Site icon Vistara News

KKR vs SRH IPL Final: ರೀಮಲ್‌ ಚಂಡಮಾರುತ; ಫೈನಲ್​ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

KKR vs SRH IPL Final

kkr-vs-srh-ipl-final-chennai-weather-forecast-live-updates-cloud-cover-light-rain-expected-today

ಚೆನ್ನೈ: ಕಳೆದ ಮೂರು ತಿಂಗಳು ಕ್ರಿಕೆಟ್​ ಅಭಿಮಾನಿಗಳಿಗೆ ಸಂಪೂರ್ಣ ಮನರಂಜನೆ ನೀಡಿದ ಐಪಿಎಲ್‌ನ 17ನೇ(IPL 2024) ಆವೃತ್ತಿ ಕೊನೇ ಘಟ್ಟಕ್ಕೆ ತಲುಪಿದೆ. ಇಂದು (ಭಾನುವಾರ) ನಡೆಯಲಿರುವ ಫೈನಲ್‌(KKR vs SRH IPL Final) ಸಮರದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌(Kolkata Knight Riders) ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌(Sunrisers Hyderabad) ತಂಡಗಳು ಮುಖಾಮುಖಿ ಆಗುತ್ತಿವೆ. ಇತ್ತಂಡಗಳದ್ದು ಇದು ಮೊದಲ ಫೈನಲ್​ ಮುಖಾಮುಖಿ. ಇಲ್ಲೇ ನಡೆದಿದ್ದ ಕ್ವಾಲಿಫೈಯರ್​ ಪಂದ್ಯಕ್ಕೆ ಮಳೆ ಕಾಟ ಇರಲಿಲ್ಲ. ಆದರೆ ಫೈನಲ್​ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

ಪಶ್ಚಿಮ ಬಂಗಾಳದಲ್ಲಿ ವಾಯುಭಾರ ಕುಸಿತವಾಗಿ ರೀಮಲ್‌ ಚಂಡಮಾರುತ ಎದ್ದಿರುವ ಕಾರಣ. ಚೆನ್ನೈನಲ್ಲಿಯೂ ಮಳೆಯಾಗುವ ಸಾಧ್ಯೆ ಅಧಿಕವಾಗಿದೆ. ಐಎಂಡಿ ವರದಿ ಪ್ರಕಾರ ಭಾನುವಾರ ಪಶ್ಚಿಮ ಬಂಗಾಳಕ್ಕೆ ರೀಮಲ್‌ ಚಂಡಮಾರುತ ಅಪ್ಪಳಿಸುತ್ತದೆ. ಹೀಗಾಗಿ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ.

ಲೀಗ್​ ಹಂತದ ಯಾವುದೇ ಪಂದ್ಯಕ್ಕೂ ಮೀಸಲು ದಿನ ಇರಲಿಲ್ಲ. ಆದರೆ ನಾಕೌಟ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು(Reserve day) ದಿನ ಇದೆ. ಪೂರ್ಣ ಪಂದ್ಯ ನಡೆಸಲು ಹೆಚ್ಚುವರಿ 120 ನಿಮಿಷಗಳನ್ನು ನೀಡಲಾಗಿದೆ. ಈ ಸಮಯದಲ್ಲಿಯೂ ಪಂದ್ಯ ನಡೆಯದೇ ಹೋದರೆ ಆಗ ಡಕ್​ವರ್ತ್​ ನಿಯದ ಅನುಸಾರ ಓವರ್​ ಕಡಿತಗೊಳಿಸಿ ಪಂದ್ಯ ನಡೆಸುವ ನಿರ್ಣಾಯಕ್ಕೆ ಬರಲಾಗುತ್ತದೆ. ಈ ವೇಳೆಯೂ ಪಂದ್ಯ ನಡೆಯದೇ ಇದ್ದರೆ ಪಂದ್ಯವನ್ನು ಮೀಸಲ ದಿನಕ್ಕೆ ಮುಂದೂಡಲಾಗುತ್ತದೆ. ಒಂದೊಮ್ಮೆ ಮೀಸಲು ದಿನದ ಮೊದಲಿನ ದಿನ ಪಂದ್ಯ ಅರ್ಧಕ್ಕೆ ನಿಂತಿದ್ದರೆ, ಅಲ್ಲಿಂದಲೇ ಮರುದಿನ ಪಂದ್ಯ ಆರಂಭಿಸಲಾಗುತ್ತದೆ.

ಮೀಸಲು ದಿನಕ್ಕೂ ಮಳೆ ಬಂದರೆ?

ಮೀಸಲು ದಿನವೂ ಮಳೆ ಬಂದರೆ ಫಲಿತಾಂಶ ಹೇಗೆ ನಿರ್ಧರಿಸಲಾಗುತ್ತದೆ ಎನ್ನುವ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಿಗೆ ಕಾಡುವುದು ಸಹಜ. ಇದಕ್ಕೂ ಬಿಸಿಸಿಐ ಉತ್ತರ ನೀಡಿದೆ. ಒಂದು ವೇಳೆ ಮೀಸಲು ದಿನದಂದೂ ಕೂಡ ಮಳೆ ಅಡ್ಡಿ ಪಡಿಸಿದರೆ ಸೂಪರ್ ಓವರ್​ಗೆ ಅವಕಾಶವಿದೆ. ಇದಕ್ಕೂ ಕೂಡ ಮಳೆ ಅನುವು ಮಾಡಿಕೊಡದೇ ಇದ್ದಾಗ ಅಂತಿಮವಾಗಿ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಯಾರು ಮುಂದಿರುತ್ತಾರೋ ಆ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ. ಹೀಗಾದರೆ ಅಗ್ರಸ್ಥಾನಿ ಕೆಕೆಆರ್​ ಈ ಬಾರಿಯ ಚಾಂಪಿಯನ್​ ಪಟ್ಟ ಅಲಂಕರಿಸಲಿದೆ. ಏಕೆಂದರೆ ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.​ ಅಚ್ಚರಿ ಎಂದರೆ ಲೀಗ್​ ಹಂತದಲ್ಲಿ ಕೆಕೆಆರ್​ ಮತ್ತು ಹೈದರಾಬಾದ್​ ತಂಡಗಳ ಒಂದೊಂದು ಪಂದ್ಯ ಮಳೆಯಿಂದ ರದ್ದಾಗಿತ್ತು.

ಇದನ್ನೂ ಓದಿ KKR vs SRH Final 2024: ನಾಳೆ ಕೆಕೆಆರ್​-ಹೈದರಾಬಾದ್​ ಫೈನಲ್​ ಕಾದಾಟ; ಯಾರಿಗೆ ಒಲಿಯಲಿದೆ ಐಪಿಎಲ್​ ಕಿರೀಟ?

ಉಭಯ ತಂಡಗಳ ಐಪಿಎಲ್​ ಇತಿಹಾಸ ನೋಡುವಾಗ ಕೆಕೆಆರ್​ ಬಲಿಷ್ಠವಾಗಿದೆ. ಇದುವರೆಗೆ 27 ಪಂದ್ಯಗಳನ್ನು ಆಡಿ 18 ಪಂದ್ಯಗಳಲ್ಲಿ ಕೆಕೆಆರ್​ ಗೆಲುವು ಸಾಧಿಸಿದೆ. ಹೈದರಾಬಾದ್​ ಕೇವಲ 9 ಪಂದ್ಯ ಮಾತ್ರ ಗೆದ್ದಿದೆ. ಈ ಆವೃತ್ತಿಯಲ್ಲಿಯೂ ಆಡಿದ ಲೀಗ್​ ಮತ್ತು ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಹೈದರಾಬಾದ್​ ಸೋಲು ಕಂಡಿತ್ತು. ಈ ಲೆಕ್ಕಾಚಾರವನ್ನು ನೋಡುವಾಗ ಇಂದಿನ ಪಂದ್ಯದಲ್ಲಿಯೂ ಕೆಕೆಆರ್​ ಗೆಲುವಿನ ಫೇವರಿಟ್ ತಂಡವಾಗಿದೆ.

ಸಂಭಾವ್ಯ ತಂಡಗಳು


ಹೈದರಾಬಾದ್​:
 ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್​ ಕೀಪರ್​), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್.

ಕೆಕೆಆರ್​: ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್​), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

Exit mobile version