Site icon Vistara News

KL Rahul : ದ. ಆಫ್ರಿಕಾ ವಿರುದ್ಧ ಫಿಫ್ಟಿ ಬಾರಿಸಿ ರೋಹಿತ್​, ವಿರಾಟ್ ಕ್ಲಬ್ ಸೇರಿದ ರಾಹುಲ್

KL Rahu

ಬೆಂಗಳೂರು: ಪೋರ್ಟ್ ಎಲಿಜಬೆತ್​ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಕೆ.ಎಲ್ ರಾಹುಲ್ (KL Rahul) ಅರ್ಧಶತಕ ಬಾರಿಸಿದ್ದಾರೆ. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಮತ್ತು ಮೂರನೇ ಕ್ರಮಾಂಕದ ತಿಲಕ್ ವರ್ಮಾ ಅವರನ್ನು ಔಟ್ ಆದ ನಂತರ ಕೀಸ್​ಗೆ ಆಗಮಿಸಿದ ರಾಹುಲ್, ಯುವ ಸಾಯಿ ಸುದರ್ಶನ್ ಅವರೊಂದಿಗೆ ಮೂರನೇ ವಿಕೆಟ್ಗೆ 68 ರನ್​ಗಳ ಜತೆಯಾಟ ಆಡಿದ್ದರು. ಆ ಬಳಿಕ ಅವರು ಅರ್ಧ ಶತಕ ಪೂರೈಸಿದರು. ಇದರೊಂದಿಗೆ ಅವರು 2023ರ ಕ್ಯಾಲೆಂಡರ್ ವರ್ಷದಲ್ಲಿ 1,000 ರನ್​ಗಳ ದಾಖಲೆಯನ್ನು ತಮ್ಮದಾಗಿಸಿಕೊಂಡರು.

2023ರಲ್ಲಿ ಸಾವಿರ ರನ್ ಬಾರಿಸಿದ ಭಾರತ ತಂಡದ ಎಲೈಟ್​ ಕ್ಲಬ್​ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇದ್ದಾರೆ. ಇದೀಗ ಕೆಎಲ್ ರಾಹುಲ್ ಸೇರ್ಪಡೆಗೊಂಡಿದ್ದಾರೆ. ಭಾರತ ತಂಡ 42 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡಿದ್ದ ಸಮಯದಲ್ಲಿ ಆಡಲು ಬಂದ ರಾಹುಲ್​ ದಕ್ಷಿಣ ಆಫ್ರಿಕಾದ ಬೌಲರ್​ಗಳಿಗೆ ಸೆಡ್ಡು ಹೊಡೆದರು. ಆರಂಭಿಕ ಹಿನ್ನಡೆ ಹೊಂದಿದ್ದ ಭಾರತ ತಂಡಕ್ಕೆ ಚೈತನ್ಯ ನೀಡಿದ ಅವರು ಏಕದಿನ ವೃತ್ತಿಜೀವನದ 25 ನೇ ಅರ್ಧಶತಕವನ್ನು ಗಳಿಸಿದರು.

23 ಪಂದ್ಯಗಳಲ್ಲಿ ಸಾವಿರ ರನ್​

ಈ ಇನ್ನಿಂಗ್ಸ್ 2023ರಲ್ಲಿ 1,000 ರನ್​ಗಗಳ ಗಡಿ ದಾಟಲು ಅವರಿಗೆ ನೆರವಾಯಿತು. ಇದು 31 ವರ್ಷದ ಬಲಗೈ ಬ್ಯಾಟರ್​ಗೆ 2023ರಲ್ಲಿ ಕೇವಲ 23 ನೇ ಪಂದ್ಯವಾಗಿದೆ. 2023 ರಲ್ಲಿ 1,000 ರನ್ ಪೂರೈಸಿದ ವಿಶ್ವದ ಎಂಟನೇ ಕ್ರಿಕೆಟಿಗ ಕೆ. ಎಲ್​ ರಾಹುಲ್​ ಎನಿಸಿಕೊಂಡಿದ್ದಾರೆ. ಭಾರತ ಪರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಲ್ಲದೆ ಸ್ಟಾರ್ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಕೂಡ ಇದ್ದಾರೆ.

ಇದನ್ನೂ ಓದಿ : Sai Sudharsan : ಸಿಧು ಸಾಲಿಗೆ ಸೇರಿದ ಎಡಗೈ ಬ್ಯಾಟರ್​ ಸಾಯಿ ಸುದರ್ಶನ್​

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ನಾಂಡ್ರೆ ಬರ್ಗರ್ ಅಂತಿಮವಾಗಿ 64 ಎಸೆತಗಳಲ್ಲಿ 56 ರನ್ ಗಳಿಸಿದ ರಾಹುಲ್ ಅವರನ್ನು ಔಟ್​ ಮಾಡಿದರು. ರಾಹುಲ್ ತಮ್ಮ ಇನ್ನಿಂಗ್ಸ್​​ನಲ್ಲಿ ಏಳು ಬೌಂಡರಿಗಳನ್ನು ಸಿಡಿಸದರು. ಅರ್ಧಶತಕ ಗಳಿಸಿದ ಸಾಯಿ ಸುದರ್ಶನ್ (62) ನಂತರ ಭಾರತೀಯ ಇನಿಂಗ್ಸ್​ ಪರ ಹೆಚ್ಚು ಮೊತ್ತ ಗಲಿಸಿದ ಆಟಗಾರ ಎನಿಸಿಕೊಂಡರು.

ನಾಯಕ ಮತ್ತು ಯುವ ಆಟಗಾರ ಸುದರ್ಶನ್ ನಡುವಿನ 68 ರನ್​ಗಳ ಜೊತೆಯಾಟದ ನಂತರ ಟೀಮ್ ಇಂಡಿಯಾ ತನ್ನ ಬ್ಯಾಟಿಂಗ್ ಬಲವನ್ಉ ಕಳೆದುಕೊಂಡಿದ್ದರಿಂದ ಭಾರತ 211 ರನ್​ಗಳಿಗೆ ಆಲ್​ಔಟ್ ಆಯಿತು.

Exit mobile version