Site icon Vistara News

Virat kohli : ಪುಟಾಣಿ ಮಕ್ಕಳೊಂದಿಗೆ ಕೊಹ್ಲಿ ಬರ್ತ್​ಡೇ ಸಂಭ್ರಮ ಹಂಚಿಕೊಂಡ ಕ್ಷಣ ಹೀಗಿತ್ತು

Virat kohli team

ಕೋಲ್ಕೊತಾ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ 37 ನೇ ಪಂದ್ಯವು ಈಡನ್ ಗಾರ್ಡನ್ಸ್​​ನಲ್ಲಿ ನಡೆಯಿತು. ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಿ ಭರ್ಜರಿ ಗೆಲುವು ಸಾಧಿಸಿತು. ವಿಶೇಷವೆಂದರೆ, ಇದು ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರ 35 ನೇ ಹುಟ್ಟುಹಬ್ಬದ ದಿನವಾಗಿತ್ತು. ಅವರು ಇಂದು ಶತಕ ಗಳಿಸಿ ಸಚಿನ್ ತೆಂಡೂಲ್ಕರ್ ಅವರ ನಂಬಲಾಗದ 49 ಒಡಿಐ ಶತಕಗಳ ದಾಖಲೆಯನ್ನು ಸರಿಟ್ಟಿದ್ದರೆ.

ಏತನ್ಮಧ್ಯೆ ಪಂದ್ಯಕ್ಕೆ ಮೊದಲು ಈಡನ್ ಗಾರ್ಡನ್ಸ್​ನಲ್ಲಿ ಸಂಭ್ರಮದ ವಾತಾವರಣವಿತ್ತು. ಕೊಹ್ಲಿಯ ಬರ್ತ್​​ಡೆ ಕಾರಣ ಅದರ ಅಬ್ಬರ ಇನ್ನಷ್ಟು ಜೋರಾಗಿತ್ತು. ಹೀಗಾಗಿ ಪಂದ್ಯದ ಮೊದಲು ಪುಟಾಣಿ ಮಕ್ಕಳು ವಿರಾಟ್ ಸುತ್ತಲೂ ಜಮಾಯಿಸಿದರು. ತಮ್ಮ ಆತ್ಮೀಯ ಶುಭಾಶಯಗಳನ್ನು ಹಂಚಿದರು. ಕ್ರಿಕೆಟ್ ಐಕಾನ್ ಅವರೊಂದಿಗೆ ಕ್ಷಣಗಳನ್ನು ಹಂಚಿಕೊಂಡರು.

ಡಾನ್ಸ್ ಮಾಡಿದ ಕೊಹ್ಲಿ

ಇಲ್ಲಿನ ಈಡನ್ ಗಾರ್ಡನ್ಸ್​​ನಲ್ಲಿ ನಡೆದ ಏಕದಿನ ವಿಶ್ವಕಪ್ 2023 ರ 37ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 49ನೇ ಏಕದಿನ ಶತಕವನ್ನು ಗಳಿಸುವ ಮೂಲಕ ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ತಮ್ಮ 35 ನೇ ಹುಟ್ಟುಹಬ್ಬವನ್ನು ಭವ್ಯವಾಗಿ ಆಚರಿಸಿದರು. ಕೊಹ್ಲಿ 101* (121) ಅವರ ಅದ್ಭುತ ಇನ್ನಿಂಗ್ಸ್ ನಿಂದಾಗಿ ತಂಡವು ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು. ತಮ್ಮ ಶತಕದೊಂದಿಗೆ, ದೆಹಲಿ ಮೂಲದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಏಕದಿನ ಶತಕಗಳ (49) ವಿಶ್ವ ದಾಖಲೆಯನ್ನು ಸರಿಗಟ್ಟಿದರು.

ಮೊದಲ ಇನ್ನಿಂಗ್ಸ್​ನಲ್ಲಿ ಇತಿಹಾಸ ಸೃಷ್ಟಿಸಿದ ನಂತರ ಸ್ಟಾರ್ ಬ್ಯಾಟರ್​ ಎರಡನೇ ಇನ್ನಿಂಗ್ಸ್​ನಲ್ಲಿ ಫುಲ್​ ಜೋಶ್​ನಲ್ಲಿ ಕಾಣಿಸಿಕೊಂಡರು. ವಿಶೇಷವೆಂದರೆ, ಭಾರತವು ಎರಡನೇ ಓವರ್​​ನಲ್ಲಿ ಅತ್ಯುತ್ತಮ ಫಾರ್ಮ್​ನಲ್ಲಿರುವ ಕ್ವಿಂಟನ್ ಡಿ ಕಾಕ್ (10 ಎಸೆತಗಳಲ್ಲಿ 5) ಅವರ ವಿಕೆಟ್ ಪಡೆಯಿತು. ದಕ್ಷಿಣ ಆಫ್ರಿಕಾ ಐದು ಓವರ್​ಗಳ ನಂತರ 17ರನ್​ಗೆ 1 ರನ್ ಗಳಿಸಿದ್ದರಿಂದ ಒತ್ತಡಕ್ಕೆ ಸಿಲುಕಿತು.

ಐದನೇ ಓವರ್ ಮುಗಿದ ನಂತರ, ಬಾಲಿವುಡ್ ಸೂಪರ್​ಸ್ಟಾರ್​ ಶಾರುಖ್ ಖಾನ್ ಅವರ ಇತ್ತೀಚಿನ ಚಿತ್ರ ‘ಜವಾನ್’ ನ ಅರಿಜಿತ್ ಸಿಂಗ್ ಅವರ ಪ್ರಸಿದ್ಧ ಹಾಡಿಗೆ ಚಲೇಯಾ ಹಾಡಿಗೆ ಡಾನ್ಸ್ ಮಾಡುವುದು ಕಂಡು ಬಂತು. ಅದೇ ರೀತಿ ಎಸ್ಆರ್​ಕೆ ರೀತಿಯಲ್ಲೇ ಕಾಲು ಮತ್ತು ದೇಹವವನ್ನು ಅಲ್ಲಾಡಿಸಿದರು. ಪ್ರೇಕ್ಷಕರು ಕೊಹ್ಲಿಯ ಡಾನ್ಸಿಂಗ್ ಕ್ರೇಜ್ ಅನ್ನು ಆನಂದಿಸಿದರು. ಅಲ್ಲದೆ, ಕೊಹ್ಲಿ ಡಾನ್ಸ್ ಮಾಡುತ್ತಿದ್ದಂತೆ ಅವರು ಅಬ್ಬರಿಸಿ ಕೇಕೆ ಹಾಕಿದರು.

ಬರ್ತ್​ಡೇಯಂದೇ ಶತಕ ಬಾರಿಸಿ ಸಚಿನ್​ ದಾಖಲೆ ಸರಿಗಟ್ಟಿದ ವಿರಾಟ್​ ಕೊಹ್ಲಿ

ವಿಶ್ವ ಕ್ರಿಕೆಟ್​ನ ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ (Virat kohli) ಅವರು ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್ ಅವರು ಏಕದಿನ ದಿನ ಕ್ರಿಕೆಟ್​ನಲ್ಲಿ ಬಾರಿಸಿರುವ 49 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಈಡನ್ ಗಾರ್ಡನ್ಸ್​ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ತಮ್ಮ 35ನೇ ವರ್ಷದ ಜನುದಿನದಿಂದೇ ಅವರು ಈ ಸಾಧನೆ ಮಾಡಿರುವುದು ವಿಶೇಷ ಹಾಗೂ ಅವರ ಪಾಲಿಗೆ ಸ್ಮರಣೀಯ.

ಐತಿಹಾಸಿಕ ಕೋಲ್ಕೊತಾದ ಈಡನ್​ ಗಾರ್ಡನ್ಸ್​ನ ಸ್ಟೇಡಿಯಮ್​ನಲ್ಲಿ ಅವರು ಸಾಧನೆ ಮಾಡಿರುವುದು ಭಾರತ ಕ್ರಿಕೆಟ್​ ಕ್ಷೇತ್ರದ ಪಾಲಿಗೆ ಇನ್ನೂ ವಿಶೇಷ. ವಿರಾಟ್​ ಕೊಹ್ಲಿ ಈಗ 79 ಅಂತಾರಾಷ್ಟ್ರಿಯ ಶತಕದ ಸರದಾರ. ಅವರು ಖಾತೆಯಲ್ಲೀಗ 79 ಶತಕಗಳಿವೆ. ಅದರಲ್ಲಿ 29 ಶತಕ ಟೆಸ್ಟ್​ ಕ್ರಿಕೆಟ್​ನಲ್ಲಾದರೆ ಒಂದು ಶತಕ ಟಿ20 ಕ್ರಿಕೆಟ್​ನಲ್ಲಾಗಿದೆ. ಗರಿಷ್ಠ ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಸಚಿನ್​ ತೆಂಡೂಲ್ಕರ್​ 100 ಶತಕಗಳನ್ನು ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಕೊಹ್ಲಿ ಅವರಿಗಿಂತ 21 ಶತಕಗಳಿಂದ ಹಿಂದಿದ್ದಾರೆ.

ಹೊಸ ಮೈಲುಗಲ್ಲು ಸ್ಥಾಪಿಸಿದ ಕೊಹ್ಲಿ

ದಕ್ಷಿಣ ಆಫ್ರಿಕಾ ವಿರುದ್ಧ ಸಾಗುತ್ತಿರುವ ವಿಶ್ವಕಪ್​ ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ನೂತನ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲಿ 1500* ರನ್​ ಪೂರ್ತಿಗೊಳಿಸಿದ್ದಾರೆ. ಈ ಸಾಧನೆ ಮಾಡಿದ ಟೀಮ್ ಇಂಡಿಯಾದ 2ನೇ ಬ್ಯಾಟರ್​​ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

Exit mobile version