ನವ ದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2023ರಲ್ಲಿ (IPL 2023) ರಿಂಕು ಸಿಂಗ್ ಅದ್ಭುತ ಪ್ರದರ್ಶನ ನೀಡಿದ್ದರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಯಶ್ ದಯಾಳ್ ಅವರ ಕೊನೆಯ ಓವರ್ನಲ್ಲಿ ಐದು ಸಿಕ್ಸರ್ಗಳನ್ನು ಬಾರಿಸುವ ಮೂಲಕ ತಂಡವನ್ನು ಗೆಲ್ಲಿಸಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಈ ಬ್ಯಾಟರ್ ಹಿರಿಯ ಆಟಗಾರರ ಪ್ರಶಂಸೆಗೆ ಪಾತ್ರರಾಗಿದ್ದರು. ಅಲ್ಲಿದೆ ಈ ಆವೃತ್ತಿಯ 14 ಪಂದ್ಯಗಳಲ್ಲಿ 59.25ರ ಸರಾಸರಿಯಲ್ಲಿ 474 ರನ್ ಗಳಿಸಿದ್ದರು. ಅವರ ಸ್ಟ್ರೈಕ್ರೇಟ್ ರಿಂಕು 149.53 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಬಿಡುವಿಲ್ಲದ ಐಪಿಎಲ್ ಪಂದ್ಯಗಳ ಬಳಿಕ ಇದೀಗ ರಿಂಕು ರಜಾ ಸಮಯ ಕಳೆಯುತ್ತಿದ್ದು, ಮಾಲ್ಡೀವ್ಸ್ಗೆ ತೆರಳಿದ್ದಾರೆ.
ತಾವು ಮಾಲ್ಡೀವ್ಸ್ಗೆ ಹೋಗಿ ಅಲ್ಲಿ ಸಮಯ ಕಳೆಯುತ್ತಿರುವ ವಿಷಯವನ್ನು 25 ವರ್ಷದ ಬ್ಯಾಟ್ಸ್ಮನ್ ಇನ್ಸ್ಟಾಗ್ರಾಮ್ ಮೂಲಕ ಶೇರ್ ಮಾಡಿದ್ದಾರೆ. ಇದೇ ವೇಳೆ ಸುಂದರ ಸ್ಥಳದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ ನೀರಿನ ಹಿನ್ನೆಲೆಯೊಂದಿಗೆ ಸಿಕ್ಸ್ಪ್ಯಾಕ್ ಪ್ರದರ್ಶಿಸಿದ್ದಾರೆ. “ಎಚ್ಚರಿಕೆ: ಆಸಕ್ತಿಕಾರಕ ವಿಷಯ ಮುಂದಿದೆ” ಎಂದು ಪೋಸ್ಟ್ಗೆ ಶೀರ್ಷಿಕೆ ಬರೆದಿದ್ದಾರೆ.
ರಿಂಕು ಅವರ ಈ ಅವತಾರದ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರು ಪ್ರವಾಸದಲ್ಲಿರುವ ಚಿತ್ರಗಳು ತಕ್ಷಣದಲ್ಲೇ ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆದವು. ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮೊಹ್ಸಿನ್ ಖಾನ್ ಕೂಡ ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : Team India : ಐಪಿಎಲ್ ಬಳಿಕ ಈಗ ಭಾರತ ಕ್ರಿಕೆಟ್ ತಂಡ ಯಾವೆಲ್ಲ ಟೂರ್ನಿಯಲ್ಲಿ ಆಡಲಿದೆ?
ಐಪಿಎಲ್ನಲ್ಲಿ ರಿಂಕು ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದರು. ಹಲವಾರು ಸಂದರ್ಭಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸಿದ್ದರು ಕೂಡ. ಆದಾಗ್ಯೂ, ಕೆಕೆಆರ್ 14 ಪಂದ್ಯಗಳಲ್ಲಿ ಕೇವಲ ಆರು ಗೆಲುವುಗಳನ್ನು ಗಳಿಸಲು ಸಾಧ್ಯವಾಗಿದ್ದರಿಂದ ಪ್ಲೇಆಪ್ ಹಂತಕ್ಕೆ ಪ್ರವೇಶಿಸಲು ವಿಫಲವಾಯಿತು. ಪಾಯಿಂಟ್ಸ್ ಟೇಬಲ್ನಲ್ಲಿ ಏಳನೇ ಸ್ಥಾನದಲ್ಲಿದೆ.
ಐಪಿಎಲ್ 2023ರ ಋತುವಿನ ಬಗ್ಗೆ ಹೇಳುವುದಾದರೆ, ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮೇ 29ರಂದು ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿ ಶ್ರೀಮಂತ ಕ್ರಿಕೆಟ್ ಲೀಗ್ನ ವಿಜೇತ ತಂಡವಾಗಿ ಹೊರಹೊಮ್ಮಿತು.