗಳನ್ನು ನೀಡಲು ನೋಡುತ್ತೇವೆ ಎಂದು ಮೂಲಗಳು ತಿಳಿಸಿವೆ.

Exit mobile version