ಮುಂಬಯಿ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ(ICC World Cup 2023) ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆ ರೋಹಿತ್ ಶರ್ಮ(Rohit Sharma) ಅವರು ಕಪ್ ಗೆಲ್ಲದಿದ್ದರೂ ದೇಶ ನಿಮ್ಮನ್ನು ನೋಡಿ ಹೆಮ್ಮೆ ಪಡುತ್ತಿದೆ ನೀವು ತಲೆ ಎತ್ತಿ ಓಡಾಡಬೇಕು ಎಂದು 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್(kapil dev) ಧೈರ್ಯ ತುಂಬಿದ್ದಾರೆ.
“ರೋಹಿತ್ ಶರ್ಮ ಅವರು ತಂಡವನ್ನು ಮುನ್ನಡೆಸಿದ ರೀತಿ ನಿಜಕ್ಕೂ ಮೆಚ್ಚಲೇ ಬೇಕು. ಫೈನಲ್ ತನಕ ಸೋಲನ್ನೇ ಕಾಣದೆ ನೀವು ತೋರಿದ ಪ್ರದರ್ಶನಕ್ಕೆ ದೇಶವೇ ಹೆಮ್ಮೆ ಪಟ್ಟಿದೆ. ನೀವು ಚಾಂಪಿಯನ್‌ಗಳಂತೆ ಆಡಿದ್ದೀರಿ. ಹೆಮ್ಮೆಯಿಂದ ತಲೆ ಎತ್ತಿ ನಡೆಯಿರಿ. ನೀವು ಎಂದೆಂದಿಗೂ ಭಾರತೀಯ ಮನಸ್ಸಿನಲ್ಲಿ ವಿಜೇತರೇ. ಭವಿಷ್ಯದಲ್ಲಿ ಹೆಚ್ಚಿನ ಯಶಸ್ಸು ನಿಮಗೆ ಕಾಯುತ್ತಿದೆ. ಇದು ಕಷ್ಟದ ಸಮಯ ಎಂದು ನನಗೆ ಗೊತ್ತು. ಆದರೆ ಉತ್ಸಾಹ ಕಳೆದುಕೊಳ್ಳಬೇಡಿ” ಎಂದು ಹೇಳುವ ಮೂಲಕ ಕಪಿಲ್ ಅವರು ರೋಹಿತ್ ಶರ್ಮ ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.
Who says men don’t cry? They do feel things deeply and have tears when something is so heartbreaking as this. I’m crying too. 💔#RohitSharma𓃵 pic.twitter.com/g1cNfSXdNk
— ruchi kokcha (@ruchikokcha) November 19, 2023
ಫೈನಲ್ಗೆ ಆಹ್ವಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಕಪಿಲ್
ವಿಶ್ವಕಪ್ ಫೈನಲ್ ಪಂದ್ಯದ ವೀಕ್ಷಣೆಗೆ ಆಹ್ವಾನ ನೀಡಿಲ್ಲ ಎಂದು 1983ರಲ್ಲಿ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ (Kapil Dev) ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಎಬಿಪಿ ನ್ಯೂಸ್ ಜತೆ ಮಾತನಾಡುವಾಗ ಕಪಿಲ್ ದೇವ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ‘ನೀವೇಕೆ ವಿಶ್ವಕಪ್ ಫೈನಲ್ ಮ್ಯಾಚ್ ವೀಕ್ಷಿಸಲು ಮೈದಾನಕ್ಕೆ ಹೋಗಿಲ್ಲ’ ಎಂಬ ಪ್ರಶ್ನೆಗೆ, “ಫೈನಲ್ ಪಂದ್ಯದ ವೀಕ್ಷಣೆಗೆ ನನ್ನನ್ನು ಆಹ್ವಾನಿಸಿಲ್ಲ, ಅದಕ್ಕಾಗಿ ನಾನು ಹೋಗಿಲ್ಲ. ನಾನು 1983ರ ವಿಶ್ವಕಪ್ ತಂಡದೊಂದಿಗೆ ಈ ಬಾರಿಯ ಫೈನಲ್ ವೀಕ್ಷಿಸಲು ಬಯಸಿಲ್ಲ. ಆದರೆ, ಈ ಬಾರಿಯ ವಿಶ್ವಕಪ್ ಫೈನಲ್ ಪಂದ್ಯ ದೊಡ್ಡ ಇವೆಂಟ್. ಜನ ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಕೆಲವೊಂದು ಸಲ ಅವರು ಮರೆತುಬಿಡುತ್ತಾರೆ” ಎಂದು ಹೇಳಿದ್ದರು.
ಇದನ್ನೂ ಓದಿ IND vs AUS : ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ
Kapil Dev Not invited to World Cup Finals#KapilDev #IndiaVsAustralia #WorldcupFinal #IndiaVsAustraliaWC2023 #WC2023 pic.twitter.com/zLRDB8ASdd
— Veer Wolf (@wolfbaaz) November 19, 2023
ಡ್ರೆಸ್ಸಿಂಗ್ ರೂಮ್ಗೆ ತೆರಳಿ ಪ್ರಧಾನಿ ಮೋದಿಯಿಂದಲೂ ಸಾಂತ್ವನ
ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಸೋಲು ಕೋಟ್ಯಂತರ ಅಭಿಮಾನಿಗಳ ಹೃದಯ ಚೂರಾಗುವಂತೆ ಮಾಡಿತ್ತು. ಆಟಗಾರರ ಹೃದಯವನ್ನು ಹಿಂಡಿತ್ತು. ತಮ್ಮ ನೋವನ್ನು ಹೇಳಿಕೊಳ್ಳಲಾಗದೆ, ಸಹಿಸಲೂ ಆಗದೆ ಆಟಗಾರರು ಡ್ರೆಸ್ಸಿಂಗ್ ಕೋಣೆಯೊಳಗೆ ತಳಮಳಿಸಿದ್ದರು.
ಸೋತ ಭಾರತ ತಂಡದ ಪರಿಸ್ಥಿತಿ ಹೇಗಿರಬಹುದು ಎಂಬ ಅರಿವಿದ್ದೇ ಪ್ರಧಾನಿ ನರೇಂದ್ರ ಮೋದಿ(pm narendra modi) ಡ್ರೆಸ್ಸಿಂಗ್ ಕೊಠಡಿಯನ್ನು ಪ್ರವೇಶಿಸಿ ಉದ್ವೇಗಕ್ಕೊಳಗಾಗಿದ್ದ ವೇಗಿ ಮೊಹಮ್ಮದ್ ಶಮಿಯನ್ನು ಎದೆಗೊರಗಿಸಿಕೊಂಡು ಸಾಂತ್ವನ ಹೇಳಿದ್ದರು. ಅಲ್ಲದೆ ಎಲ್ಲ ಆಟಗಾರರನ್ನು ತಬ್ಬಿಕೊಂಡು ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದರ ಫೋಟೊಗಳು ಸೋಮವಾರ ವೈರಲ್ ಆಗಿತ್ತು. ಇದೀಗ ಮೋದಿ ಅವರು ಡ್ರಸ್ಸಿಂಗ್ ರೂಮ್ನಲ್ಲಿ ಆಟಗಾರರನ್ನು ಸಂತೈಸುವ ವಿಡಿಯೊವನ್ನು ಮೋದಿ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ World Cup 2027: ಮುಂದಿನ ವಿಶ್ವಕಪ್ ಯಾವಾಗ, ಎಲ್ಲಿ ನಡೆಯಲಿದೆ ಗೊತ್ತೇ?
ವಿಶೇಷ ಆಹ್ವಾನ
ಪ್ರಧಾನಿ ಮೋದಿ ಅವರು ಡ್ರೆಸ್ಸಿಂಗ್ ರೋಮ್ನಲ್ಲಿ ಎಲ್ಲ ಆಟಗಾರರಿಗೂ, ಕೋಚ್ ದ್ರಾವಿಡ್ ಅವರಿಗೂ ಸಮಾಧಾನ ಮಾಡುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ಗೃಹ ಸಚಿವ ಅಮಿತ್ ಶಾ ಕೂಡ ಜತೆಗಿದ್ದರು. ಎಲ್ಲ ಆಟಗಾರರನ್ನು ಕೂಡ ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಬರುವಂತೆ ವಿಶೇಷ ಆಹ್ವಾನ ನೀಡಿದ್ದಾರೆ.