ಬೆಂಗಳೂರು: ಚಿತ್ರರಂಗದ ಗಣ್ಯರ ಕ್ರಿಕೆಟ್ ಪಂದ್ಯಾಟ ಸರಣಿ ಕೆಸಿಸಿ ಕಪ್ ಸೀಸನ್ 4ರ (KCC 4- Kannada Chalanachitra Cup) ಹರಾಜು ಆರಂಭವಾಗಿದೆ. ಹೊಸಕೆರೆಹಳ್ಳಿಯ ನಂದಿಲಿಂಕ್ಸ್ ಗ್ರೌಂಡ್‌ನಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ ಇಂದು ನಡೆಯುತ್ತಿದೆ.
ಹರಾಜು ಪ್ರಕ್ರಿಯೆಯಲ್ಲಿ ಬಹುತೇಕ ಕಲಾವಿದರು ಭಾಗಿಯಾಗಿದ್ದರು. ಈ ಬಾರಿ ಆರು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಆರು ತಂಡಗಳಿಗೂ ಸ್ಟಾರ್ ನಟರು ಕ್ಯಾಪ್ಟನ್ ಆಗಿರುತ್ತಾರೆ. ಡಿಸೆಂಬರ್ 23,24, 25ರಂದು ಕೆಸಿಸಿ ಪಂದ್ಯಗಳು ನಡೆಯಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಸೀಸನ್ 4 ನಡೆಯಲಿದೆ.
ಸುದೀಪ್, ಶಿವಣ್ಣ, ಗಣೇಶ್, ಧನಂಜಯ್, ದುನಿಯಾ ವಿಜಯ್, ಉಪೇಂದ್ರ ಆಕ್ಷನ್‌ನಲ್ಲಿ ಭಾಗಿಯಾಗಿದ್ದಾರೆ. ಸದ್ಯ ದುನಿಯಾ ವಿಜಯ್, ಡಾಲಿ ಧನಂಜಯ್, ಲಹರಿ ವೇಲು, ಮನೋಹರ್ ನಾಯ್ಡು, ಶ್ರೀನಗರ ಕಿಟ್ಟಿ, ರವಿಶಂಕರ್, ಸುದೀಪ್ ಅಳಿಯ ಸಂಜಿತ್ ಸುದೀಪ್ ಸೇರಿದಂತೆ ಹಲವರ ಆಗಮನವಾಗಿದೆ. ಮೊದಲ ಬಾರಿಗೆ ಹಲವು ಕಿರುತೆರೆ ಕಲಾವಿದರು ಕೆಸಿಸಿಯಲ್ಲಿ ಭಾಗಿಯಾಗಲಿದ್ದಾರೆ.
ಈ ಬಾರಿಯ ಕೆಸಿಸಿಯಲ್ಲಿ ಕೆಲವು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರೂ ಭಾಗಿಗಳಾಗಲಿದ್ದಾರೆ. ಎಸ್ ಭದ್ರಿನಾಥ್, ಸುರೇಶ್ ರೈನಾ, ದಿಲ್ಶಾನ್, ಮುರಳಿ ವಿಜಯ್, ರಾಬಿನ್ ಉತ್ತಪ್ಪ. ಗಿಫ್ಸ್ ಆಡಲಿದ್ದಾರೆ. ಮೊದಲ ಬಾರಿಗೆ ಹಲವು ಕಿರುತೆರೆ ಕಲಾವಿದರು ಕೆಸಿಸಿಯಲ್ಲಿ ಭಾಗಿಯಾಗಲಿದ್ದಾರೆ. ಮೊದಲ ಬಾರಿಗೆ ಕೆಸಿಸಿಯಲ್ಲಿ ತಮಿಳಿನ ವಿಕ್ರಾಂತ್ ಹಾಗೂ ತೆಲುಗಿನ ಪ್ರಿನ್ಸ್ ಭಾಗಿಯಾಗುತ್ತಿದ್ದಾರೆ.
ತಂಡಗಳು ಹಾಗೂ ನಾಯಕರ ಹೆಸರು ಹೀಗಿವೆ:
1) ಒಡೆಯರ್ ಚಾರ್ಜರ್ಸ್. ಕ್ಯಾಪ್ಟನ್ ವಿಕ್ರಾಂತ್, ಸ್ಟಾರ್ ಉಪೇಂದ್ರ
2) ಕದಂಬ ಲಯನ್ಸ್: ಕ್ಯಾಪ್ಟನ್ ರಾಜೀವ್, ಸ್ಟಾರ್ ಡಾಲಿ ಧನಂಜಯ್.
3) ಗಂಗಾ ವಾರಿಯರ್ಸ್: ಕ್ಯಾಪ್ಟನ್ ಪ್ರಿನ್ಸ್. ಸ್ಟಾರ್ ಗಣೇಶ್.
4) ರಾಷ್ಟ್ರಕೂಟ ಪ್ಯಾಂತರ್ಸ್: ಕ್ಯಾಪ್ಟನ್ ಪ್ರದೀಪ್, ಸ್ಟಾರ್ ಶಿವಣ್ಣ.
5) ಹೊಯ್ಸಳ ಈಗಲ್ಸ್: ಕಿಚ್ಚ ಸುದೀಪ್ ಕ್ಯಾಪ್ಟನ್ ಆಂಡ್ ಸ್ಟಾರ್
ಕೆಸಿಸಿಯ ಹಿಂದಿನ ಟೂರ್ನಿಗಳಲ್ಲಿ ವೀರೇಂದ್ರ ಸೆಹ್ವಾಗ್, ಲ್ಯಾನ್ಸ್ ಕ್ಲೂಸೆನರ್, ಹರ್ಷಲ್ ಗಿಬ್ಸ್ , ತಿಲಕರತ್ನೆ ದಿಲ್ಶನ್, ಆಡಮ್ ಗಿಲ್‌ಕ್ರಿಸ್ಟ್, ಓವೈಸ್ ಶಾ, ಕ್ರಿಸ್ ಗೇಲ್ ಮುಂತಾದವರು ಆಡಿದ್ದಾರೆ. ಹಿಂದಿನ ಎರಡೂ ಸೀಸನ್‌ಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿವೆ.
ಇದನ್ನೂ ಓದಿ: KCC Cup 2023: ಡಿಸೆಂಬರ್‌ನಲ್ಲಿ KCC ಕಪ್; ಟೂರ್ನಿಗೆ ಬರ್ತಾರಾ ಸಚಿನ್, ಧೋನಿ?