Site icon Vistara News

Kapil Dev Kidnap: ವಿಶ್ವಕಪ್​ ವಿಜೇತ ನಾಯಕ ಕಪಿಲ್ ದೇವ್​ ಕಿಡ್ನಾಪ್​; ವಿಡಿಯೊ ವೈರಲ್​

viral news kannada

ಮುಂಬಯಿ: ಭಾರತ ಕ್ರಿಕೆಟ್​ ತಂಡಕ್ಕೆ ಮೊದಲ ವಿಶ್ವಕಪ್​ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಅವರ ಅಪಹರಣದ(Kapil Dev Kidnap) ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​(viral video) ಆಗುತ್ತಿದ್ದು, ಅವರ ಅಭಿಮಾನಿಗಳು ಆತಂಕ ಪಡುವಂತಾಗಿದೆ. ಕಪಿಲ್ ದೇವ್(Kapil Dev) ಅವರನ್ನು ಕಿಡ್ನಾಪ್ ಮಾಡುತ್ತಿರುವ ವಿಡಿಯೊವನ್ನು ಮಾಜಿ ಆಟಗಾರ ಗೌತಮ್​ ಗಂಭಿರ್(Gautam Gambhir) ಅವರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಇಬ್ಬರು ಕಪಿಲ್ ದೇವ್ ಅವರ ಕೈಗಳನ್ನು ದಾರದಿಂದ ಹಿಂಭಾಗಕ್ಕೆ ಕಟ್ಟಿದ್ದು, ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಿ ಕಟ್ಟಡವೊಂದರ ಒಳಗಡೆಗೆ ಎಳೆದುಕೊಂಡು ಹೋಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಈ ವೇಳೆ ಕಪಿಲ್ ಸಹಾಯಕ್ಕಾಗಿ ಹಿಂತಿರುಗಿ ನೋಡುವ ದೃಶ್ಯವನ್ನೂ ಕಾಣಬಹುದಾಗಿದೆ.

ಗೌತಮ್ ಗಂಭೀರ್ ಅವರು ಈ ವಿಡಿಯೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡು ಆತಂಕ ಹೊರಹಾಕಿದ್ದಾರೆ. “ಇದು ಕಪಿಲ್ ಪಾಜಿ ಅಲ್ಲ ಎಂದು ಭಾವಿಸುವೆ, ಅವರು ಚೆನ್ನಾಗಿದ್ದಾರೆ ಎಂದುಕೊಂಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಅಸಲಿಗೆ ಈ ವಿಡಿಯೊ ಹಿಂದಿರುವ ಕಾರಣ ಬೇರೆಯೇ ಇದೆ. ಇದೊಂದು ಜಾಹಿರಾತಿಗಾಗಿ ಚಿತ್ರಿಸಿದ ದೃಶ್ಯವೊಂದರ ತುಣಕಾಗಿದೆ.

ಆತಂಕಪಡಬೇಕಿಲ್ಲ

ಈ ಅಪಹರಣ ದೃಶ್ಯವನ್ನು ಜಾಹೀರಾತು ಉದ್ದೇಶಕ್ಕಾಗಿ ತೆಗೆದಿದ್ದು ಪ್ರಚಾರದ ಗಿಮಿಕ್​ಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿರುವ ಸಾಧ್ಯತೆ ಇದೆ. ಕಪಿಲ್ ಅಪಹರಣ ಕುರಿತು ಭಾರಿ ಪ್ರಚಾರ ಪಡೆಯಲು ಈ ರೀತಿ ಮಾಡಿರುವ ಸಾಧ್ಯತೆ ಹೆಚ್ಚು.

ವಿಶ್ವಕಪ್​ ಗೆಲ್ಲಲು ಅದೃಷ್ಟ ಕೈಹಿಡಿಯಬೇಕು

ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿ ಅಕ್ಟೋಬರ್​ 5ರಿಂದ ಆರಂಭಗೊಳ್ಳಲಿದೆ. ಭಾರತದ ವಿಶ್ವಕಪ್​ ಭವಿಷ್ಯವನ್ನು ಕಪಿಲ್​ ಅವರು ನುಡಿದಿದ್ದು ಎಲ್ಲವೂ ಅದೃಷ್ಟವನ್ನು ಅವಲಂಭಿಸಿದ್ದರಿಂದ ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡ ವೆಂದು ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಒಂದು ವೇಳೆ ನಮ್ಮ ತಂಡ ಅಗ್ರ ನಾಲ್ಕರೊಳಗಿನ ಹಂತಕ್ಕೆ ಬಂದರೆ ಮತ್ತೆ ಎಲ್ಲವೂ ಅದೃಷ್ಟದ ಬಲದಿಂದ ನಡೆಯುತ್ತದೆ. ಅಗ್ರ ನಾಲ್ಕರೊಳಗಿನ ಹಂತಕ್ಕೆ ಬರುವುದು ಅತ್ಯಂತ ಪ್ರಮುಖವಾಗಿದೆ. ಭಾರತ ತಂಡ ಪ್ರಶಸ್ತಿ ಗೆಲ್ಲಲು ಸಿದ್ಧವಾಗಿದೆ. ಏಷ್ಯಾ ಕಪ್‌ನಲ್ಲಿ ತೋರಿದ ಅದ್ಭುತ ನಿರ್ವಹಣೆ ಇಲ್ಲಿಯೂ ಮುಂದುವರಿದರೆ ಕಪ್​ಗೆಲ್ಲುವ ಸಾಧ್ಯತೆ ಇದೆ. ಜತೆಗೆ ಅದೃಷ್ಟವೂ ಕೈ ಹಿಡಿಯಬೇಕು” ಎಂದಿದ್ದರು.

ಇದನ್ನೂ ಓದಿ Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

10 ತಾಣಗಳಲ್ಲಿ ಪಂದ್ಯವಾಳಿ

ವಿಶ್ವಕಪ್​ನಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್​ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್​ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್​ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

Exit mobile version