Site icon Vistara News

IPL 2024 : ಸೋಲಿನ ಹತಾಶೆಯಲ್ಲಿ ಪಂದ್ಯದ ಅಧಿಕಾರಿಗಳೊಂದಿಗೆ ಜಗಳವಾಡಿದ ಮುಂಬೈ ಕೋಚ್​ ಕೀರನ್​ ಪೊಲಾರ್ಡ್​​

IPL 2024

ಬೆಂಗಳೂರು ; ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್​​ 2024ರ (IPL 2024) ಪಂದ್ಯದ ವೇಳೆ ತಮ್ಮ ನಿಯಂತ್ರಣ ಕಳೆದುಕೊಂಡು ಪಂದ್ಯದ ಅಧಿಕಾರಿಗಳ ಜತೆ ಜಗಳವಾಡಿದ್ದಾರೆ. ಈ ಪಂದ್ಯದಲ್ಲಿ ಮುಂಬಯಿ ತಂಡ ಸೋತಿದ್ದು ಈ ಹತಾಶೆಯಲ್ಲಿ ಅವರು ಜಗಳವಾಡಿದ್ದಾರೆ. ಡಿಆರ್​ಎಸ್​​ ವಿಮರ್ಶೆಯು ಆತಿಥೇಯರಿಗೆ ಅವಕಾಶ ಮಾಡಿಕೊಡದ ಕಾರಣ ವೆಸ್ಟ್ ಇಂಡೀಸ್​ನ ಮಾಜಿ ಆಲ್ರೌಂಡರ್ ಪಂದ್ಯದ ಅಧಿಕಾರಿಯೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ.

207 ರನ್​ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್​ಗೆ ಉತ್ತಮ ಆರಂಭ ಸಿಕ್ಕಿತು. ಈ ವೇಳೆ ವೈಡ್​ ಎಸೆತವೊಂದರ ಪರಿಶೀಲನೆಗೆ ಮುಂಬೈ ತಂಡ ಡಿಆರ್​ಎಸ್​ ತೆಗೆದುಕೊಂಡಿತು. ಫಲಿತಾಂಶ ಮುಂಬೈಗೆ ಪೂರಕವಾಗಿ ಬರಲಿಲ್ಲ. ಇದರಿಂದ ಕೋಪಗೊಂಡ ಪೊಲಾರ್ಡ್ ಪಂದ್ಯದ ಅಧಿಕಾರಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ನಾಯಕ ಹಾರ್ದಿಕ್ ಪಾಂಡ್ಯ ಬೇಗ ಔಟಾದ ಕಾರಣ ಮುಂಬಯಿ ತಂಡ ಸೋಲುವಂತಾಗಿತು. ಇದರಿಂದಿ ಬೃಹತ್ ಗುರಿಯನ್ನು ಬೆನ್ನಟ್ಟುವ ತಂಡದ ಯೋಜನೆಗೆ ದೊಡ್ಡ ಹೊಡೆತ ನೀಡಿತು.

ಚೆನ್ನೈಗೆ ಆರಾಮದಾಯಕ ಗೆಲುವು

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಆರಾಮದಾಯಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಟೂರ್ನಿಯಲ್ಲಿ ಈವರೆಗೆ ಆರು ಪಂದ್ಯಗಳನ್ನು ಆಡಿರುವ ಚೆನ್ನೈ ಇದುವರೆಗೂ ನಾಲ್ಕು ಗೆಲುವುಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಎರಡು ಪಂದ್ಯಗಳನ್ನು ಸೋತಿದೆ. ಪ್ರಸ್ತುತ, ಐದು ಬಾರಿಯ ಚಾಂಪಿಯನ್ಸ್ ಆರು ಪಂದ್ಯಗಳಲ್ಲಿ ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಲ್ಲದೆ ಅವರು ಪ್ಲೇಆಫ್ ರೇಸ್​ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: Rohit Sharma : ಟಿ20 ಕ್ರಿಕೆಟ್​ನಲ್ಲಿ ಸಿಕ್ಸರ್​ಗಳ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ; ಇಲ್ಲಿದೆ ವಿವರ

ಮುಂಬೈ ಇಂಡಿಯನ್ಸ್​​ ಪರಿಸ್ಥಿತಿ ಹದಗೆಟ್ಟಿದೆ. ಮುಂಬೈ ಇಂಡಿಯನ್ಸ್ ಆಡಿರುವ 6 ಪಂದ್ಯಗಳಲ್ಲಿ 2 ಗೆಲುವು ಹಾಗೂ 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಐದು ಬಾರಿಯ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಹೋರಾಟ ನಡೆಸುತ್ತಿದೆ.

ಮುಂಬೈಯನ್ನು 20 ರನ್ ಗಳಿಂದ ಸೋಲಿಸಿದ ಚೆನ್ನೈ ಈಗ ಲಕ್ನೋ ಸೂಪರ್ ಜೈಂಟ್ಸ್ ಕಡೆಗೆ ತನ್ನ ಗಮನವನ್ನು ಕೇಂದ್ರೀಕರಿಸಲಿದೆ. ಏಕೆಂದರೆ ಅವರು ಏಪ್ರಿಲ್ 19 ರ ಶುಕ್ರವಾರ ಪಂದ್ಯಾವಳಿಯ 34 ನೇ ಪಂದ್ಯದಲ್ಲಿ ತಂಡವನ್ನು ಎದುರಿಸಲು ಎಕಾನಾ ಕ್ರೀಡಾಂಗಣಕ್ಕೆ ಪ್ರಯಾಣಿಸಲಿದೆ. ಋತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್​ಕೆ ಈ ಋತುವಿನಲ್ಲಿ ಐದನೇ ಜಯದ ಹುಡುಕಾಟದಲ್ಲಿದೆ.

Exit mobile version