ಬೆಂಗಳೂರು: ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಭಾರತದ ಸ್ಟಾರ್ ಬ್ಯಾಟರ್ ಕೆ,.ಎಲ್. ರಾಹುಲ್ 2023 ರ ಏಷ್ಯಾ ಕಪ್ 2023 ಗಾಗಿ ಶ್ರೀಲಂಕಾಕ್ಕೆ ಪ್ರಯಾಣಿಸಲಿದ್ದಾರೆ ಎಂಬುದಾಗಿ ವರದಿಯಾಗಿದೆ. ರಾಹುಲ್ ಸೂಪರ್ 4 ಹಂತದಿಂದ ತಂಡದ ಆಯ್ಕೆಗೆ ಲಭ್ಯವಿರುತ್ತಾರೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2023 ರ 43 ನೇ ಪಂದ್ಯದ ಸಮಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡ ನಂತರ 31 ವರ್ಷದ ಆಟಗಾರ ಕ್ರಿಕೆಟ್ನಿಂದ ಹೊರಗುಳಿದಿದ್ದರು..
ರಾಹುಲ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023 ರ ಫೈನಲ್ನಿಂದ ಹೊರಗುಳಿದಿದ್ದರು. ತೊಡೆ ಮತ್ತು ಸೊಂಟದ ಕೆಳಭಾಗದ ಗಾಯಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಅವರು ಎನ್ಸಿಎನಲ್ಲಿ ಪುನಶ್ಚೇತನಕ್ಕೆ ಒಳಗಾದರು. ಏಷ್ಯಾ ಕಪ್ 2023ಗಾಗಿ ತಂಡಕ್ಕೆ ಆಯ್ಕೆಯಾದರು. ಆದಾಗ್ಯೂ, ವಿಕೆಟ್ ಕೀಪರ್-ಬ್ಯಾಟರ್ ಆಯ್ಕೆಗೆ ಕೆಲವೇ ದಿನಗಳ ಮೊದಲು ಪಂದ್ಯದ ಸಿಮ್ಯುಲೇಷನ್ ವೇಳೆ ಹೊಸ ತೊಂದರೆಗೆ ಒಳಗಾದರು. ಹೀಗಾಗಿ ಅವರು ತಂಡದೊಂದಿಗೆ ಶ್ರೀಲಂಕಾಗೆ ಪ್ರಯಾಣ ಮಾಡಿರಲಿಲ್ಲ. ಇದೀಗ ಅವರ ಹೊಸ ಫಿಟ್ನೆಸ್ ವರದಿ ಬಂದಿದೆ.
ಅಕ್ಟೋಬರ್ 05 ರಿಂದ ಭಾರತದಲ್ಲಿ ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್ 2023 ಕ್ಕೆ ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ರಾಹುಲ್ ಏಷ್ಯಾ ಕಪ್ 2023 ಗಾಗಿ ತಂಡದೊಂದಿಗೆ ಶ್ರೀಲಂಕಾಕ್ಕೆ ಪ್ರಯಾಣಿಸಲಿಲ್ಲ. ಎನ್ಸಿಎನಲ್ಲಿ ಉಳಿದುಕೊಂಡಿದ್ದರು. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಕೂಡ ಕಾಂಟಿನೆಂಟಲ್ ಪಂದ್ಯಾವಳಿಯ ಮೊದಲ ಕೆಲವು ಪಂದ್ಯಗಳಲ್ಲಿ ರಾಹುಲ್ ಅಲಭ್ಯತೆಯನ್ನು ಉಲ್ಲೇಖಿಸಿದ್ದರು.
ಇತ್ತೀಚಿನ ಬೆಳವಣಿಗೆಯಲ್ಲಿ ಅವರು ಎನ್ಸಿಎಯಲ್ಲಿ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕ್ಯಾಂಡಿಯಲ್ಲಿ ಭಾರತೀಯ ತಂಡವನ್ನು ಸೇರಲಿದ್ದಾರೆ. ಸೂಪರ್ 4 ಹಂತದಿಂದ ರಾಹುಲ್ ಆಯ್ಕೆಗೆ ಲಭ್ಯವಿರುತ್ತಾರೆ ಎಂದು ವರದಿ ತಿಳಿಸಿದೆ.
ರಾಹುಲ್ ಅಲಭ್ಯತೆಯಲ್ಲಿ ಮಿಂಚಿದ್ದ ಇಶಾನ್
ರಾಹುಲ್ ಅನುಪಸ್ಥಿತಿಯಲ್ಲಿ, ಇಶಾನ್ ಕಿಶನ್ ಪಾಕಿಸ್ತಾನ ವಿರುದ್ಧದ ಭಾರತದ ಮೊದಲ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕೆಲಸವನ್ನು ಅದ್ಧೂರಿಯಾಗಿ ಮಾಡಿದ್ದಾರೆ. 81 ಎಸೆತಗಳಲ್ಲಿ 82 ರನ್ ಸಿಡಿಸಿದ ಅವರು ಇನಿಂಗ್ಸ್ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ಗಳನ್ನು ಬಾರಿಸಿದ್ದರು.
ಇದನ್ನೂ ಓದಿ : Virat Kohli: ವಿರಾಟ್ ಕೊಹ್ಲಿಯ ಕಿವಿಯೋಲೆಗೆ ಅಭಿಮಾನಿಗಳು ಫಿದಾ; ಹೀಗಿದೆ ನ್ಯೂ ಲುಕ್
ಹಾರ್ದಿಕ್ ಪಾಂಡ್ಯ (90 ಎಸೆತಗಳಲ್ಲಿ 87 ರನ್) ಅವರೊಂದಿಗೆ ಐದನೇ ವಿಕೆಟ್ಗೆ 138 ರನ್ಗಳ ನಿರ್ಣಾಯಕ ಜತೆಯಾಟವನ್ನು ರಚಿಸಿದ ಕಿಶನ್, ಭಾರತವು 66/4 ರಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದ್ದರು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಪಂದ್ಯ ರದ್ದಾಗಿದ್ದರಿಂದ ಕ್ರಿಕೆಟ್ ಅಭಿಮಾನಿಗಳು ನಿರಾಶೆಗೊಂಡರು. ಭಾರತವು ಸೆಪ್ಟೆಂಬರ್ 04 ರ ಸೋಮವಾರ ಅದೇ ಸ್ಥಳದಲ್ಲಿ ನೇಪಾಳವನ್ನು ಎದುರಿಸಲಿದೆ. ಪಂದ್ಯಾವಳಿಯ ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯಲು ಪಂದ್ಯವನ್ನು ಗೆಲ್ಲಬೇಕು ಅಥವಾ ಸಮಗೊಳಿಸಬೇಕು.