ತಲೆ ಎತ್ತಿ ಓಡಾಡಿ; ರೋಹಿತ್​ಗೆ ಧೈರ್ಯ ತುಂಬಿದ ಚೊಚ್ಚಲ ವಿಶ್ವಕಪ್​ ಹೀರೊ ಕಪಿಲ್​ ದೇವ್​ Vistara News

ಕ್ರಿಕೆಟ್

ತಲೆ ಎತ್ತಿ ಓಡಾಡಿ; ರೋಹಿತ್​ಗೆ ಧೈರ್ಯ ತುಂಬಿದ ಚೊಚ್ಚಲ ವಿಶ್ವಕಪ್​ ಹೀರೊ ಕಪಿಲ್​ ದೇವ್​

ಕಪ್​ ಗೆಲ್ಲದಿದ್ದರೂ ದೇಶ ನಿಮ್ಮನ್ನು ನೋಡಿ ಹೆಮ್ಮೆ ಪಡುತ್ತಿದೆ ನೀವು ತಲೆ ಎತ್ತಿ ಓಡಾಡಬೇಕು ಎಂದು ರೋಹಿತ್​ ಶರ್ಮ ಅವರಿಗೆ ಮಾಜಿ ನಾಯಕ ಕಪಿಲ್ ದೇವ್(kapil dev) ಧೈರ್ಯ ತುಂಬಿದ್ದಾರೆ.

VISTARANEWS.COM


on

rohit sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ(ICC World Cup 2023) ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆ ರೋಹಿತ್​ ಶರ್ಮ(Rohit Sharma) ಅವರು ಕಪ್​ ಗೆಲ್ಲದಿದ್ದರೂ ದೇಶ ನಿಮ್ಮನ್ನು ನೋಡಿ ಹೆಮ್ಮೆ ಪಡುತ್ತಿದೆ ನೀವು ತಲೆ ಎತ್ತಿ ಓಡಾಡಬೇಕು ಎಂದು 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್(kapil dev) ಧೈರ್ಯ ತುಂಬಿದ್ದಾರೆ.

“ರೋಹಿತ್​ ಶರ್ಮ ಅವರು ತಂಡವನ್ನು ಮುನ್ನಡೆಸಿದ ರೀತಿ ನಿಜಕ್ಕೂ ಮೆಚ್ಚಲೇ ಬೇಕು. ಫೈನಲ್​ ತನಕ ಸೋಲನ್ನೇ ಕಾಣದೆ ನೀವು ತೋರಿದ ಪ್ರದರ್ಶನಕ್ಕೆ ದೇಶವೇ ಹೆಮ್ಮೆ ಪಟ್ಟಿದೆ. ನೀವು ಚಾಂಪಿಯನ್‌ಗಳಂತೆ ಆಡಿದ್ದೀರಿ. ಹೆಮ್ಮೆಯಿಂದ ತಲೆ ಎತ್ತಿ ನಡೆಯಿರಿ. ನೀವು ಎಂದೆಂದಿಗೂ ಭಾರತೀಯ ಮನಸ್ಸಿನಲ್ಲಿ ವಿಜೇತರೇ. ಭವಿಷ್ಯದಲ್ಲಿ ಹೆಚ್ಚಿನ ಯಶಸ್ಸು ನಿಮಗೆ ಕಾಯುತ್ತಿದೆ. ಇದು ಕಷ್ಟದ ಸಮಯ ಎಂದು ನನಗೆ ಗೊತ್ತು. ಆದರೆ ಉತ್ಸಾಹ ಕಳೆದುಕೊಳ್ಳಬೇಡಿ” ಎಂದು ಹೇಳುವ ಮೂಲಕ ಕಪಿಲ್​ ಅವರು ರೋಹಿತ್​ ಶರ್ಮ ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.

ಫೈನಲ್​ಗೆ ಆಹ್ವಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಕಪಿಲ್​

ವಿಶ್ವಕಪ್‌ ಫೈನಲ್‌ ಪಂದ್ಯದ ವೀಕ್ಷಣೆಗೆ ಆಹ್ವಾನ ನೀಡಿಲ್ಲ ಎಂದು 1983ರಲ್ಲಿ ವಿಶ್ವಕಪ್‌ ವಿಜೇತ ತಂಡದ ನಾಯಕ ಕಪಿಲ್‌ ದೇವ್‌ (Kapil Dev) ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಎಬಿಪಿ ನ್ಯೂಸ್‌ ಜತೆ ಮಾತನಾಡುವಾಗ ಕಪಿಲ್‌ ದೇವ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ‘ನೀವೇಕೆ ವಿಶ್ವಕಪ್‌ ಫೈನಲ್‌ ಮ್ಯಾಚ್‌ ವೀಕ್ಷಿಸಲು ಮೈದಾನಕ್ಕೆ ಹೋಗಿಲ್ಲ’ ಎಂಬ ಪ್ರಶ್ನೆಗೆ, “ಫೈನಲ್‌ ಪಂದ್ಯದ ವೀಕ್ಷಣೆಗೆ ನನ್ನನ್ನು ಆಹ್ವಾನಿಸಿಲ್ಲ, ಅದಕ್ಕಾಗಿ ನಾನು ಹೋಗಿಲ್ಲ. ನಾನು 1983ರ ವಿಶ್ವಕಪ್‌ ತಂಡದೊಂದಿಗೆ ಈ ಬಾರಿಯ ಫೈನಲ್‌ ವೀಕ್ಷಿಸಲು ಬಯಸಿಲ್ಲ. ಆದರೆ, ಈ ಬಾರಿಯ ವಿಶ್ವಕಪ್‌ ಫೈನಲ್‌ ಪಂದ್ಯ ದೊಡ್ಡ ಇವೆಂಟ್.‌ ಜನ ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಕೆಲವೊಂದು ಸಲ ಅವರು ಮರೆತುಬಿಡುತ್ತಾರೆ” ಎಂದು ಹೇಳಿದ್ದರು.

ಇದನ್ನೂ ಓದಿ IND vs AUS : ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ

ಡ್ರೆಸ್ಸಿಂಗ್​ ರೂಮ್​ಗೆ ತೆರಳಿ ಪ್ರಧಾನಿ ಮೋದಿಯಿಂದಲೂ ಸಾಂತ್ವನ

ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಸೋಲು ಕೋಟ್ಯಂತರ ಅಭಿಮಾನಿಗಳ ಹೃದಯ ಚೂರಾಗುವಂತೆ ಮಾಡಿತ್ತು. ಆಟಗಾರರ ಹೃದಯವನ್ನು ಹಿಂಡಿತ್ತು. ತಮ್ಮ ನೋವನ್ನು ಹೇಳಿಕೊಳ್ಳಲಾಗದೆ, ಸಹಿಸಲೂ ಆಗದೆ ಆಟಗಾರರು ಡ್ರೆಸ್ಸಿಂಗ್‌ ಕೋಣೆಯೊಳಗೆ ತಳಮಳಿಸಿದ್ದರು.
ಸೋತ ಭಾರತ ತಂಡದ ಪರಿಸ್ಥಿತಿ ಹೇಗಿರಬಹುದು ಎಂಬ ಅರಿವಿದ್ದೇ ಪ್ರಧಾನಿ ನರೇಂದ್ರ ಮೋದಿ(pm narendra modi) ಡ್ರೆಸ್ಸಿಂಗ್‌ ಕೊಠಡಿಯನ್ನು ಪ್ರವೇಶಿಸಿ ಉದ್ವೇಗಕ್ಕೊಳಗಾಗಿದ್ದ ವೇಗಿ ಮೊಹಮ್ಮದ್‌ ಶಮಿಯನ್ನು ಎದೆಗೊರಗಿಸಿಕೊಂಡು ಸಾಂತ್ವನ ಹೇಳಿದ್ದರು. ಅಲ್ಲದೆ ಎಲ್ಲ ಆಟಗಾರರನ್ನು ತಬ್ಬಿಕೊಂಡು ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದರ ಫೋಟೊಗಳು ಸೋಮವಾರ ವೈರಲ್​ ಆಗಿತ್ತು. ಇದೀಗ ಮೋದಿ ಅವರು ಡ್ರಸ್ಸಿಂಗ್​ ರೂಮ್​ನಲ್ಲಿ ಆಟಗಾರರನ್ನು ಸಂತೈಸುವ ವಿಡಿಯೊವನ್ನು ಮೋದಿ ಅವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ World Cup 2027: ಮುಂದಿನ ವಿಶ್ವಕಪ್ ಯಾವಾಗ, ಎಲ್ಲಿ ನಡೆಯಲಿದೆ ಗೊತ್ತೇ?

ವಿಶೇಷ ಆಹ್ವಾನ

ಪ್ರಧಾನಿ ಮೋದಿ ಅವರು ಡ್ರೆಸ್ಸಿಂಗ್​ ರೋಮ್​ನಲ್ಲಿ ಎಲ್ಲ ಆಟಗಾರರಿಗೂ, ಕೋಚ್​ ದ್ರಾವಿಡ್​ ಅವರಿಗೂ ಸಮಾಧಾನ ಮಾಡುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ಗೃಹ ಸಚಿವ ಅಮಿತ್​ ಶಾ ಕೂಡ ಜತೆಗಿದ್ದರು. ಎಲ್ಲ ಆಟಗಾರರನ್ನು ಕೂಡ ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಬರುವಂತೆ ವಿಶೇಷ ಆಹ್ವಾನ ನೀಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

ಅಂಡರ್​-19 ಏಷ್ಯಾಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಬದ್ದ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಡಿ.10 ರಂದು ನಡೆಯಲಿದೆ.

VISTARANEWS.COM


on

U-19 Asia Cup IND vs PAK
Koo

ದುಬೈ: ದುಬೈ (Dubai) ಆತಿಥ್ಯನಲ್ಲಿ ನಡೆಯುವ ಪುರುಷರ ಅಂಡರ್​-19 ಏಷ್ಯಾಕಪ್ (ACC Men’s U19 Asia Cup 2023) ಟೂರ್ನಿಯ ಪಂದ್ಯಾವಳಿಗಳು ಡಿಸೆಂಬರ್ 8 ರಿಂದ ಆರಂಭಗೊಳ್ಳಲಿದೆ. ಟೂರ್ನಿ ಡಿಸೆಂಬರ್ 17 ರವರೆಗೆ ನಡೆಯಲಿದೆ. ಡಿ.8ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಭಾರತ ತಂಡ ಅಫಘಾನಿಸ್ತಾನ​ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ. ಸಾಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಡಿ.10 ರಂದು ಕಣಕಿಳಿಯಲಿದೆ.

15 ಪಂದ್ಯಗಳು

50-ಓವರ್‌ಗಳ ಸ್ಪರ್ಧೆಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಇದರಲ್ಲಿ ಎರಡು ಸೆಮಿಫೈನಲ್ ಮತ್ತು ಒಂದು ಫೈನಲ್ ಪಂದ್ಯ ಕೂಡ ಸೇರಿದೆ. ಫೈನಲ್ ಪಂದ್ಯ ಡಿಸೆಂಬರ್ 17 ರಂದು ನಡೆಯಲ್ಲಿದೆ. ಈ ಟೂರ್ನಿಯ ಪಂದ್ಯಗಳು ಐಸಿಸಿ ಅಕಾಡೆಮಿ ಓವಲ್ ಸೇರಿದಂತೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Cricket Stadium) ನಡೆಯಲಿವೆ. ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸಣಸಾಡಲಿವೆ.

ತಂಡಗಳು

ಕೂಟದಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಅವುಗಳೆಂದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಜಪಾನ್, ಯುಎಇ
ಅಫಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ. ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಹಾಲಿ ಚಾಂಪಿಯನ್ ಭಾರತ, ನೇಪಾಳ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಜಪಾನ್ ಮತ್ತು ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಸ್ಥಾನ ಪಡೆದಿವೆ.

ಇದನ್ನೂ ಓದಿ ACC Under-19 Asia Cup : ಜೂನಿಯರ್​ಗಳ ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

ವೇಳಾಪಟ್ಟಿ

ಡಿಸೆಂಬರ್ 8 – ಭಾರತ vs ಅಫ್ಘಾನಿಸ್ತಾನ – ICC ಅಕಾಡೆಮಿ ಓವಲ್ 1

ಡಿಸೆಂಬರ್ 8 – ಪಾಕಿಸ್ತಾನ vs ನೇಪಾಳ – ICC ಅಕಾಡೆಮಿ ಓವಲ್ 2

ಡಿಸೆಂಬರ್ 9 – ಬಾಂಗ್ಲಾದೇಶ vs ಯುಎಇ – ICC ಅಕಾಡೆಮಿ ಓವಲ್ 1

ಡಿಸೆಂಬರ್ 9 – ಶ್ರೀಲಂಕಾ vs ಜಪಾನ್ – ICC ಅಕಾಡೆಮಿ ಓವಲ್ 2

ಡಿಸೆಂಬರ್ 10 – ಭಾರತ vs ಪಾಕಿಸ್ತಾನ – ICC ಅಕಾಡೆಮಿ ಓವಲ್ 1

ಡಿಸೆಂಬರ್ 10 – ಅಫ್ಘಾನಿಸ್ತಾನ vs ನೇಪಾಳ – ICC ಅಕಾಡೆಮಿ ಓವಲ್ 2

ಡಿಸೆಂಬರ್ 11 – ಶ್ರೀಲಂಕಾ vs ಯುಎಇ – ICC ಅಕಾಡೆಮಿ ಓವಲ್ 1

ಡಿಸೆಂಬರ್ 11 – ಬಾಂಗ್ಲಾದೇಶ vs ಜಪಾನ್ – ICC ಅಕಾಡೆಮಿ ಓವಲ್ 2

ಡಿಸೆಂಬರ್ 12 – ಪಾಕಿಸ್ತಾನ vs ಅಫ್ಘಾನಿಸ್ತಾನ – ICC ಅಕಾಡೆಮಿ ಓವಲ್ 1

ಡಿಸೆಂಬರ್ 12 – ಭಾರತ vs ನೇಪಾಳ – ICC ಅಕಾಡೆಮಿ ಓವಲ್ 2

ಡಿಸೆಂಬರ್ 13 – ಬಾಂಗ್ಲಾದೇಶ vs ಶ್ರೀಲಂಕಾ – ICC ಅಕಾಡೆಮಿ ಓವಲ್ 1

ಡಿಸೆಂಬರ್ 13 – ಯುಎಇ vs ಜಪಾನ್ – ಐಸಿಸಿ ಅಕಾಡೆಮಿ ಓವಲ್ 2

ಡಿಸೆಂಬರ್ 15 – ಸೆಮಿಫೈನಲ್ 1 – ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ

ಡಿಸೆಂಬರ್ 15 – ಸೆಮಿ-ಫೈನಲ್ 2 – ICC ಅಕಾಡೆಮಿ ಓವಲ್ 1

ಡಿಸೆಂಬರ್ 17 – ಫೈನಲ್ – ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ

ಭಾರತ ಅಂಡರ್-19 ತಂಡ

ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಉದಯ್ ಸಹರಾನ್ (ನಾಯಕ), ಅರ್ವೆಲ್ಲಿ ಅವನೀಶ್ ರಾವ್ (ವಿಕೆಟ್​ ಕೀಪರ್​), ಸೌಮಿ ಕುಮಾರ್ ಪಾಂಡೆ (ಉಪನಾಯಕ), ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್ (ವಿಕೆಟ್ ಕೀಪರ್), ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.

ಟ್ರಾವೆಲಿಂಗ್ ಮೀಸಲು ಆಟಗಾರರು: ಪ್ರೇಮ್ ದಿಯೋಕರ್, ಅನ್ಶ್ ಗೋಸಾಯಿ, ಎಂಡಿ ಅಮನ್

ಮೀಸಲು ಆಟಗಾರರು: ದಿಗ್ವಿಜಯ್ ಪಾಟೀಲ್, ಜಯಂತ್ ಗೋಯತ್, ಪಿ.ವಿಘ್ನೇಶ್, ಕಿರಣ್ ಚೋರ್ಮಾಲೆ

Continue Reading

ಕ್ರಿಕೆಟ್

ಕಿಂಗ್​ ಕೊಹ್ಲಿ ಕೈಬಿಟ್ಟ ಬಿಸಿಸಿಐ; ಟಿ20 ವಿಶ್ವಕಪ್​ಗೆ ನೂತನ ಆಟಗಾರನ ಆಯ್ಕೆ!

ವಿರಾಟ್​ ಕೊಹ್ಲಿ ಇದುವರೆಗೆ ಭಾರತ ಪರ 115 ಟಿ20 ಪಂದ್ಯಗಳನ್ನು ಆಡಿ 4008 ರನ್‌ ಬಾರಿಸಿದ್ದಾರೆ. 122 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 1 ಶತಕ ಮತ್ತು 37 ಅರ್ಧಶತಕ ಬಾರಿಸಿದ್ದಾರೆ.

VISTARANEWS.COM


on

Virat Kohli
Koo

ಮುಂಬಯಿ: ವಿರಾಟ್​ ಕೊಹ್ಲಿ(Virat Kohli) ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ. ವಿಶ್ವದ ಅನೇಕ ದಿಗ್ಗಜ ಆಟಗಾರರ ಸಾಧನೆಗಳನ್ನು ಮುರಿದಿರುವ ಅವರಿಗೆ ಕಿಂಗ್ ಕೊಹ್ಲಿ​ ಎಂಬ ಪಟ್ಟ ನೀಡಲಾಗಿದೆ. ಆದರೆ ಇದೀಗ ಅವರ ಸ್ಥಾನಕ್ಕೆ ಬೇರೊಬ್ಬ ಉತ್ತರಾಧಿಕಾರಿಯನ್ನು ನೇಮಿಸಲು ಬಿಸಿಸಿಐ(BCCI) ಮುಂದಾಗಿದೆ.

ಹೌದು, ಮುಂದಿನ ವರ್ಷ ವೆಸ್ಟ್​ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ​ ನಡೆಯುವ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿಗೆ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ. ಅವರ ಸ್ಥಾನಕ್ಕೆ ಬಿಸಿಸಿಐ ಈಗಾಗಲೇ ಯುವ ಆಟಗಾರನನ್ನು ಆಯ್ಕೆ ಮಾಡಿದ್ದು ಪ್ರಯೋಗ ನಡೆಸುತ್ತಿದೆ. ಕೊಹ್ಲಿ ಸ್ಥಾನಕ್ಕೆ ಬಿಸಿಸಿಐ ಆಯ್ಕೆ ಮಾಡಿರುವ ಆಟಗಾರನೆಂದರೆ ಅದು ಇಶಾನ್​ ಕಿಶನ್​(ishan kishan).

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಭಾರತ ತಂಡ ಸೋಲು ಕಂಡ ಬಳಿಕ ಇದುವರೆಗೂ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿಲ್ಲ. ಇವರ ಜತೆಗೆ ಹಿರಿಯ ಆಟಗಾರ ರೋಹಿತ್​ ಶರ್ಮ, ಶಮಿ, ರಾಹುಲ್​ ಸೇರಿ ಇನ್ನೂ ಕೆಲ ಆಟಗಾರರನ್ನು ಬಿಸಿಸಿಐ ಟಿ20ಯಿಂದ ದೂರ ಇರಿಸಿ ಯುವ ಆಟಗಾರರರಿಗೆ ಮಣೆ ಹಾಕುತ್ತಲೇ ಬಂದಿದೆ. ಇದೀಗ ಮುಂದಿನ ವರ್ಷ ನಡೆಯುವ ಟಿ20ಯಲ್ಲಿಯೂ ಹಿರಿಯ ಆಟಗಾರಿಗೆ ಅವಕಾಶ ಸಿಗುವುದು ಕಷ್ಟ ಎನ್ನಲಾಗಿದೆ. ಇದೇ ಕಾರಣಕ್ಕೆ ಬಿಸಿಸಿಐ ಈ ಯುವ ಆಟಗಾರರನ್ನು ಹಿರಿಯ ಆಟಗಾರರ ಕ್ರಮಾಂಕದಲ್ಲಿ ಆಡಿಸುವ ಮೂಲಕ ಬಲಿಷ್ಠ ತಂಡವನ್ನು ರೂಪುಗೊಳಿಸಲು ಮುಂದಾಗಿದೆ.

ಕೊಹ್ಲಿ ಸ್ಥಾನಕ್ಕೆ ಇಶಾನ್​

ಆರಂಭಿಕ ಆಟಗಾರನಾಗಿರುವ ಇಶಾನ್​ ಕಿಶನ್​ ಅವರನ್ನು ಕಳೆದ ಆಸೀಸ್​ ವಿರುದ್ಧದ ಟಿ20 ಸರಣಿಯಲ್ಲಿ ದ್ವಿತೀಯ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಇಲ್ಲಿ ಅವರು ಕ್ಲಿಕ್​ ಕೂಡ ಆಗಿದ್ದರೂ. ಇದು ಬಿಸಿಸಿಐ ನಡೆಸಿದ ಪ್ರಯೋಗ ಎನ್ನುವುದು ಈಗ ತಿಳಿದುಬಂದಿದೆ. ಬಿಸಿಸಿಐ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ಕೊಹ್ಲಿ ಅವರ ಟಿ20 ಕ್ರಿಕೆಟ್ ಜರ್ನಿ ಬಹುತೇಕ ಅಂತ್ಯ ಕಂಡಿದ್ದು ಅವರ ಸ್ಥಾನಕ್ಕೆ ಇಶಾನ್​ ಕಿಶನ್​ ಅವರನ್ನು ರೆಡಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ Ram Mandir: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿರಾಟ್​ ಕೊಹ್ಲಿ, ಸಚಿನ್​​ಗೆ ಆಹ್ವಾನ

ಇಶಾನ್​ ಕಿಶನ್ 3ನೇ ಸ್ಥಾನಕ್ಕೆ ಒಪ್ಪಿಗೆ ಪಡೆದರೆ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಉಳಿದ ಸ್ಥಾನಗಳನ್ನು ತುಂಬುವ ಸಾಧ್ಯತೆಯಿದೆ. ಹೀಗಾಗಿ, ಕೊಹ್ಲಿಗೆ ಯಾವುದೇ ಸ್ಥಾನವಿಲ್ಲ. ಆದಾಗ್ಯೂ, ಕೊಹ್ಲಿಯ ಟಿ20 ಕ್ರಿಕೆಟ್​ ಯೋಜನೆಗಳ ಬಗ್ಗೆ ಬಿಸಿಸಿಐ ಮತ್ತು ಹಿರಿಯ ಸದಸ್ಯರು ಶೀಘ್ರದಲ್ಲೇ ಚರ್ಚೆ ನಡೆಸಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೊಹ್ಲಿಯ ಟಿ20 ಸಾಧನೆ

ವಿರಾಟ್​ ಕೊಹ್ಲಿ ಇದುವರೆಗೆ ಭಾರತ ಪರ 115 ಟಿ20 ಪಂದ್ಯಗಳನ್ನು ಆಡಿ 4008 ರನ್‌ ಬಾರಿಸಿದ್ದಾರೆ. 122 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 1 ಶತಕ ಮತ್ತು 37 ಅರ್ಧಶತಕ ಬಾರಿಸಿದ್ದಾರೆ. 4 ವಿಕೆಟ್​ ಕೂಡ ಕೆಡವಿದ್ದಾರೆ. ಇತ್ತೀಚೆಗೆ ಮುಕ್ತಾಯ ಕಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿದ ಕೊಹ್ಲಿ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಾಣುವ ಮೂಲಕ ಭಾರತ ಕಪ್​ ಗೆಲ್ಲುವಲ್ಲಿ ವಿಫಲವಾಗಿತ್ತು.

Continue Reading

T20 ವಿಶ್ವಕಪ್

T20 World Cup 2024:​ ನೂತನ ಲೋಗೋ ವಿನ್ಯಾಸಕ್ಕೆ ಫಿದಾ ಆದ ಕ್ರಿಕೆಟ್​ ಅಭಿಮಾನಿಗಳು

ಮುಂದಿನ ವರ್ಷ ನಡೆಯುವ ಪುರುಷರ ಮತ್ತು ಮಹಿಳೆಯರ ಟಿ20 ವಿಶ್ವಕಪ್​(T20 World Cup 2024) ಟೂರ್ನಿಯ ಹೊಸ ಲೋಗೋವನ್ನು ಐಸಿಸಿ ಬಿಡುಗಡೆ ಮಾಡಿದೆ.

VISTARANEWS.COM


on

2024 t20 world cup
Koo

ದುಬೈ: 2024ರಲ್ಲಿ ನಡೆಯುವ ಪ್ರತಿಷ್ಠಿತ ಪುರುಷರ ಮತ್ತು ಮಹಿಳೆಯರ ಟಿ20 ವಿಶ್ವಕಪ್​(T20 World Cup 2024) ಟೂರ್ನಿಯ ಹೊಸ ಲೋಗೋವನ್ನು ಐಸಿಸಿ ಗುರುವಾರ ಬಿಡುಗಡೆ ಮಾಡಿದೆ. ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಐಸಿಸಿ ವಿಡಿಯೊವೊಂದನ್ನು ಹಂಚಿಕೊಳ್ಳುವ ಮೂಲಕ ಹೊಸ ಲೋಗೋ ಮತ್ತು ಇದರ ಉದ್ದೇಶವನ್ನು ತಿಳಿಸಿದೆ.

ಸದ್ಯದ ಮಾಹಿತಿ ಪ್ರಕಾರ ಪುರುಷರ 9ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳು ಜೂನ್ 4 ರಿಂದ 30ರ ವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ ಎನ್ನಲಾಗಿದೆ. ಮಹಿಳಾ ಟಿ20 ವಿಶ್ವಕಪ್ ಬಾಂಗ್ಲಾದೇಶದ ಆತಿಥ್ಯದಲ್ಲಿ ನಡೆಸಲಾಗುತ್ತದೆ. ಆದರೆ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯದ ವಿಂಡೀಸ್​ ಈ ಬಾರಿ ಟೂರ್ನಿಯ ಆತಿಥ್ಯ ವಹಿಸಿಕೊಂಡ ಕಾರಣದಿಂದ ಪಂದ್ಯಾವಳಿಯಲ್ಲಿ ಸ್ಥಾನಪಡೆದಿದೆ.

ಹೊಸ ಲೋಗೋದ ಸಂದೇಶವೇನು?

ಹೊಸ ಲೋಗೋ ಹಿಂದಿನ ಉದ್ದೇಶವನ್ನು ಐಸಿಸಿ ವಿಡಿಯೊ ಮುಲಕ ತಿಳಿಸಿದ್ದು, ಟಿ20 ಕ್ರಿಕೆಟ್‌ನ ಶಕ್ತಿಯನ್ನು ಪ್ರತಿಬಿಂಬಿಸುವ ಮೂಲಕ ಬ್ಯಾಟ್, ಬಾಲ್ ಮತ್ತು ಶಕ್ತಿಯ ಸೃಜನಶೀಲ ಮಿಶ್ರಣವಾಗಿರುವ ಸಂಕೇತ ಎಂದು ಐಸಿಸಿ ಹೇಳಿದೆ. ಟಿ20 ಸ್ವರೂಪದಲ್ಲಿ ವೇಗವಾಗಿ ಬದಲಾಗುತ್ತಿರುವ ಆಟವನ್ನು ಲೋಗೋ ಪ್ರತಿಬಿಂಬಿಸುವಂತಿದೆ. ಟೂರ್ನಿಯ ಆತಿಥೇಯ ರಾಷ್ಟ್ರದ ಟೆಕಶ್ಚರ್ ಮತ್ತು ಪ್ಯಾಟರ್ನ್‌ ಒಳಗೊಂಡಿದೆ. ಐಸಿಸಿ ತನ್ನ ಟ್ವಿಟರ್​ನಲ್ಲಿ ಬ್ಯಾಟ್​,ಬಾಲ್​ ಮತ್ತು ಎನರ್ಜಿ ಎಂದು ಬರೆದುಕೊಂಡು ಈ ಲೋಗೋವನ್ನು ಪ್ರಕಟಿಸಿದೆ.

ಇದನ್ನೂ ಓದಿ ICC T20 World Cup 2024 : ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಉಗಾಂಡ ತಂಡ

ಸ್ವರೂಪ ಬದಲು

ಹಿಂದಿನ ಆವೃತ್ತಿಗಳಿಗಿಂತ ಈ ಬಾರಿ ಟೂರ್ನಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ಸೂಪರ್ 12 ತಂಡಗಳು ಸೇರಿ 20 ತಂಡಗಳನ್ನು ತಲಾ 5 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿವೆ. ಬಳಿಕ ಫೈನಲ್ ನಡೆಯಲಿದೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಆದರೆ 2024ರ ಟೂರ್ನಿಯಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ.

ಟಿ20 ವಿಶ್ವಕಪ್ 2024 ನಡೆಯುವ ಸ್ಥಳಗಳು

  • ಆಂಟಿಗುವಾ ಮತ್ತು ಬಾರ್ಬುಡಾ
  • ಬಾರ್ಬಡೋಸ್
  • ಡೊಮಿನಿಕಾ (ಹೊರತೆಗೆಯಲಾಗಿದೆ)
  • ಗಯಾನಾ
  • ಸೇಂಟ್ ಲೂಸಿಯಾ
  • ಟ್ರಿನಿಡಾಡ್ ಮತ್ತು ಟೊಬಾಗೊ
  • ಸೇಂಟ್ ವಿನ್ಸೆಂಟ್ & ದಿ ಗ್ರೆನಡೀನ್ಸ್
  • ಡಲ್ಲಾಸ್
  • ಫ್ಲೋರಿಡಾ
  • ನ್ಯೂಯಾರ್ಕ್

ಭಾರತ-ಪಾಕ್ ಪಂದ್ಯಕ್ಕೂ ಸಿದ್ಧವಾಗಿಲ್ಲ ಕ್ರೀಡಾಂಗಣ

ಇನ್ನು ಏಳು ತಿಂಗಳು ಬಾಕಿ ಇರುವಾಗ ಭಾರತ ಮತ್ತು ಪಾಕ್ ಪಂದ್ಯಕ್ಕೆ ಇನ್ನೂ ಸ್ಥಳ ಸಿದ್ಧಗೊಂಡಿಲ್ಲ . ಬ್ರಾಂಕ್ಸ್ನ ವ್ಯಾನ್ ಕಾರ್ಟ್ಲ್ಯಾಂಡ್ ಪಾರ್ಕ್ ಮೂಲ ಸ್ಥಳವಾಗಿತ್ತು. ಐಸಿಸಿ ಮತ್ತು ಸ್ಥಳೀಯ ಸಂಘಟನಾ ಸಮಿತಿಯು ಸ್ಥಳೀಯರಿಂದ ವಿರೋಧವನ್ನು ಎದುರಿಸಿತು. ಆದ್ದರಿಂದ, ನಸ್ಸಾವು ಕೌಂಟಿಯ ಐಸೆನ್ಹೋವರ್ ಪಾರ್ಕ್ ಅನ್ನು ಹೊಸ ಸ್ಥಳವಾಗಿ ಆಯ್ಕೆ ಮಾಡಲಾಯಿತು. ಆದಾಗ್ಯೂ, ಇನ್ನೂ ಯಾವುದೇ ಕ್ರಿಕೆಟ್ ಕ್ರೀಡಾಂಗಣ ಸಜ್ಜುಗೊಂಡಿಲ್ಲ. ಕೇವಲ ಏಳು ತಿಂಗಳುಗಳು ಮಾತ್ರ ಉಳಿದಿವೆ. ಮುಂಬರುವ ದಿನಗಳಲ್ಲಿ ಕಠಿಣ ಚಳಿಗಾಲವು ಬರುವ ಕಾರಣ ಕ್ರೀಡಾಂಗಣವನ್ನು ಯಾವ ರೀತಿ ಸಜ್ಜು ಮಾಡುತ್ತಾರೆ ಎಂಬ ಕೌತುಕ ಇನ್ನೂ ಉಳಿದಿದೆ.

Continue Reading

ಕ್ರಿಕೆಟ್

ಜಗಳಗಂಟ ಗಂಭೀರ್​ ಕರಾಳ ಮುಖ ತೆರೆದಿಟ್ಟ ಶ್ರೀಶಾಂತ್‌; ವಿಡಿಯೊ ವೈರಲ್​ 

ನೀನೊಬ್ಬ ಫಿಕ್ಸರ್​ ಎಂದು ಪದೇಪದೆ ಹೇಳುವ ಜತೆಗೆ ಅವಾಚ್ಯ ಪದಗಳಿಂದ ಗಂಭೀರ್​ ನಿಂದಿಸಿದ್ದಾರೆ ಎಂದು ಶ್ರೀಶಾಂತ್​ ಲೈವ್​ ವಿಡಿಯೊದಲ್ಲಿ ಹೇಳಿದ್ದಾರೆ.

VISTARANEWS.COM


on

sreesanth and gambhir
Koo

ಸೂರತ್: ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಪಂದ್ಯದಲ್ಲಿ ಮೈದಾನದಲ್ಲೇ ಮಾಜಿ ಟೀಮ್​ ಇಂಡಿಯಾದ ಆಟಗಾರರಾದ ಗೌತಮ್​ ಗಂಭೀರ್(Gautam Gambhir)​ ಮತ್ತು ಎಸ್​.ಶ್ರೀಶಾಂತ್(S. Sreesanth)​ ಅವರು ಕಿತ್ತಾಟ ನಡೆಸಿದ ವಿಡಿಯೊ ಈಗಾಗಲೇ ಎಲ್ಲಡೆ ಭಾರಿ ಸುದ್ದು ಮಾಡುತ್ತಿದೆ. ಇದೀಗ ಈ ಘಟನೆ ನಡೆಯಲು ನಿಜವಾದ ಕಾರಣ ಏನೆಂಬುದನ್ನು ಶ್ರೀಶಾಂತ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಲೈವ್​ ವಿಡಿಯೊ ಮೂಲಕ ರಿವಿಲ್​ ಮಾಡಿದ್ದಾರೆ.

ಸೂರತ್‌ನಲ್ಲಿ ಬುಧವಾರ ರಾತ್ರಿ ನಡೆದ ಇಂಡಿಯಾ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ (LLC 2023- ಎಲ್‌ಎಲ್‌ಸಿ 2023) ಎಲಿಮಿನೇಟರ್ ಪಂದ್ಯದಲ್ಲಿ ಶ್ರೀಶಾಂತ್ ಮತ್ತು ಗೌತಮ್‌ ಗಂಭೀರ್ ನಡುವೆ ಜಗಳ ನಡೆದಿತ್ತು. ಇವರಿಬ್ಬರ ಈ ಜಗಳದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಭಾರಿ ವೈರಲ್​ ಆಗುವುದರ ಜತೆಗೆ ಪರ ಮತ್ತು ವಿರೋಧ ವ್ಯಕ್ತವಾಗಿತ್ತು.

ಎರಡನೇ ಇನ್ನಿಂಗ್ಸ್‌ನಲ್ಲಿ ಕ್ಯಾಪಿಟಲ್ಸ್ ನಾಯಕ ಗಂಭೀರ್, ಶ್ರೀಶಾಂತ್ ಅವರ ಬಾಲ್‌ಗಳಿಗೆ ಸಿಕ್ಸರ್‌ ಹಾಗೂ ಬೌಂಡರಿಗಳ ಮೂಲಕ ಉತ್ತರಿಸಿದರು. ಇದರಿಂದ ಹತಾಶೆಗೀಡಾದ ಶ್ರೀಶಾಂತ್ ಗಂಭೀರ್‌ ಕಡೆಗೆ ತೀಕ್ಷ್ಣವಾಗಿ ನೋಡುತ್ತಾ ಸ್ಲೆಡ್ಜಿಂಗ್‌ ಮಾಡಿದ್ದಾರೆ. ಪ್ರತಿಯಾಗಿ ಗಂಭೀರ್ ಕೂಡ ಏನನ್ನೋ ಗೊಣಗುತ್ತಾ ಶ್ರೀಶಾಂತ್‌ ಅವರನ್ನು ಗುರಾಯಿಸಿದರು. ವಿರಾಮದ ಸಮಯದಲ್ಲಿ ಕೂಡ ಅವರಿಬ್ಬರೂ ಬೈಗುಳ ವಿನಿಮಯ ಮಾಡಿಕೊಂಡಿದ್ದಾರೆ.

ಜಗಳಕ್ಕೆ ಕಾರಣವೇನು?

ಆರಂಭದಲ್ಲಿ ಇದು ಶ್ರೀಶಾಂತ್​ ಮಾಡಿದ ಕಿತಾಪತಿ ಎನ್ನಲಾಗಿತ್ತು. ಇದೇ ಕಾರಣಕ್ಕೆ ಗಂಭೀರ್​ ಅವರು ಕೆರಳಿದ್ದು ಎಂದು ಹೇಳಲಾಗಿತ್ತು. ಆದರೆ ಇದೀಗ ನೈಜ ವಿಚಾರವನ್ನು ಶ್ರೀಶಾಂತ್​ ಬಹಿರಂಗಪಡಿಸಿದ್ದಾರೆ. ಲೈವ್​ ವಿಡಿಯೊ ಮೂಲಕ ಮಾತನಾಡಿದ ಶ್ರೀಶಾಂತ್, ನಾನು ಗಂಭೀರ್​ ಅವರಿಗೆ ಒಂದು ಸಣ್ಣ ಕಟ್ಟ ಪದ ಬಳಸಿಯೂ ಬೈದಿಲ್ಲ. ಈ ವಿಚಾರ ಫೀಲ್ಡ್​ ಅಂಪೈರ್​ಗೂ ತಿಳಿದಿದೆ. ಅವರೇ ನನ್ನನ್ನು ನೋಡಿ ನೀನೊಬ್ಬ ಫಿಕ್ಸರ್​ ಎಂದು ಪದೇಪದೆ ಹೇಳುವ ಮೂಲಕ ನನ್ನನ್ನು ಹೀಯಾಳಿಸಿದರು. ಆಗ ನಾನು ಅವರ ಬಳಿ ಪ್ರಶ್ನೆ ಮಾಡಿ ಏನು ಇನ್ನೊಮ್ಮೆ ಈ ಮಾತನ್ನು ಹೇಳಿ ಎಂದು ಹೇಳುತ್ತ ಅವರ ಬಳಿಗೆ ಬಂದೆ ಈ ವೇಳೆ ಸಹ ಆಟಗಾರರ ತಡೆದರು. ನಾನು ನಿಜವಾಗಿಯೂ ಯಾವುದೇ ಕಿರಿಕ್​ ಮಾಡಿಲ್ಲ” ಎಂದು ಶ್ರೀಶಾಂತ್​ ಈ ವಿಡಿಯೊದಲ್ಲಿ ಹೇಳಿದ್ದಾರೆ.

“ಗಂಭೀರ್​ ನನ್ನನ್ನು ಫೀಕ್ಸರ್​ ಎಂದು ಕರೆಯುವ ಜತೆಗೆ ಇನ್ನೂ ಕೆಲ ಅವಾಚ್ಯ ಪದಗಳಿಂದ ನಿಂದಿಸಿದರು. ನಾನ್ನ ಮೇಲಿದ್ದ ಫಿಕ್ಸಿಂಗ್ ಆರೋಪ ಸುಳ್ಳು ಎನ್ನುವುದು ಈಗಾಗಕಲೇ ಸಾಭೀತಾಗಿದೆ. ನಾನು ನನ್ನ ಕುಟುಂಬದ ಜತೆ ಮಾನ್ಯವಾಗಿ ಜೀವಿಸುವ ವ್ಯಕ್ತಿಯಾಗಿದ್ದೇನೆ” ಎಂದು ಶ್ರೀಶಾಂತ್​ ಹೇಳಿದ್ದಾರೆ.

ಇದನ್ನೂ ಓದಿ Gautam Gambhir: ʼಯಾಕೋ ಗುರಾಯಿಸ್ತೀಯಾ?ʼ ಕ್ರೀಡಾಂಗಣದಲ್ಲಿ ಶ್ರೀಶಾಂತ್-‌ ಗಂಭೀರ್ ಕಿರಿಕ್‌

ಭಾರತ ತಂಡದ ಮಾಜಿ ವೇಗಿ ಶ್ರೀಶಾಂತ್‌, ಐಪಿಎಲ್ ಪಂದ್ಯದ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪಕ್ಕೆ ಗುರಿಯಾದ ಬಳಿಕ ಅಂತಾರಾಷ್ಟ್ರೀಯ, ರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದರು. ಕೆಲವು ವರ್ಷಗಳ ಹಿಂದೆ ನ್ಯಾಯಾಲಯ ಈ ನಿಷೇಧವನ್ನು ತೆಗೆದುಹಾಕಿದ್ದು, ಶ್ರೀಶಾಂತ್ ನಂತರ ವಿವಿಧ ಲೀಗ್‌ಗಳನ್ನು ಆಡುತ್ತಿದ್ದಾರೆ. ಪಂದ್ಯದ ವೇಳೆ ಗಂಭೀರ್ ತನಗೆ ನಿಖರವಾಗಿ ಏನು ಹೇಳಿದರು ಎಂಬುದನ್ನು ಬಹಿರಂಗಪಡಿಸುವುದಾಗಿ ಶ್ರೀಶಾಂತ್‌ ಹೇಳಿದ್ದು, ಈ ಮಾತುಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ನೋವುಂಟು ಮಾಡಿದೆ ಎಂದಿದ್ದಾರೆ.

ಗಂಭೀರ್​ ಅವರು ಸಹ ಆಟಗಾರರೊಂದಿಗೆ ಈ ರೀತಿ ಕಿರಿಕ್​ ಮಾಡುತ್ತಿರುವುದು ಇದೇ ಮೊದಲೇನಲ್ಲ. ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಜತೆ ಹಲವು ಬಾರಿ ಮೈದಾನದಲ್ಲಿ ಇದೇ ರೀತಿಯ ಕಿರಿಕ್​ ಮಾಡಿದ್ದಾರೆ. ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಗಂಭೀರ್​ ಅವರು ನವೀನ್​ ಉಲ್​ ಹಕ್​ ವಿಚಾರವಾಗಿ ಕೊಹ್ಲಿ ಜತೆ ಅನಗತ್ಯವಾಗಿ ಜಗಳವಾಡಿದ್ದರು.

Continue Reading
Advertisement
Krishna Byregowda Central assistance
ಕರ್ನಾಟಕ21 mins ago

Assembly Session : ಕೇಂದ್ರ ಅನುದಾನ ವರ್ಷದಿಂದ ವರ್ಷಕ್ಕೆ ಇಳಿಕೆ; ಪೈಸೆ ಪೈಸೆ ಲೆಕ್ಕ ಕೊಟ್ಟ ಕೃಷ್ಣ ಬೈರೇಗೌಡ

Karnataka Drought
ಕರ್ನಾಟಕ31 mins ago

Karnataka Drought: ಮುಂದಿನ ವಾರ ಡಿಬಿಟಿ ಮೂಲಕ ರೈತರಿಗೆ ಬರ ಪರಿಹಾರ; 2 ಸಾವಿರ ರೂ.ವರೆಗೆ ಜಮೆ

IT raids on liquor traders across Odisha and Jharkhand
ದೇಶ33 mins ago

ತೆರಿಗೆಗಳ್ಳರ ಮೇಲೆ ಐಟಿ ದಾಳಿ; ನೋಟು ಎಣಿಸಿ ಎಣಿಸಿ ಕೌಂಟಿಂಗ್ ಮೆಷಿನ್‌ಗೆ ಸುಸ್ತು!

Attendance Araga Jnanendra UT Khader Araga jnanendra
ಕರ್ನಾಟಕ54 mins ago

Belagavi Winter Session : ನಾವೂ ಟೈಮಿಗೆ ಸರಿಯಾಗಿ ಬಂದಿದ್ದೀವಿ; ಸ್ಪೀಕರ್‌ ಜತೆ ಶಾಸಕರ ಜಗಳ!

Madhu Bangarappa in Belagavi Winter Session
ಕರ್ನಾಟಕ1 hour ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Pressmeet for Demand for construction of bypass road in Yallapur
ಉತ್ತರ ಕನ್ನಡ1 hour ago

Uttara Kannada News: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

Israel
ಪ್ರಮುಖ ಸುದ್ದಿ1 hour ago

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

bengaluru bulls kiccha sudeep
ಕ್ರೀಡೆ1 hour ago

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

self harming by wadi Acc cement Depute Director
ಕರ್ನಾಟಕ2 hours ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

A girl shoots her classmate and herself with shotgun
ವಿದೇಶ2 hours ago

viral video: ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ1 hour ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ2 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ7 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ15 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ23 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌