Site icon Vistara News

Kieron Pollard: ರಶೀದ್ ಖಾನ್‌ ಓವರ್​ನಲ್ಲಿ ಸತತ 5 ಸಿಕ್ಸರ್ ಬಾರಿಸಿದ ಪೊಲಾರ್ಡ್‌; ವಿಡಿಯೊ ಇಲ್ಲಿದೆ

Kieron Pollard

Kieron Pollard: 6, 6, 6, 6, 6, Kieron Pollard Smashes Rashid Khan To The Stands In The Hundred 2024

ಲಂಡನ್​: ವೆಸ್ಟ್​ ಇಂಡೀಸ್​ ತಂಡದ ಸ್ಫೋಟಕ ಬ್ಯಾಟರ್​ ಕೈರನ್​ ಪೊಲಾರ್ಡ್(Kieron Pollard) ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಲವು ವರ್ಷಗಳೇ ಕಳೆದಿದೆ. ಆದರೆ, ಅವರ ಬ್ಯಾಟಿಂಗ್​ ಅಬ್ಬರ ಮಾತ್ರ ಹಿಂದಿನಂತೆಯೇ ಇದೆ. ಹೌದು, ಲಂಡನ್​ನಲ್ಲಿ ನಡೆಯುತ್ತಿರುವ ದಿ ಹಂಟ್ರೆಡ್​ ಕ್ರಿಕೆಟ್​ ಟೂರ್ನಿಯಲ್ಲಿ(The Hundred 2024) ಅಪಘಾನಿಸ್ತಾನದ ಖ್ಯಾತ ಸ್ಪಿನ್ನರ್​​ ಆಗಿರುವ ರಶೀದ್​ ಖಾನ್​ ಓವರ್​ನಲ್ಲಿ ಸತತ 5 ಸಿಕ್ಸರ್​ ಸಿಡಿಸಿ ಸುದ್ದಿಯಾಗಿದ್ದಾರೆ. ಪೊಲಾರ್ಡ್​ ಅವರ ಈ ಸಿಕ್ಸರ್​ ವಿಡಿಯೊ ವೈರಲ್​ ಆಗಿದೆ.

ಸದರ್ನ್ ಬ್ರೇವ್ ತಂಡದ ಪರ ಆಡುತ್ತಿರುವ ಪೊಲಾರ್ಡ್​ ಟ್ರೆಂಟ್ ರಾಕೆಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 45 ರನ್ ಬಾರಿಸಿದರು. ಈ ಐದು ಸಿಕ್ಸರ್​ಗಳು ರಶೀದ್​ ಖಾನ್​ ಓವರ್​ನಲ್ಲಿ ಸಿಡಿಯಿತು. ಬಿರುಸಿನ ಬ್ಯಾಟಿಂಗ್​ ನಡೆಸಿದ ಪೊಲಾರ್ಡ್​ ರಶೀದ್​ ಖಾನ್​ ಗೂಗ್ಲಿ ಎಸೆತಕ್ಕೂ ಜಗ್ಗದೆ ಚೆಂಡನ್ನು ಬೌಂಡರಿ ಗೆರೆಯಿಂದಾಚೆ ಬಾರಿಸಿದರು. ಸದ್ಯ ಪೊಲಾರ್ಡ್​ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಆಟಗಾರರ ಪೈಕಿ 7ನೇ ಸ್ಥಾನದಲ್ಲಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟ್ರೆಂಟ್ ರಾಕೆಟ್ಸ್ ತಂಡ 100 ಎಸೆತಗಳಲ್ಲಿ 8 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಸದರ್ನ್ ಬ್ರೇವ್ 99 ಎಸೆತಗಳಲ್ಲಿ 129 ರನ್‌ ಬಾರಿಸಿ ಗೆಲುವು ದಾಖಲಿಸಿತು. ಅದ್ಭುತ ಇನ್ನಿಂಗ್ಸ್ ಆಡಿದ ಪೊಲಾರ್ಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ Kieron Pollard : ಇಂಗ್ಲೆಂಡ್​ ತಂಡ ಸೇರಿದ ಮುಂಬೈ ಇಂಡಿಯನ್ಸ್ ದೈತ್ಯ ಬ್ಯಾಟರ್​

ರಶೀದ್​ ಖಾನ್​ ಅವರು ಕೆಲ ದಿನಗಳ ಹಿಂದೆ ಟೈಮಲ್‌ ಮಿಲ್ಸ್‌ ಎಸೆತವನ್ನು ಮಹೇಂದ್ರ ಸಿಂಗ್​ ಧೋನಿ ಪರಿಚಯಿಸಿದ ಹೆಲಿಕಾಪ್ಟರ್ ಶಾಟ್ ಮೂಲಕ ಆಫ್​ ಸೈಡ್​ ಕಡೆಗೆ ಸಿಕ್ಸರ್​ ಬಾರಿಸಿ ಮಿಂಚಿದ್ದರು. ರಶೀದ್​ ಸಿಕ್ಸರ್​ ಬಾರಿಸುತ್ತಿದ್ದಂತೆ ಕಾಮೆಂಟ್ರಿ ಮಾಡುತ್ತಿದ್ದವರು ಓ ಸೊಗಸಾದ ಹೆಲಿಕಾಪ್ಟರ್ ಶಾಟ್ ಎಂದು ವರ್ಣಿಸಿದ್ದರು. ರಶೀದ್​ ಖಾನ್ ಬಾರಿಸಿದ ಈ ಹೆಲಿಕಾಪ್ಟರ್ ಶಾಟ್​ನ ವಿಡಿಯೊ ವೈರಲ್​ ಆಗಿತ್ತು.

ಒಂದೇ ಓವರ್​ಗೆ 6 ಸಿಕ್ಸರ್​ ಸಿಡಿಸಿದ್ದ ಪೊಲಾರ್ಡ್​


ಪೊಲಾರ್ಡ್​ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಓವರ್​ಗೆ 6 ಸಿಕ್ಸರ್​ ಬಾರಿಸಿದ್ದ ದಾಖಲೆಯನ್ನೂ ಹೊಂದಿದ್ದಾರೆ. 2021ರಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಅಕಿಲಾ ಧನಂಜಯ್‌ ಅವರ ಓವರ್​ನಲ್ಲಿ ಪೊಲಾರ್ಡ್​ 6 ಸಿಕ್ಸರ್​ ಬಾರಿಸಿದ್ದರು.

ಐಪಿಎಲ್​ನಲ್ಲಿ ಪೊಲಾರ್ಡ್​ 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡದ ಪರ ಬ್ಯಾಟಿಂಗ್​ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Exit mobile version