Site icon Vistara News

Kapil Dev : ಟಿ20 ವಿಶ್ವ ಕಪ್ ಚಾಂಪಿಯನ್ಸ್​ ಕೊಹ್ಲಿ, ರೋಹಿತ್ ಶ್ಲಾಘಿಸಿದ 1983ರ ವಿಶ್ವ ಕಪ್ ವಿಜೇತ ಕಪಿಲ್​ ದೇವ್​​

Kapil Dev

ನವದೆಹಲಿ: ಭಾರತದ ಮಾಜಿ ನಾಯಕ ಕಪಿಲ್ ದೇವ್ (Kapil Dev) ಇತ್ತೀಚೆಗೆ ಭಾರತದ ಸ್ಟಾರ್ ಬ್ಯಾಟರ್​ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಳಿಗಾಗಿ ಶ್ಲಾಘಿಸಿದ್ದಾರೆ. ಇಬ್ಬರೂ ಬ್ಯಾಟರ್​ಗಳು ಭಾರತೀಯ ಕ್ರಿಕೆಟ್​ ಕಂಡ ದೊಡ್ಡ ಆಟಗಾರರು. ಇವರಿಬ್ಬರಿಗೆ ಸಮಾನಾದ ಆಟಗಾರರು ಇನ್ಯಾರೂ ಇಲ್ಲ ಎಂದು ಅವರು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಇತ್ತೀಚೆಗೆ ಭಾರತಕ್ಕಾಗಿ ಟಿ 20 ವಿಶ್ವಕಪ್ ಗೆದ್ದ ನಂತರ ಟಿ 20 ಯಿಂದ ನಿವೃತ್ತಿ ಪಡೆದಿದ್ದಾರೆ. ಮೆನ್ ಇನ್ ಬ್ಲೂ ವಿಶ್ವ ಕಪ್​ ಪಂದ್ಯಾವಳಿಯುದ್ದಕ್ಕೂ ಅಜೇಯವಾಗಿ ಉಳಿದಿತ್ತು. ಫೈನಲ್ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ 11 ವರ್ಷಗಳ ಬಳಿಕ ವಿಶ್ವ ಕಪ್​ ಟ್ರೋಫಿ ಗೆದ್ದುಕೊಂಡಿತು. ಇದು ಭಾರತೀಯರಲ್ಲಿ ಸಂಚಲನ ಮೂಡಿಸಿದೆ. ಜತೆಗೆ ಕೊಹ್ಲಿ ಮತ್ತು ರೋಹಿತ್ ಅವರ ಅಮೋಘ ಆಟವೂ ಖುಷಿ ತಂದಿದೆ.

ಭಾರತೀಯ ಕ್ರಿಕೆಟ್​ನಲ್ಲಿ ಅವರ ಪ್ರಭಾವದ ಬಗ್ಗೆ ಮಾತನಾಡಿದ ಕಪಿಲ್ ದೇವ್, ಕೊಹ್ಲಿ ಮತ್ತು ರೋಹಿತ್ ಅವರನ್ನು ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿಗೆ ಹೋಲಿಸಿದ್ದಾರೆ.

“ಭಾರತ ತಂಡದಲ್ಲಿ ವಿರಾಟ್ ಮತ್ತು ರೋಹಿತ್ ಅವರ ಸ್ಥಾನವನ್ನು ಯಾವುದೇ ಸ್ವರೂಪದಲ್ಲಿ ಯಾರೂ ತುಂಬಲು ಸಾಧ್ಯವಿಲ್ಲ. ಅವರು ಭಾರತೀಯ ಕ್ರಿಕೆಟ್​​ನ ದೊಡ್ಡ ಸೇವಕರಾಗಿದ್ದಾರೆ. ಇದು ಅವರಿಗೆ ಸಂತೋಷದ ವಿದಾಯವಾಗಿತ್ತು. ವಿರಾಟ್ ಎಲ್ಲಾ ಸ್ವರೂಪಗಳಲ್ಲಿ ತನ್ನದೇ ಆದ ಸ್ಥಾನಮಾನ ಹೊಂದಿದ್ದಾರೆ. ಅವರನ್ನು ಟಿ 20 ಪಂದ್ಯಗಳಲ್ಲಿ ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಲಾಗುತ್ತದೆ. ಇಬ್ಬರೂ ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ಅವರಂತೆಯೇ. ಅವರು ಸರಿದೂಗಿಸಲು ಸಾಧ್ಯವಿಲ್ಲ” ಎಂದು ಕಪಿಲ್ ದೇವ್ ಹೇಳಿದ್ದಾರೆ.

ಭಾರತದ ಸಾಧನೆ ನಿರಂತರ: ಕಪಿಲ್ ದೇವ್

ಮುಂಬರುವ ಶ್ರೀಲಂಕಾ ಪ್ರವಾಸದಿಂದ ಮಾಜಿ ಬ್ಯಾಟರ್​ ಗೌತಮ್ ಗಂಭೀರ್ ಅವರನ್ನು ಭಾರತದ ಹೊಸ ಮುಖ್ಯ ಕೋಚ್ ಆಗಿ ಬಿಸಿಸಿಐ ಇತ್ತೀಚೆಗೆ ಘೋಷಿಸಾಗಿದೆ. ಅವರಿಗೂ ಕಪಿಲ್ ದೇವ್ ಶುಭ ಹಾರೈಸಿದ್ದಾರೆ. ಜೆಗೆ ಭಾರತ ತಂಡಕ್ಕೆ ಶುಭವಾಗಲಿ ಎಂದಿದ್ದಾರೆ.

ಇದನ್ನೂ ಓದಿ: KL Rahul : ಅಮಿರ್​ ಖಾನ್ ಮನೆ ಪಕ್ಕದಲ್ಲೇ 20 ಕೋಟಿ ಫ್ಲ್ಯಾಟ್ ಖರೀದಿಸಿದ ರಾಹುಲ್, ಅಥಿಯಾ ದಂಪತಿ

ಗೌತಮ್ ಗಂಭೀರ್ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆ ವಹಿಸಿಕೊಂಡಿದ್ದಾರೆ. ನಾನು ಅವರಿಗೆ ಮತ್ತು ತಂಡಕ್ಕೆ ಶುಭ ಹಾರೈಸುತ್ತೇನೆ. ನಾವು ಈ ಹಿಂದೆ ಮಾಡಿದ್ದಕ್ಕಿಂತ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ಭಾರತೀಯ ಆಟಗಾರರಿಗೆ ಶುಭ ಹಾರೈಸಲು ಬಯಸುತ್ತೇನೆ, “ಎಂದು ಕಪಿಲ್ ದೇವ್ ಹೇಳಿದ್ದಾರೆ.

ಮೂರು ಪಂದ್ಯಗಳ ಏಕದಿನ ಮತ್ತು ಮೂರು ಪಂದ್ಯಗಳ ಟಿ 20 ಐ ಸರಣಿಗಾಗಿ ಭಾರತವು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ತಮ್ಮ ಕರ್ತವ್ಯಗಳಿಂದ ವಿಶ್ರಾಂತಿ ನೀಡುವುದರಿಂದ ಸರಣಿಯಿಂದ ಹೊರಗುಳಿಯುವ ನಿರೀಕ್ಷೆಯಿದೆ.

Exit mobile version