ಬೆಂಗಳೂರು : ವಿಶ್ವ ವಿಖ್ಯಾತಿಯೊಂದಿಗೆ ಸಿನಿಮಾ ಮಂದಿರಗಳಲ್ಲಿ ಅಬ್ಬರದ ಪ್ರದರ್ಶನ ಕಾಣುತ್ತಿರುವ ಸ್ಯಾಂಡಲ್‌ವುಡ್ ಸಿನಿಮಾ ಕಾಂತಾರದ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಭಾನುವಾರ ಬೆಂಗಳೂರಿನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯಗಳನ್ನು ವೀಕ್ಷಿಸಿದರು. ರಿಷಬ್ ಶೆಟ್ಟಿ ಅವರು ಕುತೂಹಲದಿಂದ ಪಂದ್ಯ ವೀಕ್ಷಿಸುತ್ತಿರುವ ದೃಶ್ಯಗಳನ್ನು ನೇರ ಪ್ರಸಾರದ ಕ್ಯಾಮೆರಾಗಳು ಸೆರೆ ಹಿಡಿದವು.
ಭಾನುವಾರ ಪುಣೇರಿ ಪಲ್ಟನ್ ಮತ್ತು ಯು ಮುಂಬಾ ಹಾಗೂ ಬೆಂಗಳೂರು ಬುಲ್ಸ್ ಮತ್ತ ಯುಪಿ ಯೋಧಾ ತಂಡಗಳ ನಡುವೆ ಪಂದ್ಯ ನಡೆಯಿತು. ಪಂದ್ಯಗಳ ಆರಂಭಕ್ಕೆ ಮೊದಲು ಪ್ರೊ ಕಬಡ್ಡಿ ಲೀಗ್‌ನ ಸಂಪ್ರದಾಯದಂತೆ ರಾಷ್ಟ್ರಗೀತೆಯನ್ನು ಹಾಡಿದರು. ಅವರ ಜತೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರೂ ಇದ್ದರು.
ರಿಷಬ್ ಅವರು ಚಿತ್ರಕತೆ ಬರೆದು ನಿರ್ದೇಶನ ಮಾಡಿ ನಟಿಸಿರುವ ಕಾಂತಾರ ಸಿನಿಮಾ ದೇಶಾದ್ಯಂತ ಜನ ಮೆಚ್ಚುಗೆ ಗಳಿಸಿದೆ. ಕತೆ ಹಾಗೂ ನಿರ್ಮಾಣದ ವಿಚಾರದಲ್ಲಿ ಹಲವು ಹೊಸತನಗಳು ಹಾಗೂ ಅಪರೂಪದ ಸಂಗತಿಗಳನ್ನು ಹೊಂದಿರುವ ಕಾರಣ ಕನ್ನಡೇತರ ಮಂದಿಯೂ ಸಿನಿಮಾವನ್ನು ಮೆಚ್ಚಿ ಮಾತನಾಡುತ್ತಿದ್ದಾರೆ. ದಿನ ಕಳೆದಂತೆ ಸಿನಿಮಾದ ಬಾಕ್ಸ್ ಅಫೀಸ್ ಕಲೆಕ್ಷನ್ ಕೂಡ ಹಲವು ದಾಖಲೆಗಳನ್ನು ಮುರಿಯುತ್ತಿದೆ.
ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ಹೊಗಳಿದ ತಮಿಳು ನಟ ಕಾರ್ತಿ: ರಿಷಬ್ ಮೇಲೆ ಕನ್ನಡಿಗರು ಗರಂ ಆಗಿದ್ಯಾಕೆ?