Site icon Vistara News

INDvAUS : ಉಸ್ಮಾನ್​ ಖ್ವಾಜಾ ಶತಕ, ಮೊದಲ ದಿನ 255 ರನ್​ ಬಾರಿಸಿದ ಆಸ್ಟ್ರೇಲಿಯಾ ತಂಡ

Khwaja century, the Australian team scored 255 runs on the first day

#image_title

ಅಹಮದಾಬಾದ್ : ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್​ ಸರಣಿ ನಾಲ್ಕನೇ ಪಂದ್ಯದಲ್ಲಿ ಪ್ರವಾಸಿ ತಂಡದ ಆರಂಭಿಕ ಬ್ಯಾಟರ್​ ಉಸ್ಮಾನ್​ ಖ್ವಾಜಾ (104 ಬ್ಯಾಟಿಂಗ್​) ಶತಕ ಬಾರಿಸಿದ್ದಾರೆ. ಅವರ ಅಮೋಘ ಇನಿಂಗ್ಸ್​ ನೆರವಿನಿಂದ ಬಲ ಪಡೆದ ಆಸ್ಟ್ರೇಲಿಯಾ ತಂಡ ಪಂದ್ಯದ ಮೊದಲ ದಿನವಾದ ಗುರುವಾರದ ಅಂತ್ಯಕ್ಕೆ 4 ವಿಕೆಟ್​ ನಷ್ಟಕ್ಕೆ 255 ರನ್​ ಗಳಿಸಿದೆ. ಆಲ್​ರೌಂಡರ್ ಕ್ಯಾಮೆರಾನ್​ ಗ್ರೀನ್​ (49) ಅರ್ಧ ಶತಕದ ಹೊಸ್ತಿಲಲ್ಲಿ ಇದ್ದಾರೆ.

ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್​ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್​ ಸ್ಮಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡು ಆಡಿದ ಆಸ್ಡ್ರೇಲಿಯಾದ ಆರಂಭಿಕ ಬ್ಯಾಟರ್​ಗಳಾದ ಟ್ರಾವಿಸ್ ಹೆಡ್​ (32) ಹಾಗೂ ಉಸ್ಮಾನ್​ ಖ್ವಾಜಾ ಮೊದಲ ವಿಕೆಟ್​ಗೆ 61 ರನ್​ ಪೇರಿಸಿದರು. ಆದರೆ, ಟ್ರಾವಿಡ್​ ಹೆಡ್​ ಅವರನ್ನು ರವಿಚಂದ್ರನ್ ಅಶ್ವಿನ್ ತಮ್ಮ ಬಲೆಗೆ ಬೀಳಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ಮರ್ನಸ್ ಲಾಬುಶೇನ್​ 3 ರನ್ ಗಳಿಸುವಷ್ಟರಲ್ಲಿ ಶಮಿ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಹೀಗಾಗಿ ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ ತಂಡ 2 ವಿಕೆಟ್ ನಷ್ಟಕ್ಕೆ 75 ರನ್​ ಬಾರಿಸಿತು.

ಭೋಜನ ವಿರಾಮದ ಬಳಿಕ ನಾಯಕ ಸ್ಟೀವ್ ಸ್ಮಿತ್ (38)​ ದೊಡ್ಡ ಮೊತ್ತ ಪೇರಿಸುವ ಸುಳಿವು ಕೊಟ್ಟರೂ ಜಡೇಜಾ ಎಸೆತಕ್ಕೆ ಕ್ಲೀನ್​​ ಬೌಲ್ಡ್​ ಆಗಿ ನಿರಾಸೆಯಿಂದ ನಡೆದರು. ಆದರೆ, ಖ್ವಾಜಾ ಜತೆ ಮಧ್ಯಮ ಕ್ರಮಾಂಕದಲ್ಲಿ ರನ್​ ಗಳಿಕೆಗೆ ಆದ್ಯತೆ ಕೊಟ್ಟರು ಹಾಗೂ ಚಹಾ ವಿರಾಮದ ತನಕ ಮತ್ತೆ ವಿಕೆಟ್​ ಉದುರದಂತೆ ನೋಡಿಕೊಂಡರು. ಆದರೆ, ಟಿ ಬ್ರೇಕ್​ ಬಳಿಕ ಸ್ಮಿತ್​ ಔಟಾದರು. ಅದಾದ ಬಳಿಕ ಪೀಟರ್​ ಹ್ಯಾಂಡ್ಸ್​ಕಾಂಬ್​ 17 ರನ್​ ಬಾರಿಸಿ ಶಮಿ ಎಸೆತಕ್ಕೆ ಬೌಲ್ಡ್​ ಆದರು.

ಹ್ಯಾಂಡ್ಸ್​ಕಾಂಬ್​ ಔಟಾದ ಬಳಿಕ ಆಡಲು ಬಂದ ಕ್ಯಾಮೆರಾನ್​ ಗ್ರೀನ್​ 64 ಎಸೆತಗಳಲ್ಲಿ 49 ರನ್​ ಬಾರಿಸಿದರು. ಇವರ ಜತೆ ಉತ್ತಮ ಜತೆಯಾಟ ನೀಡಿದ ಉಸ್ಮಾನ್ ಖ್ವಾಜಾ ದಿನದಾಟ ಮುಕ್ತಾಯಕ್ಕೆ ಮೊದಲು ಶತಕ ಬಾರಿಸಿದ ಸಂಭ್ರಮಿಸಿದರು. ಈ ಜೋಡಿ ಐದನೇ ವಿಕೆಟ್​ಗೆ 85 ರನ್​ ಬಾರಿಸಿದೆ.

ಇದನ್ನೂ ಓದಿ : PM Modi at Ahmedabad : ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನರೇಂದ್ರ ಮೋದಿ ಹವಾ, ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಅಭಿಮಾನಿಗಳು

ಭಾರತ ತಂಡದ ಬೌಲಿಂಗ್​ ಪರ ಮೊಹಮ್ಮದ್​ ಶಮಿ 65 ರನ್​ಗಳಿಗೆ 2 ವಿಕೆಟ್​​ ಪಡೆದರೆ, ರವಿಚಂದ್ರನ್ ಅಶ್ವಿನ್​ 57 ರನ್​ಗಳಿಗೆ 1 ವಿಕೆಟ್​ ಪಡೆದರೆ, ರವೀಂದ್ರ ಜಡೇಜಾ 49 ರನ್​ಗಳಿಗೆ 1 ವಿಕೆಟ್​ ಉರುಳಿಸಿದ್ದಾರೆ.

Exit mobile version