Site icon Vistara News

Hardik Pandya : ಹಾರ್ದಿಕ್​ಗೆ ಗಾಯದ ಸಮಸ್ಯೆ; ಕರ್ಮಫಲ ಎಂದ ಅಭಿಮಾನಿಗಳು

Hardik Pandya

ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಪಾದದ ಗಾಯದಿಂದಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಋತುವಿನಿಂದ ಹೊರಗುಳಿಯುವ ಸಾಧ್ಯತೆಯಿದೆ. ಐಪಿಎಲ್ 2024 ಆಟಗಾರರ ಹರಾಜಿಗೆ ಮುಂಚಿತವಾಗಿ ಏಸ್ ಆಲ್ರೌಂಡರ್ ಗುಜರಾತ್ ಟೈಟಾನ್ಸ್​ನಿಂದ ಮುಂಬೈ ಇಂಡಿಯನ್ಸ್​ಗೆ ಟ್ರೇಡ್ ಅಗಿದ್ದರು. ತಕ್ಷಣವೇ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದು ಅಭಿಮಾನಿಗಳ ಪಾಲಿಗೆ ಬೇಸರದ ಸಂಗತಿಯಾಗಿತ್ತು. ಗುಜರಾತ್​ ತಂಡ ತಮ್ಮ ನಾಯಕನನ್ನು ಆರಂಭದಲ್ಲಿ ಅವರ ಉಳಿಸಿಕೊಳ್ಳುವ ಪಟ್ಟಿಯಲ್ಲಿ ಹೆಸರಿಸಿತ್ತು. ಆದರೆ ನಗದು ಒಪ್ಪಂದದ ಭಾಗವಾಗಿ ಹರಾಜಿಗೆ ಮುಂಚಿತವಾಗಿ ಎಂಐಗೆ ಮಾರಾಟ ಮಾಡಲಾಯಿತು.

ಜಿಟಿಯಿಂದ ಹಾರ್ದಿಕ್ ಅವರ ವ್ಯಾಪಾರವನ್ನು ಮುಂಬೈ ಇಂಡಿಯನ್ಸ್ ಘೋಷಿಸಿದ ಕೂಡಲೇ ಐದು ಬಾರಿಯ ಚಾಂಪಿಯನ್ಸ್ ಮುಂಬರುವ ಐಪಿಎಲ್ ಋತುವಿನಲ್ಲಿ ಆಲ್ರೌಂಡರ್ ಫ್ರಾಂಚೈಸಿಯನ್ನು ಮುನ್ನಡೆಸಲಿದ್ದಾರೆ ಎಂದು ಘೋಷಿಸಿತು. ಆದರೆ, 10 ವರ್ಷಗಳ ಕಾಲ ರೋಹಿತ್ ಮುನ್ನಡೆಸಿದ್ದ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ನೀಡಿರುವುದು ಆ ತಂಡದ ಅಪ್ಪಟ ಅಭಿಮಾನಿಗಳ ಪಾಲಿಗೆ ಕಹಿ ಸಂಗತಿಯಾಗಿತ್ತು. ಅವರೆಲ್ಲರೂ ತಕ್ಷಣ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾಗಳಿಂದ ಹೊರಕ್ಕೆ ಹೋಗುವ ಮೂಲಕ ಸಂದೇಶ ರವಾನಿಸಿದ್ದರು. ಇದೀಗ ಪಾಂಡ್ಯ ಗಾಯಗೊಂಡಿದ್ದಾರೆ ಎಂದು ತಿಳಿದ ತಕ್ಷಣಣ ಹಲವು ಬಗೆಯ ಮೀಮ್ಸ್​ಗಳನ್ನು ಮಾಡುವ ಮೂಲಕ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಎನ್​ಡಿಟಿವಿ ವರದಿಯ ಪ್ರಕಾರ, ಹಾರ್ದಿಕ್ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಐ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಮೂಲವೊಂದು ಶನಿವಾರ ದೃಢಪಡಿಸಿದೆ. ಆದರೆ ಮುಂಬರುವ ಐಪಿಎಲ್ 2024 ಆವೃತ್ತಿಯಲ್ಲಿ ಅವರು ಭಾಗವಹಿಸುವುದು ಅನುಮಾನಾಸ್ಪದ ಸಂಗತಿಯಾಗಿದೆ. ಕೆಲವು ಮೂಲಗಳು ಆರಂಭಿಕ ಪಂದ್ಯಗಳಿಗೆ ಇಲ್ಲ ಎಂದು ಹೇಳಿದರೆ ಇನ್ನೂ ಕೆಲವರು ಪೂರ್ಣ ಐಪಿಎಲ್​ಗೆ ಇಲ್ಲ ಎಂದು ಹೇಳಿದೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾರತಕ್ಕಾಗಿ ಆಡುವಾಗ ಹಾರ್ದಿಕ್ ಪಾಂಡ್ಯ ಅವರ ಬಲ ಪಾದದ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಅವರು ಫೀಲ್ಡಿಂಗ್ ಮಾಡಲು ಪ್ರಯತ್ನಿಸುವಾಗ ಕಾಳು ಜಾರಿತ್ತು. ಗಾಯದ ತೀವ್ರತೆಯು ಆರಂಭದಲ್ಲಿ ಅಸ್ಪಷ್ಟವಾಗಿತ್ತು, ಆದರೆ ನಂತರ ಸ್ಕ್ಯಾನ್​ಗಳ ಮಾಡಿದಾಗ ಗ್ರೇಡ್ 2 ಗಾಯವನ್ನು ಬಹಿರಂಗಪಡಿಸಿದವು, ಇದರರ್ಥ ಅವರು ವಿಶ್ವಕಪ್​​ನ ಉಳಿದ ಭಾಗವನ್ನು ಕಳೆದುಕೊಂಡಿದ್ದರು.

ಗಾಯದ ಸಮಸ್ಯೆಯಲ್ಲಿ ಭಾರತದ ಸ್ಫೋಟಕ ಬ್ಯಾಟರ್​

ಭಾರತ ಕ್ರಿಕೆಟ್​ ತಂಡದ ಗಾಯದ ಸಮಸ್ಯೆ ಮುಂದುವರಿಸಿದೆ. ತಂಡದ ಮತ್ತೊಬ್ಬ ಆಟಗಾರ ಗಾಯದ ಸಮಸ್ಯೆಯಿಂದ ಹೊರಗುಳಿಯಲಿದ್ದಾರೆ. ವಿಶ್ವದ ನಂ.1 ಟಿ20 ಬ್ಯಾಟರ್​ ಸೂರ್ಯಕುಮಾರ್ ಯಾದವ್ ಅವರ ಪಾದದ ಗಾಯದಿಂದಾಗಿ ಫೆಬ್ರವರಿವರೆಗೆ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಇದರರ್ಥ ಸ್ಟಾರ್ ಬ್ಯಾಟರ್​ ವಿಶ್ವ ಕಪ್​ ಮೊದಲಿಗೆ ಇರುವ ನಿರ್ಣಾಯಕ ಅಫಘಾನಿಸ್ತಾನ ವಿರುದ್ಧದ ಟಿ 20 ಐ ಸರಣಿಯಿಂದ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ : Gautam Gambhir : ಕೊಹ್ಲಿ ಜತೆ ಮೈದಾನದಲ್ಲಿ ಮಾತ್ರ ಜಗಳ; ಯೂಟರ್ನ್ ಹೊಡೆದ ಗಂಭೀರ್​

ದಿ ಇಂಡಿಯನ್ ಎಕ್ಸ್​ಪ್ರೆಸ್​ ವರದಿಗಳ ಪ್ರಕಾರ, ಸೂರ್ಯಕುಮಾರ್ ಅವರ ಪಾದದ ಮೇಲೆ ಗ್ರೇಡ್ 2 ಸ್ನಾಯು ಮುರಿತ ಉಂಟಾಗಿದೆ. ಅವರಿಗೆ ಸುಮಾರು 7 ವಾರಗಳ ಕಾಲ ಆಟದಿಂದ ದೂರ ಉಳಿಯುವ ಅವಶ್ಯಕತೆ ಇದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯದ ವೇಳೆ ಸೂರ್ಯಕುಮಾರ್​ ಅವರ ಪಾದ ಉಳುಕಿಸಿಕೊಂಡಿದ್ದರು. ತಕ್ಷಣವೇ ಭಾರತ ತಂಡದ ಫಿಸಿಯೋಗಳು ಅವರಿಗೆ ಚಿಕಿತ್ಸೆ ನೀಡಿದ್ದರು.

“ಅವರು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಅವರು ತಮ್ಮ ಪುನಶ್ಚೇತನಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ವರದಿ ಮಾಡಬೇಕಾಗುತ್ತದೆ. ಅವರು ಖಂಡಿತವಾಗಿಯೂ ಅಫ್ಘಾನಿಸ್ತಾನ ಸರಣಿಯಿಂದ ಹೊರಗುಳಿಯಲಿದ್ದಾರೆ,” ಎಂದು ಮೂಲವೊಂದು ತಿಳಿಸಿದೆ.

Exit mobile version