Site icon Vistara News

CWG- 2022 | ಬ್ಯಾಡ್ಮಿಂಟನ್‌ನಲ್ಲಿ ಕಿಡಂಬಿ ಶ್ರೀಕಾಂತ್‌ಗೆ ಕಂಚಿನ ಪದಕ

cwg-2022

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಷಟ್ಲರ್ ಕಿಡಂಬಿ ಶ್ರೀಕಾಂತ್‌ ಪುರಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಸಿಂಗಾಪುರದ ಜಿಯಾ ಹೆಂಗ್ ಟೆ ವಿರುದ್ಧ ಜಯ ಸಾಧಿಸಿದ ಕಿಡಂಬಿ ಶ್ರೀಕಾಂತ್ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಭಾನುವಾರ ರಾತ್ರಿ (ಭಾರತೀಯ ಕಾಲಮಾನ) ನಡೆದ ಕಂಚಿನ ಪದಕದ ಪಂದ್ಯದಲ್ಲಿ ಅವರು ಸಿಂಗಾಪುರದ ಸ್ಪರ್ಧಿ ವಿರುದ್ಧ ೨೧-೧೫, ೨೧-೧೮ ಗೇಮ್‌ಗಳಿಂದ ಜಯ ಸಾಧಿಸಿದರು. ಮೊದಲ ಗೇಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಮಾಜಿ ವಿಶ್ವ ಚಾಂಪಿಯನ್‌ ನಂತರದ ಗೇಮ್‌ನಲ್ಲಿ ಎದುರಾಳಿಯಿಂದ ಜೋರು ಪೈಪೋಟಿ ಎದುರಿಸಿದ ಹೊರತಾಗಿಯೂ ಗೆಲುವು ಸಾಧಿಸು ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡರು.

Exit mobile version