Site icon Vistara News

KL Rahul Retirement: ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿದ ಕೆ.ಎಲ್​ ರಾಹುಲ್?; ಇನ್​ಸ್ಟಾಗ್ರಾಮ್​ ಪೋಸ್ಟ್​ ವೈರಲ್​​

KL Rahul announces retirement?

KL Rahul announces retirement? Amid cricketer’s Instagram story, fake post goes viral

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ, ಕನ್ನಡಿಗ ಕೆ.ಎಲ್​ ರಾಹುಲ್(KL Rahul) ​ ಅವರು ದೀಢಿರ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ(KL Rahul Retirement) ಹೇಳಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ರಾಹುಲ್​ ನಿವೃತ್ತಿಯ ಬಗ್ಗೆ ಪೋಸ್ಟ್​ ಕಂಡ ಅವರ ಅಭಿಮಾನಿಗಳು ಅಚ್ಚರಿಯ ಜತೆಗೆ ಆತಂಕ ಪಡುವಂತಾಗಿದೆ. ರಾಹುಲ್​ ವಿದಾಯದ ಪೋಸ್ಟರ್​ನ ಅಸಲಿ ಸತ್ಯ ಇಲ್ಲಿದೆ.

ವೈರಲ್​ ಪೋಸ್ಟ್​ ಹೇಗಿದೆ?


ವೈರಲ್‌ ಆಗುತ್ತಿರುವ ಪೋಸ್ಟ್‌ನಲ್ಲಿ ಕೆ.ಎಲ್ ರಾಹುಲ್ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. “ಭಾರತ ತಂಡವನ್ನು ಪ್ರತಿನಿಧಿಸಿದ ಹೆಮ್ಮೆ ನನ್ನದು. ಅನೆಕ ಪ್ರತಿಭಾನ್ವಿತ ಆಟಗಾರರೊಂದಿಗೆ ಆಡಿದ ಸವಿ ನೆನಪು ಇದೆ. ನಾನು ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಈ ನಿರ್ಧಾರವು ಸುಲಭವಲ್ಲ, ಏಕೆಂದರೆ ಅನೇಕ ವರ್ಷಗಳಿಂದ ಕ್ರಿಕೆಟ್ ನನ್ನ ಜೀವನದ ಪ್ರಮುಖ ಭಾಗವಾಗಿದೆ. ನನ್ನ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ನನ್ನ ಕುಟುಂಬ, ಸ್ನೇಹಿತರು, ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಮೈದಾನದ ಒಳಗೆ ಮತ್ತು ಹೊರಗೆ ನಾನು ಪಡೆದ ಅನುಭವಗಳು ಮತ್ತು ನೆನಪುಗಳು ನಿಜವಾಗಿಯೂ ಬೆಲೆಕಟ್ಟಲಾಗದವು. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದಿದೆ.

ರಾಹುಲ್​ ಅವರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕ ಭಾರತ ತಂಡದ ಪರ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಲೇ ಬಂದಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಟಿ20 ವಿಶ್ವಕಪ್​ಗೂ ಆಯ್ಕೆ ಮಾಡಿರಲಿಲ್ಲ. ಕಳೆದ ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ಕಳಪೆ ಪ್ರದರ್ಶನ ತೋರಿದ್ದರು. ಹೀಗಾಗಿ ಅವರಿಗೆ ತಂಡದಲ್ಲಿ ಇನ್ನು ಸ್ಥಾನ ಸಿಗುವುದು ಅನುಮಾನ ಎನ್ನಲಾಗಿತ್ತು. ಹೀಗಾಗಿ ರಾಹುಲ್​ ಅವರ ನಿವೃತ್ತಿಯ ಪೋಸ್ಟ್ ಭಾರೀ ಸದ್ದು ಮಾಡಿತು. ಅಸಲಿ ಸತ್ಯ ಬೇರೆಯೇ ಇದೆ.​

ರಾಹುಲ್​ ಮಾಡಿದ್ದ ಪೋಸ್ಟ್​ ಏನು?


ರಾಹುಲ್ ಮತ್ತು ಪತ್ನಿ ಅಥಿಯಾ ಶೆಟ್ಟಿ (Athiya Shetty) ಅವರು ವಿಶೇಷ ಮಕ್ಕಳ ಶಾಲೆಯ (Special Needs School) ನೆರವಿಗಾಗಿ ಮುಂಬೈನ BKC ಯಲ್ಲಿನ ವಿಶೇಷ ಮಕ್ಕಳ ಶಾಲೆಗೆ ಅಗತ್ಯವಿರುವ ಬೆಂಬಲ ನೀಡುವ ಸಲುವಾಗಿ ವಿಪ್ಲಾ ಫೌಂಡೇಶನ್‌ಗೆ (Vipla Foundation) ನಿಧಿ ಸಂಗ್ರಹಿಸಲು ಇತರೆ ಕ್ರಿಕೆಟಿಗರ ಜತೆ ಕೈಜೋಡಿಸಿದ್ದಾರೆ. ಈ ವಿಚಾರವನ್ನು ಅವರು ಕೆಲ ದಿನಗಳ ಹಿಂದೆ ಫೋಷಿಸಿದ್ದರು. ಇದರ ಭಾಗವಾಗಿ ರಾಹುಲ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಮಾಡಿದ್ದರು.


ಇದನ್ನೂ ಓದಿ KL Rahul: ಆರ್‌ಸಿಬಿ ಸೇರದಂತೆ ಕೆ.ಎಲ್​ ರಾಹುಲ್‌ಗೆ 25 ಕೋಟಿ ಆಫರ್ ಮಾಡಿದ ಫ್ರಾಂಚೈಸಿ!

ರಾಹುಲ್​ ಮಾಡಿದ ಪೋಸ್ಟ್​ನಲ್ಲಿ “ನಾನು ನಿಮ್ಮ ಬಳಿ ಏನ್ನನ್ನೋ ಹೇಳಬೇಕಿದೆ.. ಕಾಯುತ್ತಿರಿ‘ (I have an announcement to make, stay tuned) ಎಂದು ಬರೆದುಕೊಂಡಿದ್ದರು. ಆದರೆ, ಕೆಲ ಕಿಡಿಗೇಡಿಗಳು ಈ ಪೋಸ್ಟ್​ ತಿರುಚಿ ರಾಹುಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ ಎಂಬ ವದಂತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಿದ್ದಾರೆ. ಅಸಲಿಗೆ ರಾಹುಲ್​ ಕ್ರಿಕೆಟ್​ಗೆ ನಿವೃತ್ತಿ ಹೇಳಲು ಬಯಸಿಲ್ಲ. ಪೋಸ್ಟ್​ನ ಅಸಲಿ ಸತ್ಯ ತಿಳಿದ ಬಳಿಕ ಅವರ ಅಭಿಮಾನಿಗಳು ಸದ್ಯ ನಿಟ್ಟುಸಿರುಬಿಟ್ಟಿದ್ದಾರೆ.

Exit mobile version