Site icon Vistara News

Kapil Dev Birthday: 65ನೇ ವಸಂತಕ್ಕೆ ಕಾಲಿಟ್ಟ ಚೊಚ್ಚಲ ವಿಶ್ವಕಪ್​ ಹೀರೋ ಕಪಿಲ್‌ ದೇವ್‌

kapil dev birthday

ಬೆಂಗಳೂರು: 1983ರ ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕ ಕಪಿಲ್‌ ದೇವ್‌ ಅವರಿಗೆ ಇಂದು(ಜನವರಿ 6) 65ನೇ ವರ್ಷದ ಜನ್ಮದಿನದ(Kapil Dev Birthday) ಸಂಭ್ರಮ. 1983ರ ಜೂನ್‌ 25ರ ಇಳಿಸಂಜೆಯಲ್ಲಿ ಕಪಿಲ್‌ದೇವ್‌ ಐತಿಹಾಸಿಕ ಲಾರ್ಡ್ಸ್‌ ಬಾಲ್ಕನಿಯಲ್ಲಿ ನಿಂತು ಪ್ರುಡೆನ್ಶಿಯಲ್‌ ಕಪ್‌ ಎತ್ತಿ ಹಿಡಿದ ದೃಶ್ಯಾವಳಿಯನ್ನು ಕ್ರಿಕೆಟ್‌ ಜಗತ್ತು ಎಂದೂ ಮರೆಯದು. ಅವರ ಹುಟ್ಟು ಹಬ್ಬಕ್ಕೆ ಬಿಸಿಸಿಐ ವಿಶೇಷವಾಗಿ ಹಾರೈಸಿದೆ.

1983ರ ವಿಶ್ವಕಪ್‌ ಪಂದ್ಯಾಕೂಟಗಳಲ್ಲಿ ಕಪಿಲ್‌ ದೇವ್‌ ಅವರ ಅವರ ಅದ್ಭುತ ಇನ್ನಿಂಗ್ಸ್‌ಗಳನ್ನು ಕಂಡಿದ್ದೇವೆ. ಅವುಗಳ ಪೈಕಿ ಜಿಂಬಾಬ್ವೆ ವಿರುದ್ಧ 138 ಎಸೆತಗಳಲ್ಲಿ ಅವರು ಬಾರಿಸಿದ 175 ರನ್‌ ಮರೆಯಲಸಾಧ್ಯ. ಜಿಂಬಾಬ್ವೆ ವಿರುದ್ಧದ ಅಂದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡೊಡನೆ ಕಪಿಲ್‌ದೇವ್‌ ಬಾತ್‌ರೂಮ್‌ಗೆ ತೆರಳಿದ್ದರು. ಫ್ರೆಶ್‌ ಆಗಿ ಬ್ಯಾಟಿಂಗಿಗೆ ಇಳಿಯುವುದು ಅವರ ಉದ್ದೇಶವಾಗಿತ್ತು. ಆದರೆ ಜಿಂಬಾಬ್ವೆ ಘಾತಕ ಬೌಲಿಂಗ್​ ನಡಸಿ 9 ರನ್‌ ಆಗುವಷ್ಟರಲ್ಲಿ ಗಾವಸ್ಕರ್‌, ಶ್ರೀಕಾಂತ್‌, ಮೊಹಿಂದರ್‌ ಮತ್ತು ಸಂದೀಪ್‌ ಪಾಟೀಲ್‌ ವಿಕೆಟ್‌ ಉರುಳಿಸಿತ್ತು.


ತಂಡದ ಆಟಗಾರರು ಸೀದಾ ಬಾತ್‌ರೂಮ್‌ ಕಡೆ ಹೆಜ್ಜೆ ಹಾಕಿ ಹೊರಗಿನಿಂದಲೇ ಕಪಿಲ್‌ಗೆ ಈ ವಿಷಯ ತಿಳಿಸಿದರು. ಅವರು ಅರ್ಧಕ್ಕೆ ಸ್ನಾನ ಮುಗಿಸಿ ಪ್ಯಾಡ್‌ ಕಟ್ಟಿ ಅಂಗಳಕ್ಕಿಳಿದರು. 5 ವಿಕೆಟ್‌ 17 ರನ್ನಿಗೆ ಬಿದ್ದಾಗ ಕಪಿಲ್‌ ಸುಂಟರಗಾಳಿಯಂಥ ಬೀಸುಗೆಯಲ್ಲಿ ಅಜೇಯ 175 ರನ್‌ ಬಾರಿಸಿದ್ದರು. ಇದು ಭಾರತೀಯ ಏಕದಿನ ಚರಿತ್ರೆಯ ಮೊದಲ ಶತಕವಾದರೆ, ಆ ಕಾಲಕ್ಕೆ ವಿಶ್ವದಾಖಲೆಯೂ ಆಗಿತ್ತು. ಭಾರತ ಪಂದ್ಯವನ್ನು ಕೂಡ ಗೆದ್ದು ಸಂಭ್ರಮಿಸಿತ್ತು.

ಭಾರತ ತಂಡ ಎಷ್ಟೇ ಕಪ್‌ಗಳನ್ನು ಗೆದ್ದಿರಬಹುದು, ಅದೆಷ್ಟೋ ಗೆಲುವುಗಳನ್ನು ಸಾಧಿಸಿರಬಹುದು ಜತೆಗೆ ನೂರಾರು ದಾಖಲೆಗಳನ್ನು ಬರೆದಿರಬಹುದು ಇದಕ್ಕೆಲ್ಲ ಬುನಾದಿ 1983ರ ಏಕದಿನ ವಿಶ್ವಕಪ್‌ ವಿಜಯೋತ್ಸವ. ಯಾರೂ ಕೂಡ ನಂಬಿಕೆ ಇಡದ ತಂಡವನ್ನು ಕಪಿಲ್​ ಮುನ್ನಡೆಸಿ ಭಾರತಕ್ಕೆ ಚೊಚ್ಚಲ ವಿಶ್ವಕಪ್​ ಕಪ್​ ಗಲ್ಲಿಸಿಕೊಟ್ಟರು. ಕಪಿಲ್​ ಸಾಹಸಕ್ಕೆ ಇಡೀ ಕ್ರಿಕೆಟ್​ ಜಗತ್ತೆ ಬೆರಗಾಗಿತ್ತು.

ಇದನ್ನೂ ಓದಿ Mohammed Siraj : ಸಿರಾಜ್​ ಸಾಧನೆಗಾಗಿ ಕಪಿಲ್​ ದೇವ್​ಗೆ ಥ್ಯಾಂಕ್ಸ್ ಹೇಳಿದ ಗವಾಸ್ಕರ್​

ಕಪಿಲ್ ಸಾಧನೆ


ಕಪಿಲ್ ದೇವ್​ ಅವರು ಭಾರತ ಪರ 356 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ ಒಟ್ಟು 9031 ರನ್​ ಬಾರಿಸಿದ್ದಾರೆ. ಜತೆಗೆ 687 ವಿಕೆಟ್​ ಕಿತ್ತ ಸಾಧನೆಯೂ ಇರದ್ದಾಗಿದೆ. ಏಕದಿನದಲ್ಲಿ 1, ಟೆಸ್ಟ್​ನಲ್ಲಿ 8 ಶತಕ ಬಾರಿಸಿದ್ದಾರೆ. ಅವರ ಚೊಚ್ಚಲ ಶತಕ ದಾಖಲಾದ್ದು ವಿಶ್ವಕಪ್​ನಲ್ಲಿ. ಇದಾದ ಬಳಿಕ ಅವರಿ ಏಕದಿನದಲ್ಲಿ ಶತಕ ಬಾರಿಸಿಲ್ಲ.

Exit mobile version