ವಿಶಾಖಪಟ್ಟಣಂ: ಬುಧವಾರದ ಐಪಿಎಲ್ನ(IPL 2024) ಬೃಹತ್ ಮೊತ್ತದ ಮೇಲಾಟದಲ್ಲಿ ಕೋಲ್ಕತ್ತಾ ನೈಟ್ ರೇಡರ್ಸ್(KKR vs DC) ತಂಡ ಭರ್ಜರಿ ಗೆಲುವು ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 106 ರನ್ ಅಂತರದಿಂದ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಜತೆಗೆ ಅಂಕಪಟ್ಟಿಯಲ್ಲಿ 6 ಅಂಕ ಸಂಪಾದಿಸಿ ಅಗ್ರ ಸ್ಥಾನಕ್ಕೇರಿದೆ.
ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ಫುಲ್ ಜೋಶ್ನಲ್ಲಿ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ ಬರೋಬ್ಬರಿ 272 ರನ್ ಬಾರಿಸಿತು. ಈ ಬೃಹತ್ ಮೊತ್ತವನ್ನು ಕಂಡು ಕಂಗಾಲಾದ ಡೆಲ್ಲಿ ಕ್ಯಾಪಿಟಲ್ಸ್ 17.2 ಓವರ್ಗಳಲ್ಲಿ 166 ರನ್ ಬಾರಿಸಿ ಸರ್ವಪತನ ಕಂಡಿತು.
Thunderous batting display 👏
— IndianPremierLeague (@IPL) April 3, 2024
Comprehensive bowling & fielding display 👏
A hat-trick of wins for @kkriders & they go to the 🔝 of the points table 💜
Scorecard ▶️ https://t.co/SUY68b95dG #TATAIPL | #DCvKKR pic.twitter.com/xq4plqLatQ
ಡೆಲ್ಲಿಗೆ ಆಸರೆಯಾದ ಪಂತ್- ಸ್ಟಬ್ಸ್
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿಗೆ ಆಸರೆಯಾದದ್ದು ನಾಯಕ ರಿಷಭ್ ಪಂತ್ ಮತ್ತು ಟ್ರಿಸ್ಟಾನ್ ಸ್ಟಬ್ಸ್. ಉಭಯ ಆಟಗಾರರು ಮಧ್ಯಮ ಕ್ರಮಾಂಕದಲ್ಲಿ ಕೆಲ ಕಾಲ ಹೊಡಿ-ಬಡಿ ಆಟವಾಡಿ ಅರ್ಧಶತಕ ಬಾರಿಸಿ ತಂಡ ಗೆಲುವಿವಾಗಿ ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಉಳಿದ ಆಟಗಾರರಿಂದ ಇದೇ ಪ್ರದರ್ಶನ ಕಂಡು ಬಾರದೆ ತಂಡ ಸೋಲು ಕಂಡಿತು. ಕಾರು ಅಪಘಾತದಿಂದ 14 ತಿಂಗಳು ಕ್ರಿಕೆಟ್ನಿಂದ ದೂರ ಉಳಿದಿದ್ದ ಪಂತ್ ಅವರು ತಮ್ಮ ಹಳೇಯ ಶೈಲಿಯ ಬ್ಯಾಟಿಂಗ್ ಪ್ರದರ್ಶನ ಮತ್ತೊಮ್ಮೆ ತೋರಿಸಿಕೊಟ್ಟರು.
ಕೇವಲ 23 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ ಪಂತ್ ಮಧ್ಯಮ ವೇಗಿ ವೆಂಕಟೇಶ್ ಅಯ್ಯರ್ ಅವರ ಮೊದಲ ಓವರ್ನಲ್ಲಿ ಎಲ್ಲ ಎಸೆತಗಳನ್ನು ಸಿಕ್ಸರ್ ಮತ್ತು ಬೌಂಡರಿಗೆ ಬಡಿದಟ್ಟಿ 28 ರನ್ ಬಾರಿಸಿದರು. ಆದರೆ ಮುಂದಿನ ಓವರ್ನಲ್ಲಿ ವರಣ್ ಚರ್ಕವರ್ತಿಗೆ ವಿಕೆಟ್ ಒಪ್ಪಿಸಿದರು. 5 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 55 ರನ್ ಗಳಿಸಿದರು. ಇವರ ಜತೆಗಾರ ಟ್ರಿಸ್ಟಾನ್ ಸ್ಟಬ್ಸ್ ತಲಾ 4 ಬೌಂಡರಿ ಮತ್ತು ಸಿಕ್ಸರ್ ನೆರವಿನಿಂದ 54 ರನ್ ಬಾರಿಸಿದರು. ಮಿಚೆಲ್ ಮಾರ್ಷ್, ಇಂಪ್ಯಾಕ್ಟ್ ಪ್ಲೇಯರ್ ಅಭಿಷೇಕ್ ಪೋರೆಲ್ ಮತ್ತು ಅಕ್ಷರ್ ಪಟೇಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ವಾರ್ನರ್ 18 ರನ್ ಗಳಿಸಿದರು.
F-iyery & Audacious. Rishabh Pant in a nutshell.#YehHaiNayiDilli #DCvKKR #IPL2024 pic.twitter.com/sNThXwsAOV
— Delhi Capitals (@DelhiCapitals) April 3, 2024
ಕೆಕೆಆರ್ ಪರ ವೈಭವ್ ಅರೋರಾ ಮತ್ತು ವರುಣ್ ಚರ್ಕವರ್ತಿ ಘಾತಕ ಬೌಲಿಂಗ್ ನಡೆಸಿ ತಲಾ 3 ವಿಕೆಟ್ ಕಿತ್ತರು. 24.75 ಕೋಟಿ ವೀರ ಮಿಚೆಲ್ ಸ್ಟಾರ್ಕ್ ಅವರು ಈ ಪಂದ್ಯದಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶನ ತೋರುವ ಮೂಲಕ 2 ವಿಕೆಟ್ ಪಡೆದರು.
ನರೈನ್-ರಘುವಂಶಿ ಬೊಂಬಾಟ್ ಬ್ಯಾಟಿಂಗ್
ಕೆಕೆಆರ್ ಪರ ಆರಂಭದಿಂದಲೇ ಜಿದ್ದಿಗೆ ಜಿದ್ದವರಂತೆ ಬ್ಯಾಟಿಂಗ್ ನಡೆಸಿದ ಸುನೀಲ್ ನರೈನ್ ಮತ್ತು ಆಂಗ್‌ಕ್ರಿಶ್ ರಘುವಂಶಿ ಅರ್ಧಶತಕ ಬಾರಿಸಿ ಮಿಂಚಿದರು. ಉಭಯ ಆಟಗಾರರ ಸೇರಿಕೊಂಡು ದ್ವಿತೀಯ ವಿಕೆಟ್ಗೆ ಅತ್ಯಮೂಲ್ಯ 104 ರನ್ಗಳ ಜತೆಯಾಟ ನಡೆಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. 100ನೇ ಐಪಿಎಲ್ ಪಂದ್ಯವನ್ನಾಡಿದ ಖಲೀಲ್ ಅಹ್ಮದ್ 43 ರನ್ ಹೊಡೆಸಿಕೊಂಡು 1 ವಿಕೆಟ್ ಕಿತ್ತರು.
Innovative!
— IndianPremierLeague (@IPL) April 3, 2024
Maiden IPL Fifty for Angkrish Raghuvanshi ✨
Head to @JioCinema and @StarSportsIndia to watch the match LIVE#TATAIPL | #DCvKKR pic.twitter.com/72oQQZIDbd
ಸುನೀಲ್ ನರೈನ್ ಅವರು 10 ರನ್ ಗಳಿಸುವ ಮುನ್ನವೇ ಟಿಪ್ ಕ್ಯಾಚ್ ಆಗಿ ವಿಕೆಟ್ ಕಳೆದುಕೊಳ್ಳಬೇಕಿತ್ತು. ಆದರೆ ಪಂತ್ ಅವರು ತಡವರಿಸಿ ರಿವ್ಯೂ ಪಡೆದು ಜೀವದಾನ ನೀಡಿದರು. ಸಿಕ್ಕ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿದ ಅವರು ಡೆಲ್ಲಿ ಬೌಲಿಂಗ್ ದಾಳಿಯನ್ನು ಚಿಂದಿ ಮಾಡಿದರು. ತಲಾ 7 ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ 39 ಎಸೆತಗಳಿಂದ 85 ರನ್ ಚಚ್ಚಿದರು. 18 ವರ್ಷದ ಆಂಗ್‌ಕ್ರಿಶ್ ರಘುವಂಶಿ ಕೇವಲ 27 ಎಸೆತಗಳಿಂದ 54 ರನ್ ಗಳಿಸಿ ಚೊಚ್ಚಲ ಐಪಿಎಲ್ ಅರ್ಧಶತಕ ಬಾರಿಸಿದರು.
ಇದನ್ನೂ ಓದಿ IPL 2024: ಆರ್ಸಿಬಿ ದಾಖಲೆ ಮುರಿದು ಐಪಿಎಲ್ನ 2ನೇ ಗರಿಷ್ಠ ರನ್ ರೆಕಾರ್ಡ್ ಮಾಡಿದ ಕೆಕೆಆರ್
ನರೈನ್ ಮತ್ತು ಆಂಗ್‌ಕ್ರಿಶ್ ವಿಕೆಟ್ ಪತನದ ಬಳಿಕ ರಿಂಕು ಸಿಂಗ್ ಮತ್ತು ಆ್ಯಂಡ್ರೆ ರಸೆಲ್ ಸೇರಿಕೊಂಡು ಮತ್ತೆ ಡೆಲ್ಲಿ ಬೌಲರ್ಗಳನ್ನು ಬೆಂಡಿತ್ತಿದರು. ಉಭಯ ಆಟಗಾರರು ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ರಸೆಲ್ 19 ಎಸೆತಗಳಿಂದ 41 ರನ್ ಬಾರಿಸಿ ಇಶಾಂತ್ ಶರ್ಮ ಅವರು ಸ್ಲೋ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ರಿಂಕು ಕೇವಲ 8 ಎಸೆತದಿಂದ 26 ರನ್ಗಳ ಕೊಡುಗೆ ನೀಡಿದರು. ಈ ವೇಳೆ 3 ಸಿಕ್ಸರ್ ಮತ್ತು 1 ಬೌಂಡರಿ ದಾಖಲಾಯಿತು. ಡೆಲ್ಲಿ ಪರ ಆನ್ರಿಚ್ ನೋರ್ಜೆ 3 ವಿಕೆಟ್ ಪಡೆದರೂ ಕೂಡ 59 ರನ್ ಬಿಟ್ಟುಕೊಟ್ಟರು.
ಆರ್ಸಿಬಿ ದಾಖಲೆ ಪತನ
ಇದೇ ಪಂದ್ಯದಲ್ಲಿ ಆರ್ಸಿಬಿಯ ದಾಖಲೆಯೊಂದು ಪತನಗೊಂಡಿತು. ಕೆಕೆಆರ್ 272 ರನ್ ಬಾರಿಸಿ ಐಪಿಎಲ್ನಲ್ಲಿ ಅತ್ಯಧಿಕ ರನ್ ಗಳಿಸಿದ ಎರಡನೇ ತಂಡ ಎಂಬ ದಾಖಲೆ ಬರೆಯಿತು. ಈ ಮೂಲಕ 2ನೇ ಸ್ಥಾನದಲ್ಲಿದ್ದ ಆರ್ಸಿಬಿ ಮೂರನೇ ಸ್ಥಾನಕ್ಕೆ ಕುಸಿಯಿತು. ಕಳೆದ ವಾರವಷ್ಟೇ ಸನ್ರೈಸರ್ಸ್ ಹೈದರಾಬಾದ್ ತಂಡ ಮುಂಬೈ ವಿರುದ್ಧ 277 ರನ್ ಬಾರಿಸಿ ಐಪಿಎಲ್ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ನಿರ್ಮಿಸಿತ್ತು. ಇದೀಗ ಒಂದೇ ವಾರದ ಅಂತರದಲ್ಲಿ ಈ ಟೂರ್ನಿಯಲ್ಲಿ ಮತ್ತೊಂದು ದ್ವಿತೀಯ ಗರಿಷ್ಠ ಮೊತ್ತ ದಾಖಲಾಯಿತು.