Site icon Vistara News

KKR vs SRH IPL Final: ಫೈನಲ್​ ಪಂದ್ಯಕ್ಕೆ ಕ್ಷಣಗಣನೆ; ಇತ್ತಂಡಗಳ ದಾಖಲೆ ಹೇಗಿದೆ?

KKR vs SRH IPL Final

KKR vs SRH IPL Final: Countdown to Final Match; How is the record of these teams?

ಚೆನ್ನೈ: ಸನ್​ರೈಸರ್ಸ್​ ಹೈದರಾಬಾದ್(KKR vs SRH Final 2024)​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders) ವಿದುದ್ಧದ ಐಪಿಎಲ್​-2024ರ(IPL 2024) ಫೈನಲ್​ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಉಭಯ ತಂಡಗಳ ಪ್ರಶಸ್ತಿ ಕಾಳಗಕ್ಕೆ ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ.

ಮೇ 21 ಮಂಗಳವಾರ ನಡೆದಿದ್ದ ಮೊದಲ ಕ್ವಾಲಿಫೈಯರ್‌(KKR vs SRH Qualifier 1) ಪಂದ್ಯದಲ್ಲಿ ಕೆಕೆಆರ್​ ತಂಡ ಹೈದರಾಬಾದ್(Sunrisers Hyderabad)​ ವಿರುದ್ಧ 8 ವಿಕೆಟ್​ ಅಂತರದ ಗೆಲುವು ಸಾಧಿಸಿತ್ತು. ಲೀಗ್​ ಹಂತದ ಪಂದ್ಯದಲ್ಲಿಯೂ ಕೆಕೆಆರ್​ ಮೇಲುಗೈ ಸಾಧಿಸಿತ್ತು. ಇದೀಗ ಈ ಎಲ್ಲ ಸೋಲಿಗೆ ಕಮಿನ್ಸ್​ ಪಡೆ​ ಫೈನಲ್​ನಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಪಿಚ್​ ರಿಪೋರ್ಟ್​


ಚೆನ್ನೈಯ ಎಂ.ಎ.ಚಿದಂಬರಂ ಮೈದಾನ ಪಿಚ್​ ನಿಧಾನಗತಿಯಿಂದ ಕೂಡಿದೆ. ಸ್ಪಿನ್‌ ಸ್ನೇಹಿಯಾಗಿದ್ದರೂ ಕೂಡ ಈ ಮೈದಾನ ಹೈ ಸ್ಕೋರಿಂಗ್‌ ಪಂದ್ಯ ಕೂಡ ಕಂಡುಬಂದಿದೆ. ಚೆನ್ನೈ ಮತ್ತು ಲಕ್ನೋ ನಡುವಣ ಪಂದ್ಯದಲ್ಲಿ ಚೆನ್ನೈ 210 ರನ್‌ ಬಾರಿಸಿತ್ತು. ಈ ಬೃಹತ್​ ಮೊತ್ತವನ್ನು ಲಕ್ನೋ ತಂಡ 19.3 ಓವನ್‌ನಲ್ಲೇ ಗುರಿ ತಲುಪಿತ್ತು. ಹೀಗಾಗಿ ಪಿಚ್​ ವರ್ತನೆಯನ್ನು ಸ್ಪಷ್ಟವಾಗಿ ಹೇಳುವುದು ಕೊಂಚ ಕಷ್ಟವಾಗಿದೆ. ಮಂಜಿನ ಕಾಟ ಇರುವ ಕಾರಣ ಟಾಸ್‌ ಗೆಲ್ಲುವ ತಂಡ ಬೌಲಿಂಗ್‌ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.

ಮುಖಾಮುಖಿ


ಕೆಕೆಆರ್​ ಮತ್ತು ಸನ್​ರೈಸರ್ಸ್ ಹೈದರಾಬಾದ್​ ತಂಡಗಳು ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ 27 ಪಂದ್ಯಗಳನ್ನು ಆಡಿದೆ. ಈ ಪೈಕಿ 18 ಪಂದ್ಯಗಳಲ್ಲಿ ಕೆಕೆಆರ್​ ಗೆಲುವು ಸಾಧಿಸಿದೆ. ಹೈದರಾಬಾದ್​ ಕೇವಲ 9 ಪಂದ್ಯ ಮಾತ್ರ ಗೆದ್ದಿದೆ. ಈ ಆವೃತ್ತಿಯಲ್ಲಿಯೂ ಆಡಿದ ಲೀಗ್​ ಮತ್ತು ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಹೈದರಾಬಾದ್​ ಸೋಲು ಕಂಡಿತ್ತು. ಈ ಲೆಕ್ಕಾಚಾರವನ್ನು ನೋಡುವಾಗ ಇಂದಿನ ಪಂದ್ಯದಲ್ಲಿಯೂ ಕೆಕೆಆರ್​ ಗೆಲುವಿನ ಫೇವರಿಟ್ ತಂಡವಾಗಿದೆ. ಫೈನಲ್​ನಲ್ಲಿ ಇತ್ತಂಡಗಳು ಪರಸ್ಪರ ಎದುರಾಗುತ್ತಿರುವುದು ಇದೇ ಮೊದಲು.

ಇದನ್ನೂ ಓದಿ KKR vs SRH IPL Final: ರೀಮಲ್‌ ಚಂಡಮಾರುತ; ಫೈನಲ್​ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

ಆಸ್ಟ್ರೇಲಿಯಾದ ನಾಯಕನಾಗಿರುವ ಪ್ಯಾಟ್​ ಕಮಿನ್ಸ್​ 2 ವಿಶ್ವಕಪ್​ ಗೆದ್ದ ನಾಯಕ. ಅದು ಕೂಡ ಚೊಚ್ಚಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿದ್ದಾರೆ. ಟೆಸ್ಟ್​ ಮತ್ತು ಏಕದಿನ ವಿಶ್ವಕಪ್​ನಲ್ಲಿ ಅವರು ಟ್ರೋಫಿ ಗೆದ್ದಿದ್ದಾರೆ. ಹೀಗಾಗಿ ಇವರು ಹೈದರಾಬಾದ್​ಗೂ ತಮ್ಮ ನಾಯಕತ್ವದಲ್ಲಿ ಕಪ್​ ಗೆಲ್ಲಬಹುದು ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ನಂಬಿಕೆ. ಮೊತ್ತೊಂದೆಡೆ ಆಸ್ಟ್ರೇಲಿಯಾ ಟೆಸ್ಟ್​ ಮತ್ತು ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಗೆಲುವಿನ ಹೀರೊ ಎನಿಸಿಕೊಂಡಿದ್ದ ಟ್ರಾವಿಸ್​ ಹೆಡ್​ ಕೂಡ ಹೈದರಾಬಾದ್​ ತಂಡದಲ್ಲಿದ್ದಾರೆ. ಹೀಗಾಗಿ ಫೈನಲ್​ನಲ್ಲಿಯೂ ಇವರ ಸ್ಫೋಟಕ ಬ್ಯಾಟಿಂಗ್​ ನಿರೀಕ್ಷೆ ಮಾಡಲಾಗಿದೆ.

ಕೆಕೆಆರ್​ ಪಾಲಿನ ದೊಡ್ಡ ಬಲವೆಂದರೆ ಆಟಗಾರರ ಸಂಘಟಿತ ಪ್ರದರ್ಶನ. ಬ್ಯಾಟಿಂಗ್​, ಬೌಲಿಂಗ್​ ಎರಡೂ ವಿಭಾಗದಲ್ಲಿ ಸಮರ್ಥವಾಗಿದೆ. ಸೀಮಿತ ಆಗಾರರ ಪ್ರದರ್ಶನದ ಮೇಲೆ ತಂಡ ನೆಚ್ಚಿಕೊಂಡಿಲ್ಲ. ಇಂಗ್ಲೆಂಡ್​ನ ಫಿಲ್​ ಸಾಲ್ಟ್ ಪಾಕ್​ ವಿರುದ್ಧದ ಟಿ20 ಸರಣಿಯ ಭಾಗವಾಗಿ ತವರಿಗೆ ಮರಳಿದ್ದರೂ ಕೂಡ ಇವರ ಸ್ಥಾನದಲ್ಲಿ ಕಳೆದ ಪಂದ್ಯದಲ್ಲಿ ಆಡಲಿಳಿದಿದ್ದ ಅಫಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ಸು ಕಂಡಿದ್ದರು. ಆ್ಯಂಡ್ರೆ ರೆಸಲ್​ ಈ ಬಾರಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

Exit mobile version