Site icon Vistara News

Karun Nair : ಐಪಿಎಲ್​ನಲ್ಲಿ ಅನ್​ ಸೋಲ್ಡ್​​; ಕೌಂಟಿ ಕಡೆಗೆ ಹೊರಟ ಕನ್ನಡಿಗ

Karun Nair

ಬೆಂಗಳೂರು: ಐಪಿಎಲ್ 2024ರ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿಯ ಗಮನ ಸೆಳೆಯಲು ವಿಫಲಗೊಂಡಿರುವ ಕನ್ನಡಿಗ ಕರುಣ್​ ನಾಯರ್​ (Karun Nair) ಇದೀಗ ಕೌಂಟಿ ಚಾಂಪಿಯನ್​ಷಿಪ್​ನಲ್ಲಿ ಆಡಲು ಮುಂದಾಗಿದ್ದಾರೆ. ಅವರು ಏಪ್ರಿಲ್​ನಲ್ಲಿ ಕೌಂಟಿಯಲ್ಲಿ ನಾರ್ಥಾಂಪ್ಟನ್​ಶೈರ್​ ತಂಡದ ಪರವಾಗಿ ಆಡಲಿದ್ದಾರೆ.

ಕಳೆದ ವರ್ಷ ಕೌಂಟಿ ಕ್ಲಬ್ ಪರ ಆಡಿದ ನಾಯರ್ ಮೂರು ಇನ್ನಿಂಗ್ಸ್​ಗಳಲ್ಲಿ 249 ರನ್ ಗಳಿಸಿದ್ದರು. ಐಪಿಎಲ್ ಹರಾಜಿನಲ್ಲಿ ಯಾವುದಾದರೂ ತಂಡ ಸೇರಿದ್ದರೆ ಕೌಂಟಿಗೆ ಅವರು ಲಭ್ಯವಾಗುತ್ತಿರಲಿಲ್ಲ. ಆದರೆ ಯಾವುದೇ ತಂಡಕ್ಕೆ ಮಾರಾಟವಾಗದ ನಂತರ ನಾಯರ್ ಚಾಂಪಿಯನ್​ಷಿಪ್ ಋತುವಿನ ಮೊದಲ ಏಳು ಪಂದ್ಯಗಳಿಗೆ ಲಭ್ಯರಾಗಿದ್ದಾರೆ.

ಕರುಣ್ ನಾಯರ್​ ನಮ್ಮ ತಂಡಕ್ಕಾಗಿ ಕೆಲವೊಂದು ಅಸಮಾನ್ಯ ರನ್​ಗಳನ್ನು ಬಾರಿಸಿದ್ದಾರೆ. ಅವರ ಶಾಂತತೆ, ಅವರ ಮನೋಧರ್ಮ ಮತ್ತು ದೊಡ್ಡ ಮೊತ್ತ ಬಾರಿಸುವ ಅವರ ಅಭಿಷಾಳೆ ಅದ್ಭುತವಾಗಿತ್ತು ಎಂದು ತಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಅವರನ್ನು ಮತ್ತೆ ನಮ್ಮ ಬಳಗಕ್ಕೆ ಸೇರಿಸಲು ನಾವು ಸಂತೋಷಪಡುತ್ತೇವೆ. ಈ ಋತುವಿನಲ್ಲಿ ಅವರು ಮತ್ತೆ ನಮಗೆ ಉತ್ತಮ ಆಸ್ತಿಯಾಗುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ನಾರ್ಥಾಂಟ್ಸ್​​ ಮುಖ್ಯ ಕೋಚ್ ಇಎಸ್ಪಿಎನ್ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ.

ಕೌಂಟಿ ಚಾಂಪಿಯನ್​ಶಿಪ್​​ಗೆ ಮರಳುವ ಬಗ್ಗೆ ನಾಯರ್ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದರು. ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : Ind vs Eng : ಭಾರತವನ್ನು ಸೋಲಿಸಲು ಇಂಗ್ಲೆಂಡ್​ ತಂಡಕ್ಕೆ ಸಾಧ್ಯವೇ ಇಲ್ಲ ಎಂದ ಆರ್​ಸಿಬಿ ಕೋಚ್​

ಕೌಂಟಿ ಚಾಂಪಿಯನ್ಶಿಪ್ ಕ್ರಿಕೆಟ್​​ನ ಮತ್ತೊಂದು ಅವಧಿಗಾಗಿ ನಾರ್ಥಾಂಪ್ಟನ್​ಶೈರ್​ಗೆ ಮರಳಲು ನಾನು ರೋಮಾಂಚನಗೊಂಡಿದ್ದೇನೆ. ಪಂದ್ಯಗಳನ್ನು ಗೆಲ್ಲುವುದು ಮತ್ತು ಬಡ್ತಿ ಪಡೆಯುವುದು ನಮ್ಮ ಗುರಿಯಾಗಿದೆ ಮತ್ತು ಬ್ಯಾಟ್​ನೊಂದಿಗೆ ತಂಡಕ್ಕೆ ಗೆಲುವುಗಳನ್ನು ನೀಡಲು ನಾನು ಉತ್ಸುಕನಾಗಿದ್ದೇನೆ “ಎಂದು ನಾಯರ್ ಇಎಸ್​ಪಿಎನ್​ ಕ್ರಿಕ್​ಇನ್ಫೋಗೆ ಹೇಳಿದ್ದಾರೆ.

ನಾಯರ್ ಮೇ ವರೆಗೆ ನಾರ್ಥಾಂಟ್ಸ್ ಪರ ಲಭ್ಯವಿರುತ್ತಾರೆ ಮತ್ತು ನಂತರ ಅವರ ಬದಲಿಗೆ ಸಹ ಆಟಗಾರ ಪೃಥ್ವಿ ಶಾ ಅವರು ಐಪಿಎಲ್ 2024 ಮುಗಿದ ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ.

Exit mobile version