Site icon Vistara News

IPL 2023 : ಟಿ20 ಪಂದ್ಯವನ್ನೇ ಆಡದ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡ ಕೆಕೆಆರ್​

KKR has included the player of the game in the T20 match itself

#image_title

ಕೋಲ್ಕೊತಾ: ಸುಯಾಶ್ ಶರ್ಮಾ ಯುವ ಲೆಗ್​ ಸ್ಪಿನ್ನರ್ ಅನ್ನು ಐಪಿಎಲ್​ಗೆ ಪರಿಚಯಿಸಿದ್ದ ಕೋಲ್ಕೊತಾ ನೈಟ್​ ರೈಡರ್ಸ್ ತಂಡದ ಇದೀಗ ಒಂದೇ ಒಂದು ಟಿ20 ಪಂದ್ಯವನ್ನು ಆಡದ ಬ್ಯಾಟರ್​ ಒಬ್ಬರನ್ನು ತಂಡಕ್ಕೆ ಸೇರಿಸಿಕೊಂಡಿದೆ. 20 ವರ್ಷದ ಆರ್ಯ ದೇಸಾಯಿ ಕೆಕೆಆರ್​ ಬಳಗ ಸೇರಿಕೊಂಡ ಆಟಗಾರ. 20 ಲಕ್ಷ ರೂಪಾಯಿ ನೀಡಿ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಫ್ರಾಂಚೈಸಿ. ದೇಸಾಯಿ ಟಾಟಾ ಐಪಿಎಲ್​ನ ಇನ್ನುಳಿದ ಪಂದ್ಯಗಳಲ್ಲಿ ಕೆಕೆಆರ್​ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಗುಜರಾತ್ ಮೂಲಕ ಆರ್ಯ ದೇಸಾಯಿ ಮೂರು ಪ್ರಥಮದರ್ಜೆ ಪಂದ್ಯಗಳನ್ನು ಗುಜರಾತ್ ತಂಡದ ಪರವಾಗಿ ಆಡಿದ್ದಾನೆ. ಒಟ್ಟು 151 ರನ್​ಗಳನ್ನು ಅವರು ಬಾರಿಸಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ದೇಸಾಯಿ 2022-23ರಲ್ಲಿ ಮೂರು ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡಿದ್ದಾನೆ. ವಿದರ್ಭ ತಂಡದ ವಿರುದ್ಧ ಅವರು ಅರ್ಧ ಶತಕ ಕೂಡ ಬಾರಿಸಿದ್ದರು. ಆದರೆ, ಸೀಮಿತ ಓವರ್​ಗಳ ಮಾದರಿಯಲ್ಲಿ ಒಂದೇ ಒಂದು ಪಂದ್ಯವನ್ನು ಅವರು ಆಡಿರಲಿಲ್ಲ.

ಕೆಕೆಆರ್ ತಂಡ ಯುವ ಆಟಗಾರರಿಗೆ ಪ್ರೋತ್ಸಾಹ ಕೊಡುವುದು ಇದೇ ಮೊದಲಲ್ಲ. ಕಳೆದ ವಾರ ಸ್ಪಿನ್​ ಬೌಲರ್​ ಸುಯಾಶ್​ ಶರ್ಮಾಗೆ ಅವಕಾಶ ನೀಡುವ ಮೂಲಕ ಮೆಚ್ಚುಗೆ ಗಳಿಸಿತ್ತು. ಸುಯಾಶ್​ ದೇಶಿಯ ಕ್ರಿಕೆಟ್​ನಲ್ಲಿ ಆಡದೇ ಇರುವ ಹೊರತಾಗಿಯೂ ಆರ್​ಸಿಬಿ ವಿರುದ್ಧದ ಹಣಾಹಣಿಯಲ್ಲಿ ಅವಕಾಶ ನೀಡಲಾಗಿತ್ತು. ಆ ಪಂದ್ಯದಲ್ಲಿ ಅವರು ಮೂರು ವಿಕೆಟ್​ ಕಿತ್ತು ತಂಡದ 81 ರನ್​ಗಳ ಅಂತರದ ವಿಜಯದಲ್ಲಿ ಪಾಲು ಪಡೆದುಕೊಂಡಿದ್ದರು.

ಚಿನ್ನದ ಹುಡುಗ ನೀರಜ್​ ಚೋಪ್ರಾ ಅವರಂತೆಯೇ ಕಾಣುವ ಕೆಕೆಆರ್​ನ ಈ ಸ್ಪಿನ್ನರ್​ ಯಾರು?

ಕೆಕೆಆರ್​ ವಿರುದ್ಧದ ಐಪಿಎಲ್​ (IPL 2023 ) ಪಂದ್ಯದಲ್ಲಿ ಆರ್​​ಸಿಬಿ ತಂಡ ಸೋಲುವುದಕ್ಕೆ ಮೂವರು ಸ್ಪಿನ್ನರ್​ಗಳು ಕಾರಣ. ವರುಣ್​ ಚಕ್ರವರ್ತಿ, ಸುನೀಲ್​ ನರೈಲ್​ ಹಾಗೂ ಸುಯಾಶ್​ ಶರ್ಮಾ. ಈ ಮೂವರಲ್ಲಿ ಪಂದ್ಯದ ವೇಳೆ ಹೆಚ್ಚು ಗಮನ ಸೆಳೆದಿದ್ದು ಸುಯಾಶ್​. ಅದಕ್ಕೆ ಎರಡು ಕಾರಣವಿದೆ. ಒಂದು ಅವರ ನೋಟ. ಎರಡನೆಯದು ಅವರ ಬೌಲಿಂಗ್ ಶೈಲಿ. ನೋಟದ ವಿಚಾರದಲ್ಲಿ ಹೇಳುವುದಾದರೆ ಅವರು 2021ರ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿರುವ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ ಅವರಂತೆಯೇ ಇದ್ದಾರೆ. ಕ್ಲೀನ್​ ಶೇವ್​, ಹೇರ್​ಬ್ಯಾಂಡ್​ ಹಾಕಿರುವ ಉದ್ದನೆಯ ಕೂದಲಿನ ಮೂಲಕ ಅವರು ನೀರಜ್​ ಅವರಂತೆಯೇ ಕಾಣುತ್ತಾರೆ. ಬಲಗೈ ಲೆಗ್​ಸ್ಪಿನ್ನರ್ ಆಗಿರುವ ಅವರ ಬೌಲಿಂಗ್ ಶೈಲಿಯೂ ವಿಭಿನ್ನವಾಗಿದೆ. ಅಸಾಂಪ್ರದಾಯಿಕ ಬೌಲಿಂಗ್​ ಮೂಲಕ ಬ್ಯಾಟರ್​ಗಳ ಏಕಾಗ್ರತೆಯನ್ನು ಕಂಗೆಡಿಸುವ ಶೈಲಿ ಅವರದ್ದು. ಹೀಗಾಗಿ ಪಂದ್ಯದುದ್ದಕ್ಕೂ ಅವರು ಕ್ರಿಕೆಟ್​ ಪ್ರೇಮಿಗಳ ಗಮನ ಸೆಳೆದರು.

ಸುಯಾಶ್​ ಶರ್ಮಾ ಪಂದ್ಯದಲ್ಲಿ ನಾಲ್ಕು ಓವರ್​ಗಳನ್ನು ಎಸೆದಿದ್ದಾರೆ. 30 ರನ್​ ನೀಡಿರುವರ ಅವರು ಪ್ರಮುಖ 3 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಪದಾರ್ಪಣೆ ಪಂದ್ಯದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದ ಬೌಲರ್​ ಎಂಬ ಗರಿಮೆ ತನ್ನದಾಗಿಸಿಕೊಂಡಿದ್ದಾರೆ. ವಿಶೇಷ ಎಂದರೆ ಸುಯಾಶ್​ ಕಣಕ್ಕೆ ಇಳಿದಿದ್ದು ಇಂಪ್ಯಾಕ್ಟ್​ ಪ್ಲೇಯರ್​ ಆಗಿ. ಮೊದಲು ಬ್ಯಾಟ್​ ಮಾಡಿದ್ದ ಕೆಕೆಆರ್​ ತಂಡ 204 ರನ್​ಗಳ ಬೃಹತ್​ ಮೊತ್ತ ಪೇರಿಸಿತ್ತು. ಬ್ಯಾಟ್​ ಮಾಡುವ ವೇಳೆ ಪಿಚ್ ಸ್ಪಿನ್​ಗೆ ನೆರವಾಗುವುದನ್ನು ಗುರುತಿಸಿದ್ದ ಕೆಕೆಆರ್​ ತಂಡ ಆಲ್​ರೌಂಡರ್​ ವೆಂಕಟೇಶ್​ ಅಯ್ಯರ್ ಅವರ ಬದಲಿಗೆ ಸ್ಪಿನ್ನರ್​ ಸುಯಾಶ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಅವರು ಮೂರು ವಿಕೆಟ್​ ತಮ್ಮದಾಗಿಸಿಕೊಂಡರು.

ಲಿಸ್ಟ್​ ಎ ಪಂದ್ಯವೂ ಆಡಿಲ್ಲ ಸುಯಾಶ್​

ಸುಯಾಶ್​ ಶರ್ಮಾ ಬೌಲಿಂಗ್‌ನಿಂದ ಕೇವಲ ಕೆಕೆಆರ್‌ಗೆ ಮಾತ್ರವಲ್ಲ ಇಡೀ ಐಪಿಎಲ್‌ ಟೂರ್ನಿಯ ಎಲ್ಲಾ ತಂಡಗಳಿಗೂ ಅಚ್ಚರಿಯಾಗಿದೆ. ಯಾಕೆಂದರೆ, ಅವರು ಒಂದೇ ಒಂದು ಲಿಸ್ಟ್‌ ‘ಎ’ ಪಂದ್ಯವಾಗಲಿ, ಪ್ರಥಮ ದರ್ಜೆ ಪಂದ್ಯವಾಗಲಿ ಅಥವಾ ದೇಶಿ ಕ್ರಿಕೆಟ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ನೇರವಾಗಿ ಐಪಿಎಲ್​ಗೆ ಪ್ರವೇಶ ಪಡೆದುಕೊಂಡು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ : IPL 2023 : ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಭ್ಯಾಸ ವೀಕ್ಷಿಸಿದ ರಿಷಭ್​ ಪಂತ್​

2023ರ ಐಪಿಎಲ್‌ ಟೂರ್ನಿಯ ಮಿನಿ ಹರಾಜಿನಲ್ಲಿ ಸುಯಾಶ್​ ಶರ್ಮಾ ಅವರನ್ನು ಕೋಲ್ಕತಾ ಫ್ರಾಂಚೈಸಿ 20 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತ್ತು. ಆ ಮೂಲಕ ಕೆಕೆಆರ್‌ ತಂಡದ 25 ಸದಸ್ಯರ ಬಳಗ ಸೇರಿಕೊಂಡಿದ್ದರು. ಕೆಕೆಆರ್​ ಟೀಮ್​ ಅಭ್ಯಾಸ ನಡೆಸುವಾಗ ಸುಯಾಶ್​ ಬೌಲಿಂಗ್ ಮಾಡಿದ್ದರು. ಅವರ ವಿಭಿನ್ನ ಶೈಲಿ ಹಾಗೂ ನಿಖರತೆ ತಂಡದ ಮ್ಯಾನೇಜ್ಮೆಂಟ್​ ಗಮನ ಸೆಳೆದಿತ್ತು. ಹೀಗಾಗಿ ಇಂಪ್ಯಾಕ್ಟ್​ ಪ್ಲೇಯರ್ ಆಗಿ ಅವಕಾಶ ಗಿಟ್ಟಿಸಿಕೊಂಡರು.

Exit mobile version