ಹೈದರಾಬಾದ್: ಗುರುವಾರ ರಾತ್ರಿ ನಡೆದ ಐಪಿಎಲ್ನ(IPL 2024) 50ನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್(Bhuvneshwar Kumar) ಅವರು ಅಂತಿಮ ಎಸೆತದ ಮ್ಯಾಜಿಕ್ನಿಂದ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ತಂಡ ರಾಜಸ್ಥಾನ್ ರಾಯಲ್ಸ್(Rajasthan Royals) ವಿರುದ್ಧ ರೋಚಕ 1 ರನ್ ಅಂತರದ ಗೆಲುವು ಸಾಧಿಸಿತು. ಈ ಗೆಲುವನ್ನು ತಂಡದ ಆಟಗಾರರಿಗಿಂತಲ್ಲೂ ಹೆಚ್ಚು ಸಂಭ್ರಮಿಸಿದ್ದು ತಂಡದ ಮಾಲಕಿ ಕಾವ್ಯಾ ಮಾರನ್. ಗ್ಯಾಲರಿಯಲ್ಲಿದ್ದ ಕಾವ್ಯ ತಂಡ ಗೆಲ್ಲುತ್ತಿದ್ದಂತೆ ಫೂಲ್ ಜೋಶ್ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ವೈರಲ್(viral video) ಆಗಿದೆ.
Jumps of Joy in Hyderabad 🥳
— IndianPremierLeague (@IPL) May 2, 2024
Terrific turn of events from @SunRisers' bowlers as they pull off a nail-biting win 🧡
Scorecard ▶️ https://t.co/zRmPoMjvsd #TATAIPL | #SRHvRR pic.twitter.com/qMDgjkJ4tc
31 ಹರೆಯದ ಕಾವ್ಯಾ ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಪಂದ್ಯ ಸೋತಾಗ ಮತ್ತು ಗೆದ್ದಾಗ ಅವರು ವಿಭಿನ್ನವಾಗಿ ಕಂಡುಬರುತ್ತಾರೆ. ಕ್ಯಾಮೆರಾ ಮೆನ್ಗಳು ಕೂಡ ಪಂದ್ಯದ ವೇಳೆ ಇವರ ಮೇಲೆ ವಿಶೇಷ ನಿಗಾ ಇರಿಸಿರುತ್ತಾರೆ. ಪಂದ್ಯ ಸೋತಾಗ ಅತಿಯಾದ ಬೇಸರಿಂದ ಸಪ್ಪೆ ಮೋರೆ ಹಾಕಿ ಕುಳಿತಿದ್ದ ವಿಡಿಯೊ ಮತ್ತು ಫೋಟೊಗಳು ಕೂಡ ಹಲವು ಬಾರಿ ವೈರಲ್ ಆಗಿತ್ತು.
Kavya Maran Happy ❤️pic.twitter.com/sFnm396HbU
— Joнɴ Cυrry 🛃 (@JohnyyBoy_) April 5, 2024
ಖ್ಯಾತ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರು ಐಪಿಎಲ್ ಆರಂಭಕ್ಕೂ ಮುನ್ನ ನಡೆದಿದ್ದ ಸಿನೆಮಾ ಕಾರ್ಯಕ್ರಮದ ಸಮಾರಂಭದ ವೇದಿಕೆಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಒಳ್ಳೆ ಆಟಗಾರರನ್ನು ಆಯ್ಕೆ ಮಾಡಿ ಏಕೆಂದರೆ ಈ ಪಂದ್ಯ ಸೋತಾಗ ಕಾವ್ಯಾ ಅವರು ನೋಡಲು ಸಾಧ್ಯವಾಗುದಿಲ್ಲ ಎಂದು ಹೇಳಿದ್ದರು.
ಕಾವ್ಯ ಚೆನ್ನೈ ಮೂಲದ ಮಾಧ್ಯಮ ಮತ್ತು ಟಿವಿ ಸಮೂಹ ಸನ್ ಟಿವಿ ನೆಟ್‌ವರ್ಕ್‌ನ ಮಾಲಕ ಕಲಾನಿತಿ ಮಾರನ್ ಅವರ ಪುತ್ರಿ. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪದವೀಧರರಾಗಿದ್ದಾರೆ. ಐಪಿಎಲ್ ಪಂದ್ಯದಲ್ಲಿ ಮಾತ್ರವಲ್ಲದೆ ಹರಾಜಿನ ವೇಳೆಯೂ ಅವರು ಪ್ರಧಾನ ಆಕರ್ಷಣೆಯಾಗಿರುತ್ತಾರೆ.
ಪಂದ್ಯ ಗೆದ್ದ ಹೈದರಾಬಾದ್
ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಸ್ಆರ್ಎಚ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗೆ 201 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 7 ವಿಕೆಟ್ಗೆ 200 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೇ ಓವರ್ನಲ್ಲಿ ರಾಯಲ್ಸ್ ತಂಡಕ್ಕೆ 13 ರನ್ಗಳು ಬೇಕಾಗಿತ್ತು. ಪೊವೆಲ್ ನಿಖರವಾಗಿ ರನ್ ಗಳಿಸಿ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದ್ದರು. ಆದರೆ, ಭುವನೇಶ್ವರ್ ಕುಮಾರ್ ಲೊ ಪುಲ್ಟಾಸ್ ಹಾಕುವ ಮೂಲಕ ಪೊವೆಲ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು.