Site icon Vistara News

ಕರ್ನಾಟಕ ರಣಜಿ ಟೀಮ್ ಪ್ರಕಟ; ಮನೀಷ್‌ ಪಾಂಡೆಗೆ ಕ್ಯಾಪ್ಟನ್‌ ಪಟ್ಟ

ಕರ್ನಾಟಕ ರಣಜಿ ಟೀಂ

ಬೆಂಗಳೂರು: ಈ ಬಾರಿ ಕರ್ನಾಟಕ ರಣಜಿ ಟೀಮ್ ನಲ್ಲಿ ಯಾರಿರಲಿದ್ದಾರೆ ಗೊತ್ತೇ? 2022ರ ರಣಜಿ ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕದ 20 ಆಟಗಾರರ ತಂಡ ಪ್ರಕಟವಾಗಿದೆ. ಈ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ಪ್ರದೇಶವನ್ನು ಎದುರಿಸಲಿದೆ. ಜೂನ್‌ 6ರಂದು ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಉತ್ತರ ಪ್ರದೇಶದ ನಡುವೆ ಪಂದ್ಯ ನಡೆಯಲಿದೆ.

ಈ ಪಂದ್ಯದಲ್ಲಿ ಕರ್ನಾಟಕದ ಸ್ಟಾರ್‌ ಆಟಗಾರರಾದ ಕೆ.ಎಲ್‌ ರಾಹುಲ್‌ ಹಾಗೂ ಪ್ರಸಿದ್ಧ್ ಕೃಷ್ಣ ಆಡುವುದಿಲ್ಲ. ಈ ಸಂದರ್ಭದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ನಡೆಯುತ್ತದೆ. ಈ ಸರಣಿಯಲ್ಲಿ ಕೆ.ಎಲ್‌ ರಾಹುಲ್‌ ಭಾರತದ ನಾಯಕರಾಗಿ ಮುನ್ನಡೆಸಲಿದ್ದಾರೆ. ಬಲಗೈ ವೇಗಿ ಬೌಲರ್ ಪ್ರಸಿದ್ಧ್ ಕೃಷ್ಣ ಕೂಡ‌ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದು, ಇಂಗ್ಲೆಂಡ್‌ ಪ್ರವಾಸದ ತಯಾರಿಯಲ್ಲಿರುತ್ತಾರೆ. ಹಾಗಾಗಿ ಈ ಇಬ್ಬರೂ ಆಟಗಾರರು ಕರ್ನಾಟಕ ಪರ ಆಡಲು ಸಾಧ್ಯವಾಗುವುದಿಲ್ಲ.

ಈ ಇಬ್ಬರ ಅನುಪಸ್ಥಿತಿಯಲ್ಲೂ ಕರ್ನಾಟಕ ತಂಡವು ಬಲಿಷ್ಠವಾಗಿದೆ. ದೇವ್‌ದತ್‌ ಪಡಿಕ್ಕಲ್‌, ಮಯಾಂಕ್‌ ಅಗರ್‌ವಾಲ್‌, ಕರುಣ್‌ ನಾಯರ್‌, ಮನೀಷ್‌ ಪಾಂಡೆ ಎಲ್ಲರೂ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ. ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ. ಈ ತಂಡದ ನಾಯಕರಾಗಿ ಮನೀಷ್‌ ಪಾಂಡೆ ಆಯ್ಕೆಯಾಗಿದ್ದಾರೆ.

ತಂಡ ಹೀಗಿದೆ:

ಮನೀಷ್‌ ಪಾಂಡೆ‌ (ನಾಯಕ), ಸಮರ್ಥ ಆರ್ (ಉಪ ನಾಯಕ), ಮಯಾಂಕ್‌ ಅಗರ್‌ವಾಲ್‌, ದೇವ್‌ದತ್‌ ಪಡಿಕ್ಕಲ್‌, ಕರುಣ್‌ ನಾಯರ್‌, ಸಿದ್ಧಾರ್ಥ್‌ ಕೆ ವಿ, ಶರತ್‌ ಶ್ರೀನಿವಾಸ್‌( ವಿಕೆಟ್‌ ಕೀಪರ್)‌, ಶರತ್‌ ಬಿ ಆರ್ (ವಿಕೆಟ್‌ ಕೀಪರ್)‌, ಶ್ರೇಯಸ್‌ ಗೋಪಾಲ್‌, ಗೌತಮ್‌ ಕೆ, ಶುಭಾಂಗ್‌ ಹೆಗ್ಡೆ, ಸುಚಿತ್‌ ಜೆ, ಕಾರಿಯಪ್ಪ ಕೆಸಿ, ರೊನಿತ್‌ ಮೋರೆ, ಕೌಶಿಕ್‌ ವಿ, ವೈಶಾಕ್‌ ವಿಜಯ್‌ಕುಮಾರ್‌, ವೆಂಕಟೇಶ್‌ ಎಮ್‌, ವಿದ್ವತ್‌ ಕಾವೇರಪ್ಪ, ಕಿಶನ್‌ ಎಸ್‌ ಬೆದಾರೆ.

ಇದನ್ನೂ ಓದಿ:BJP ಕಾರ್ಯಕಾರಿಣಿಯಲ್ಲಿ ಭಾಗವಹಿಸುವ ಸುದ್ದಿ ಸತ್ಯವಲ್ಲ ಎಂದ ರಾಹುಲ್‌ ದ್ರಾವಿಡ್

Exit mobile version