ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ನಾಯಕನಾಗಿರುವ ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ಈ ಸರಣಿಗಾಗಿ ಭರ್ಜರಿ ತಾಲೀಮು(kl rahul practice) ನಡೆಸುತ್ತಿದ್ದಾರೆ. ಬೆಂಗಳೂರಿನ ಎನ್ಸಿಎ ಮೈದಾನಲ್ಲಿ ಅವರು ಫಿಟ್ನೆಸ್ ಅಭ್ಯಾಸದಲ್ಲಿ ನಿರತಾಗಿದ್ದಾರೆ. ಅತಿಯಾದ ಪ್ರ್ಯಾಕ್ಟೀಸ್ ನಡೆಸಿ ಸುತ್ತಾದ ಅವರು ವಾಂತಿಯನ್ನು ಮಾಡಿಕೊಂಡಿದ್ದಾರೆ. ಇದರ ವಿಡಿಯೊವನ್ನು ಅವರೇ ಸ್ವತಃ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಹುಲ್ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಅವರು ವ್ಯಾಯಾಮ ಮಾಡಿತ್ತಿರುವುದು, ಮೈದಾನಕ್ಕೆ ಸುತ್ತ ಸತತವಾಗಿ ಎಂದೆರಡು ಸುತ್ತು ಓಡುತ್ತಿರುವುದು ಹೀಗೆ ಕೆಲ ಫಿಟ್ನೆಸ್ ಮಾಡುವುದನ್ನು ಕಾಣಬಹುದಾಗಿದೆ. ‘ಹೊಸದನ್ನು ಪ್ರಯತ್ನಿಸುತ್ತಿದ್ದೇನೆ. ಇನ್ನು ಹೆಚ್ಚು ಏನಾದರೂ ಪ್ರಯತ್ನಿಸಬೇಕಾದರೆ ಕಾಮೆಂಟ್ ಮಾಡಿ’ ಎಂದು ಬರೆದುಕೊಂಡಿದ್ದಾರೆ.
ಸತತವಾಗಿ ಮೈದಾನಕ್ಕೆ ಓಡಿ ಸುತ್ತಾಗಿ ತಲೆ ತಿರುಗಿದಂತಾದ ಕಾರಣ ಅವರು ವಾಂತಿಯನ್ನು ಮಾಡಿಕೊಂಡಿದ್ದಾರೆ. ಇದು ಕೂಡ ಈ ವಿಡಿಯೊದಲ್ಲಿ ಸೆರೆಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಡಿ.17ರಿಂದ ಆರಂಭವಾಗಲಿದೆ.
ಸೇಡು ತೀರಿಸುವ ತವಕ
ಕಳೆದ ವರ್ಷ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಮಾಡಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ರಾಹುಲ್ ತಂಡದ ನಾಯಕರಾಗಿದ್ದರು. ಆದರೆ ಇದರಲ್ಲಿ ಭಾರತ ಸೋಲನುಭವಿಸಿತ್ತು. ಇದೀಗ ಮತ್ತೆ ರಾಹುಲ್ ಸಾರಥ್ಯದಲ್ಲಿ ಒಂದು ವರ್ಷಗಳ ಬಳಿಕ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಆಡಲಿದೆ. ಹೀಗಾಗಿ ರಾಹುಲ್ ಅವರು ಅಂದಿನ ಸೋಲಿಗೆ ಈ ಬಾರಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ
ಭಾರತ ಏಕದಿನ ತಂಡ
ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ-ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶದೀಪ್ ಸಿಂಗ್, ದೀಪಕ್ ಚಹಾರ್.
ಇದನ್ನೂ ಓದಿ ಬಡ ಕ್ರಿಕೆಟ್ ಆಟಗಾರರ ನೆರವಿಗೆ ನಿಂತ ರಿಂಕು ಸಿಂಗ್; ಶೀಘ್ರದಲ್ಲೇ ಹಾಸ್ಟೆಲ್ ಲೋಕಾರ್ಪಣೆ
ಇತ್ತೀಚೆಗೆ ಮುಕ್ತಾಯ ಕಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ಜತೆಗೆ ವಿಕೆಟ್ ಕೀಪಿಂಗ್‌ನಲ್ಲೂ ಗಮನ ಸೆಳೆದಿದ್ದ ಕೆ.ಎಲ್ ರಾಹುಲ್ 11 ಪಂದ್ಯಗಳಿಂದ 75 ಸರಾಸರಿಯಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳೊಂದಿಗೆ 452 ರನ್ ಗಳಿಸಿ, ಟೀಮ್ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ 4ನೇ ಬ್ಯಾಟರ್ ಆಗಿದ್ದರು. ಅಲ್ಲದೆ ಫೈನಲ್ ಪಂದ್ಯದಲ್ಲಿ 66 ರನ್ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು. ಆದರೆ ಉಳಿದ ಆಟಗಾರರ ವೈಫಲ್ಯದಿಂದ ತಂಡ ಸೋಲು ಕಂಡಿತ್ತು.
ಸೋಲು ಇನ್ನು ಕಾಡುತ್ತಿದೆ
ಕೆಲ ದಿನಗಳ ಹಿಂದೆ ರಾಹುಲ್ ಅವರು ವಿಶ್ವಕಪ್ ಫೈನಲ್(India vs Australia, Final) ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ಗಳಿಂದ ಸೋತು ವಿಶ್ವಕಪ್ ಟ್ರೋಫಿ ಕಳೆದುಕೊಂಡ ನೋವು ಇನ್ನೂ ಕಾಡುತ್ತಲೇ ಇದೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದರು. ಫೈನಲ್ ಪಂದ್ಯಕ್ಕೆ ಸಂಬಂಧಿಸಿದ 3 ಫೋಟೋಗಳು ಮತ್ತು ಒಡೆದ ಹೃದಯದ ಎಮೋಜಿ ಹಾಕುವ ಮೂಲಕ ಫೈನಲ್ ಪಂದ್ಯದ ಸೋಲಿನಿಂದ “ಇನ್ನೂ ನೋವಿದೆ” ಎಂದು ಬರೆದುಕೊಂಡಿದ್ದರು.
still hurts… 💔 pic.twitter.com/yRb2JPkelP
— K L Rahul (@klrahul) November 23, 2023