Site icon Vistara News

ICC World Cup 2023 : ಪಾಕ್​ ವಿರುದ್ಧ ಸವಾರಿ ಮಾಡುವುದೇ ಕಾಂಗರೂ ಪಡೆ

Pakistan Cricket team

ಬೆಂಗಳೂರು : ಭಾರತ ವಿರುದ್ಧ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ ತಂಡ ವಿಶ್ವ ಕಪ್​ನ (ICC World Cup 2023) ತನ್ನ ನಾಲ್ಕನೇ ಪಂದ್ಯದಲ್ಲಿ ಚೇತರಿಸಿಕೊಂಡಿರುವ ಆಸ್ಟ್ರೇಲಿಯಾ ತಂಡಕ್ಕೆ ಎದುರಾಗಲಿದೆ. ತನ್ನ ಸೋಲಿಗೆ ನಾನಾ ನೆಪಗಳನ್ನು ಹೇಳುತ್ತಿರು ಜತೆಗೆ ಪ್ರಮುಖ ಆಟಗಾರರು ಜ್ವರದ ಸಮಸ್ಯೆಯಿಂದ ಬಳಲುತ್ತಿರುವ ಪಾಕಿಸ್ತಾನ ತಂಡ ಇದೀಗ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಬ್ಯಾಟರ್​​ಗಳ ಸ್ವರ್ಗ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಿಸಲಿದೆ . ಅತ್ತ ಶ್ರೀಲಂಕಾ ವಿರುದ್ಧ ಭರ್ಜರಿ ವಿಜಯ ಕಂಡಿರುವ ಆಸ್ಟ್ರೇಲಿಯಾ ವಿಶ್ವ ಕಪ್​ನಲ್ಲಿ ಚೈತನ್ಯ ಕಂಡಿದ್ದು ಮತ್ತೊಂದು ಗೆಲುವಿನ ಮೂಲಕ ಪುಟಿದೇಳಲು ಯತ್ನಿಸುತ್ತಿದೆ.

ಪ್ರತಿಷ್ಠಿತ ವಿಶ್ವ ಕಪ್​ ಪಂದ್ಯಾವಳಿಯಲ್ಲಿ ಉಭಯ ತಂಡಗಳು ಈವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಆಸ್ಟ್ರೇಲಿಯಾ ಒಂದು ಗೆಲುವು ದಾಖಲಿಸಿದೆ ಮತ್ತು ಪಾಕಿಸ್ತಾನ ಎರಡು ಪಂದ್ಯಗಳನ್ನು ಗೆದ್ದಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ ಆಸ್ಟ್ರೇಲಿಯಾ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾವನ್ನು ಐದು ವಿಕೆಟ್ ಗಳಿಂದ ಸೋಲಿಸಿ ಖಾತೆ ತೆರೆಯಿತು. ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಗೆಲುವು ಸಾಧಿಸಲು ಹೆಣಗಾಡುತ್ತಿದೆ ಮತ್ತು ಪಾಯಿಂಟ್ಸ್ ಟೇಬಲ್ಸ್​​ನಲ್ಲಿ ಕೊನೆಯ ಅರ್ಧದಲ್ಲಿ ಉಳಿದಿದೆ. ಆದಾಗ್ಯೂ, ಅಂತಿಮವಾಗಿ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸುವುದು ಖಂಡಿತವಾಗಿಯೂ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಹಾಯ ಮಾಡುತ್ತದೆ.

ಮತ್ತೊಂದೆಡೆ, ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನವು ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಭಾರಿ ಸೋಲಿನ ಹಿನ್ನೆಲೆಯಲ್ಲಿ ಆಟಕ್ಕೆ ಬರುತ್ತಿರುವುದರಿಂದ ಅವರ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಬಹುದು. ತಂಡವು ಗೆಲುವಿನ ಹಾದಿಗೆ ಮರಳಲು ಉತ್ಸುಕವಾಗಿದೆ. ಹೀಗಾಗಿ ಮೆನ್ ಇನ್ ಯೆಲ್ಲೋ ವಿರುದ್ಧ ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ನೋಡುವುದು ಆಸಕ್ತಿದಾಯಕವಾಗಿದೆ.

ತಂಡ ಹೇಗಿರಬಹುದು?

ಆಸ್ಟ್ರೇಲಿಯಾ ತನ್ನ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಹೋಗಲು ಎದುರು ನೋಡುತ್ತಿದೆ. ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಮತ್ತೊಮ್ಮೆ ಆರಂಭಿಕರಾಗಿ ಕಣಕ್ಕಿಳಿಯುವ ನಿರೀಕ್ಷೆಯಿದ್ದು, ಟ್ರಾವಿಸ್ ಹೆಡ್ ಮರಳುವ ಸಾಧ್ಯತೆ ಇದೆ.

ಈ ಸುದ್ದಿಗಳನ್ನೂ ಓದಿ : Virat Kohli: 8 ವರ್ಷಗಳ ಬಳಿಕ ವಿಶ್ವಕಪ್​ ಟೂರ್ನಿಯಲ್ಲಿ ಬೌಲಿಂಗ್​ ನಡೆಸಿದ ವಿರಾಟ್​ ಕೊಹ್ಲಿ
IND vs BAN: ಹಾರ್ದಿಕ್​ ಪಾಂಡ್ಯಗೆ ಗಾಯ; ಟೀಮ್​ ಇಂಡಿಯಾಕ್ಕೆ ಆತಂಕ
KL Rahul : ಜಿಂಕೆಯಂತೆ ಚಂಗನೆ ನೆಗೆದು ಅದ್ಭುತ್ ಕ್ಯಾಚ್ ಹಿಡಿದ ಕೆ. ಎಲ್​ ರಾಹುಲ್​

ಪಾಕಿಸ್ತಾನದ ಹಲವಾರು ಸ್ಟಾರ್ ಆಟಗಾರರು ಅನಾರೋಗ್ಯಕ್ಕೆ ಒಳಗಾದ ಕಾರಣ ಅವರ ಕೈಯಲ್ಲಿ ಸಾಕಷ್ಟು ಸಮಸ್ಯೆ ಇದೆ. ಅಬ್ದುಲ್ಲಾ ಶಫೀಕ್ ಕ್ವಾರಂಟಟೈನ್​ನಲ್ಲಿರುವ ಕಾರಣ ಫಖರ್ ಜಮಾನ್ ತಂಡಕ್ಕೆ ಮರಳಬಹುದು.

ತಂಡಗಳು ಇಂತಿವೆ

ಭಾರತ: ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆ), ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ಆಡಮ್ ಝಂಪಾ, ಜೋಶ್ ಹೇಜಲ್ವುಡ್.

ಆಸ್ಟ್ರೇಲಿಯಾ: ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಖರ್ ಅಹ್ಮದ್, ಉಸಾಮಾ ಮಿರ್, ಹ್ಯಾರಿಸ್ ರವೂಫ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಮೊಹಮ್ಮದ್ ನವಾಜ್.

ಪಿಚ್ ಪರಿಸ್ಥಿತಿ ಹೇಗಿದೆ?

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟರ್​ಗಳಿಗೆ ಸ್ವರ್ಗವಾಗಿದೆ. ಆಟವು ಮುಂದುವರಿದಂತೆ, ಹೊನಲು ಬೆಳಕಿನ ಸಂದರ್ಭದಲ್ಲಿ ಬ್ಯಾಟಿಂಗ್ ಸುಲಭವಾಗುತ್ತದೆ. ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡಲಿದೆ. ಬೆಂಗಳೂರಿನಲ್ಲಿ ರನ್​ ಚೇಸಿಂಗ್ ಸುಲಭವಾಗಿರುವ ಕಾರಣ ದೊಡ್ಡ ಮೊತ್ತದ ರನ್ ಗಳಿಕೆ ಆಗಲಿದೆ.

ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡದ ಮುಖಾಮುಖಿ ವಿವರ

ನೇರ ಪ್ರಸಾರದ ವಿವರ

Exit mobile version