ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೇವಿಡ್ ವಿಲ್ಲಿ ಬದಲಿಗೆ ಕೇದಾರ್ ಜಾಧವ್ ಅವರನ್ನು ಆಯ್ಕೆ ಮಾಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಉಳಿದ ಪಂದ್ಯಗಳಿಗೆ ಡೇವಿಡ್ ವಿಲ್ಲಿ ಬದಲಿಗೆ ಕೇದಾರ್ ಜಾಧವ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಸೋಮವಾರ ಹೆಸರಿಸಿದೆ.
ಇಂಗ್ಲೆಂಡ್ ಆಲ್ರೌಂಡರ್ ವಿಲ್ಲಿ ಈ ಋತುವಿನಲ್ಲಿ ಆರ್ಸಿಬಿ ಪರ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ ಮತ್ತು ಮೂರು ವಿಕೆಟ್ಗಳನ್ನು ಪಡೆದಿದ್ದಾರೆ. 2010 ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ ಜಾಧವ್ ಇದುವರೆಗೆ 93 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಅವರು ಐಪಿಎಲ್ನಲ್ಲಿ 1196 ರನ್ ಗಳಿಸಿದ್ದಾರೆ. ಈ ಹಿಂದೆ 17 ಪಂದ್ಯಗಳಲ್ಲಿ ಆರ್ಸಿಬಿಯನ್ನು ಪ್ರತಿನಿಧಿಸಿದ್ದ ಬಲಗೈ ಬ್ಯಾಟ್ಸ್ಮನ್ 1 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ.
ದಿನೇಶ್ ಕಾರ್ತಿಕ್ಗೆ ಟ್ರೋಲ್ ಮಾಡಿದ ಆರ್ಸಿಬಿ ಅಭಿಮಾನಿಗಳು
ಐಪಿಎಲ್ನಲ್ಲಿ(IPL 2023) ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಸತತವಾಗಿ ಎಡವುತ್ತಿರುವ ಆರ್ಸಿಬಿ ತಂಡದ ಆಟಗಾರ ದಿನೇಶ್ ಕಾರ್ತಿಕ್(Dinesh Karthik) ಆಟದ ಬಗ್ಗೆ ಆರ್ಸಿಬಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ದಯವಿಟ್ಟು ಕ್ರಿಕೆಟ್ಗೆ ವಿದಾಯ ಹೇಳಿ ಮತ್ತೆ ಕಾಮೆಂಟ್ರಿ ಬಾಕ್ಸ್ಗೆ ತೆರಳಿ ಎಂದು ಸಲಹೆ ನೀಡಿದ್ದಾರೆ. ಕೆಲವರು ಟ್ರೋಲ್ ಮಾಡಿದ್ದಾರೆ,
ಕಳೆದ ಆವೃತ್ತಿಯಲ್ಲಿ ಗ್ರೇಟ್ ಫಿನಿಷರ್ ಪಾತ್ರವಹಿಸಿ ಮಿಂಚಿದ್ದ ದಿನೇಶ್ ಕಾರ್ತಿಕ್ ಅಚ್ಚರಿ ಎಂಬಂತೆ ಟಿ20 ವಿಶ್ವ ಕಪ್ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಲ್ಲಿಯೂ ಕೂಡ ತೀರಾ ಕಳಪೆ ಪ್ರದರ್ಶನ ತೋರುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಇದೀಗ ಐಪಿಎಲ್ನಲ್ಲಿಯೂ ನೀರಸ ಪ್ರದರ್ಶನ ತೋರುತ್ತಿದ್ದಾರೆ. ಪ್ರತಿ ಪಂದ್ಯದಲ್ಲಿಯೂ ಒಂದಕಿಗೆ ಸೀಮಿತರಾಗುತ್ತಿದ್ದಾರೆ. ಜತೆಗೆ ಕಳಪೆ ಮಟ್ಟದ ಕೀಪಿಂಗ್ನಿಂದಲೂ ತಂಡದ ಹಿನ್ನಡೆಗೆ ಕಾರಣರಾಗುತ್ತಿದ್ದಾರೆ. ಅವರ ಈ ಪ್ರದರ್ಶನ ಕಂಡ ಆರ್ಸಿಬಿ ಅಭಿಮಾನಿಗಳು ಬೇಸರಗೊಂಡು ಕ್ರಿಕೆಟ್ಗೆ ವಿದಾಯ ಹೇಳುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ : Youngest Players To Smash A Century In IPL: ಐಪಿಎಲ್ನಲ್ಲಿ ಶತಕ ಬಾರಿಸಿದ ಕಿರಿಯ ಬ್ಯಾಟ್ಸ್ಮನ್ಗಳು
ಈ ಕುರಿತು ಸರಣಿ ಟ್ವೀಟ್ ಮಾಡಿರುವ ನೆಟ್ಟಿಗರು, “ಪಂದ್ಯವನ್ನು ಗೆಲ್ಲಿಸುವಂತ ಆಟಗಾರರಿಗೆ ಅವಕಾಶ ನೀಡಿ. ಮುಂದಿನ ಆವೃತ್ತಿಯಲ್ಲಿ ಅವರನ್ನು ದಯವಿಟ್ಟು ತಂಡದಿಂದ ಕೈಬಿಡಬೇಕು, ಅವರು ಕಾಮೆಂಟ್ರಿ ಬಾಕ್ಸ್ಗೆ ತೆರಳಲಿ” ಎಂದು ಟ್ರೋಲ್ ಮಾಡಿದ್ದಾರೆ. ಕಳೆದ ರಾಜಸ್ಥಾನ್ ವಿರುದ್ಧ ಪಂದ್ಯದಲ್ಲಿ ಕಾರ್ತಿಕ್ 13 ಎಸೆತಗಳಲ್ಲಿ 16 ರನ್ಗಳಿಸಿದ್ದರು. ಇದೇ ವೇಳೆ ಅವರು ವನಿಂದು ಹಸರಂಗ ಅವರನ್ನು ರನೌಟ್ ಆಗುವಂತೆ ಮಾಡಿದರು. ಐಪಿಎಲ್ನಲ್ಲಿ ದಿನೇಶ್ ಕಾರ್ತಿಕ್ ಅವರು ಸಹ ಆಟಗಾರರನ್ನು ರನೌಟ್ ಆಗುವಂತೆ ಮಾಡಿದ್ದು ಇದು 26ನೇ ನಿದರ್ಶನವಾಗಿದೆ.