ಚೆನ್ನೈ: 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಗೆ ಒಂದು ಅಧಿಕೃತ ತೆರೆ ಬೀಳಲಿದೆ. ಚೆನ್ನೈಯಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(KKR vs SRH IPL 2024) ಮುಖಾಮುಖಿಯಾಗುವ ಮೂಲಕ ಟೂರ್ನಿ ಮುಕ್ತಾಯ ಕಾಣದಲಿದೆ. ಫೈನಲ್ ಪಂದ್ಯಕ್ಕೂ ಮುನ್ನ ವಿಶ್ವ-ಪ್ರಸಿದ್ಧ ಅಮೇರಿಕನ್ ರಾಕ್ ಬ್ಯಾಂಡ್ ಇಮ್ಯಾಜಿನ್ ಡ್ರಾಗನ್ಸ್(Imagine Dragons) ತಂಡದಿಂದ ಅದ್ಧೂರಿ ಸಂಗೀತ ರಸದೌತಣ ಕಾರ್ಯಕ್ರಮ(IPL 2024 closing ceremony) ನಡೆಯಲಿದೆ. ಪ್ರೋಮೋ ಹಂಚಿಕೊಂಡು ಈ ವಿಚಾರವನ್ನು ಸ್ಟಾರ್ ಸ್ಪೋರ್ಟ್ಸ್ ತನ್ನ ಅಧಿಕೃತ ಟ್ವೀಟರ್ ಎಕ್ಸ್ನಲ್ಲಿ ಪ್ರಕಟಿಸಿದೆ.
ವಿರಾಟ್ ಕೊಹ್ಲಿಯ(Virat Kohli) ಅಪ್ಪಟ ಅಭಿಮಾನಿಯಾಗಿರುವ ಅಮೆರಿಕನ್ ಸಿಂಗರ್, ಡಾನ್ ರೆನಾಲ್ಡ್ಸ್ ಸಮಾರೋಪ ಕಾರ್ಯಕ್ರಮದಲ್ಲಿ ಹಲವು ಹಾಡುಗಳನ್ನು ಹಾಡಲಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡುವ ವೇಳೆ ತಾನು ಕೊಹ್ಲಿಯ ಅಭಿಮಾನಿ, ಆತ ನಿಜವಾಗಿಯೂ ಗ್ರೇಟೆಸ್ಟ್ ಆಲ್ ಟೈಮ್ ಎಂದರು. ಅಲ್ಲದೆ ಅವರ ಬ್ಯಾಟಿಂಗ್ ನೋಡುವುದೇ ಒಂದು ಸುಂದರ ಅನುಭವ ಎಂದು ಕೊಹ್ಲಿಯನ್ನು ಗುಣಗಾನ ಮಾಡಿದರು. ಐಪಿಎಲ್ ಸಮಾರೋಪ ಸಮಾರಂಭವು ಸಂಜೆ 6 ಗಂಟೆಯಿಂದ ಪ್ರಾರಂಭವಾಗಲಿದೆ. ಪಂದ್ಯ 7.30ಕ್ಕೆ ಆರಂಭಗೊಳ್ಳಲಿದೆ.
ಭಾರೀ ಪೈಪೋಟಿ ನಿರೀಕ್ಷೆ
ಕೋಲ್ಕತಾ ವಿರುದ್ಧದ ಲೀಗ್ ಮತ್ತು ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಸೋಲು ಕಂಡಿದ್ದರೂ ಕೂಡ ಫೈನಲ್ ಪಂದ್ಯದ ಗೇಮ್ ಪ್ಲಾನ್ ಬೇರೆಯೆ ಇರಲಿದೆ. ಇದಕ್ಕೆ ಕಾರಣ ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿರುವ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್. ಆಸೀಸ್ ತಂಡ ಹಾಗೂ ಆಟಗಾರರು ಯಾವುದೇ ಫೈನಲ್ನಲ್ಲಿ ಡಿಫರೆಂಟ್ ಆಟಕ್ಕೆ ಹೆಸರುವಾಸಿ. ಟ್ರಾವಿಸ್ ಹೆಡ್ ಕೂಡ ಇದೇ ತಂಡದಲ್ಲಿದ್ದಾರೆ. ಅತ್ತ ಕೆಕೆಆರ್ ಪರ ಮಿಚೆಲ್ ಸ್ಟಾಕ್ ಇದ್ದಾರೆ. ಜತೆಗೆ ವಿಂಡೀಸ್ನ ಬಿಗ್ ಹಿಟ್ಟರ್ ಆ್ಯಂಡ್ರೆ ರಸೆಲ್, ಸುನೀಲ್ ನರೈನ್ ಕಾಣಿಸಿಕೊಂಡಿದ್ದಾರೆ. ಉಭಯ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ಫೈನಲ್ ಪಂದ್ಯ ರೋಚಕ ಮತ್ತು ತೀವ್ರ ಪೈಪೋಟಿಯಿಂದ ಕೂಡಿರಬಹುದು ಎಂದು ನಿರೀಕ್ಷೆ ಮಾಡಬಹುದು.
ಇದನ್ನೂ ಓದಿ KKR vs SRH IPL Final: ಫೈನಲ್ ಪಂದ್ಯಕ್ಕೆ ಕ್ಷಣಗಣನೆ; ಇತ್ತಂಡಗಳ ದಾಖಲೆ ಹೇಗಿದೆ?
ಫೈನಲ್ನಲ್ಲಿ ವಿಜೇತ ತಂಡ 20 ಕೋಟಿ ರೂಪಾಯಿ ಬಹುಮಾನವನ್ನು ಪಡೆಯಲಿದೆ. ರನ್ನರ್ ಅಪ್ ತಂಡಕ್ಕೆ 15 ಕೋಟಿ ರೂ. ಸಿಗಲಿದೆ. ಮೂರನೇ ಸ್ಥಾನಿಯಾದ ತಂಡಕ್ಕೆ 7 ಕೋಟಿ ಮತ್ತು 4ನೇ ಸ್ಥಾನಿಗೆ 6.5 ಕೋಟಿ ರೂ ಸಿಗಲಿದೆ. ಈಗಾಗಲೇ ರಾಜಸ್ಥಾನ್ ಮತ್ತು ಆರ್ಸಿಬಿ ಪ್ಲೇ ಆಫ್ನಲ್ಲಿ ಸೋಲಿ ಕಂಡು ಕ್ರಮವಾಗಿ 3 ಮತ್ತು ನಾಲ್ಕನೇ ಸ್ಥಾನ ಪಡೆದಿವೆ. ಹೀಗಾಗಿ ರಾಜಸ್ಥಾನ್ಗೆ(7 ಕೋಟಿ) ಮತ್ತು ಆರ್ಸಿಬಿಗೆ(6.5 ಕೋಟಿ) ಮೊತ್ತ ಸಿಗಲಿದೆ. ಒಟ್ಟು ಬಹುಮಾನ ಮೊತ್ತ 46.5 ಕೋಟಿ ರೂ. ಆಗಿದೆ.
ಸಂಭಾವ್ಯ ತಂಡಗಳು
ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್.
ಕೆಕೆಆರ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.