Site icon Vistara News

Viral Video: ‘ರಾಮ್ ಸಿಯಾ ರಾಮ್’ ಕುರಿತು ಸಂಭಾಷಣೆ ನಡೆಸಿದ ರಾಹುಲ್-ಮಹಾರಾಜ್

kl rahul and keshav maharaj

ಪಾರ್ಲ್: ಪ್ರವಾಸಿ ಭಾರತ ತಂಡ ದಕ್ಷಿಣ ಆಫ್ರಿಕಾ(South Africa vs India, 3rd ODI) ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿ ಸರಣಿ ಜಯ ಕಂಡಿದೆ. ಈ ಪಂದ್ಯದಲ್ಲಿ ನಾಯಕ ಕೆ.ಎಲ್​ ರಾಹುಲ್(KL Rahul)​ ಮತ್ತು ಕೇಶವ್​ ಮಹಾರಾಜ್(Keshav Maharaj)​ ‘ರಾಮ್ ಸಿಯಾ ರಾಮ್'(‘Ram Siya Ram’) ಹಾಡಿನ ಕುರಿತು ಸಂಭಾಷಣೆ ನಡೆಸಿದ ವಿಡಿಯೊ ವೈರಲ್(Viral Video)​ ಆಗಿದೆ.

ವಿಯಾನ್ ಮುಲ್ಡರ್ ವಿಕಟ್​ ಪತನದ ಬಳಿಕ ಬ್ಯಾಟಿಂಗ್​ ನಡೆಸಲು ಕೇಶವ್​ ಮಹಾರಾಜ್​ ಅವರು ಕ್ರೀಸ್​ಗಿಳಿದರು. ಇದೇ ವೇಳೆ ಸ್ಟೇಡಿಯಂನಲ್ಲಿ ‘ರಾಮ್ ಸಿಯಾ ರಾಮ್’ ಹಾಡನ್ನು ಜೋರಾಗಿ ಹಾಕಲಾಯಿತು. ಈ ವೇಳೆ ಕೀಪಿಂಗ್​ ನಡೆಸುತ್ತಿದ್ದ ಕೆ.ಎಲ್​ ರಾಹುಲ್​ ಅವರು ಕೇಶವ್​ ಮಹಾರಾಜ್ ಬಳಿ ನೀವು ಪ್ರತಿ ಬಾರಿ ಬ್ಯಾಟಿಂಗ್​ ನಡೆಸಲು ಬಂದಾಗ ಈ ಹಾಡನ್ನು ಹಾಕಲಾಗುತ್ತದೆ ಅಲ್ಲವೇ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಮಹಾರಾಜ್ ಹೌದು ಎಂದು ಕೇಳಿದ್ದಾರೆ. ಇದೇ ವೇಳೆ ರಾಹುಲ್​ ನಗುತ್ತಲೇ ಗುಡ್​ ಎಂದಿದ್ದಾರೆ. ಉಭಯ ಆಟಗಾರರ ಈ ಸಂಭಾಷಣೆ ಸ್ಟಂಪ್-ಮೈಕ್​ನಲ್ಲಿ ರೆಕಾರ್ಡ್​ ಆಗಿದೆ. ಈ ವಿಡಿಯೊ ವೈರಲ್​ ಆಗಿದೆ.

ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದ ಬಳಿಕ ಕೇಶವ್​ ಮಹಾರಾಜ್​ ಅವರು “ಜೈ ಶ್ರೀ ಹನುಮಾನ್‌” (Jai Shree Hanuman) ಎಂದು ಪೋಸ್ಟ್‌ ಹಾಕಿದ್ದರು. ಇದು ಭಾರತೀಯರ ಮನಗೆದ್ದಿತ್ತು. ಭಾರತ ಮೂಲದವರಾದ ಕೇಶವ್​ ಮಹಾರಾಜ್ ಅವರು ಹನುಮಂತನ ಭಕ್ತರಾಗಿದ್ದಾರೆ.

ಪಂದ್ಯ ಗೆದ್ದ ಭಾರತ

ಪಾರ್ಲ್‌ನಲ್ಲಿರುವ ಬೋಲ್ಯಾಂಡ್ ಪಾರ್ಕ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ ಭರ್ತಿ 50 ಓವರ್​ ಆಡಿ 8 ವಿಕೆಟ್​ ನಷ್ಟಕ್ಕೆ 297 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭಿಕ ಹಂತದಲ್ಲಿ ಉತ್ತಮ ಆಟವಾಡುವ ಮೂಲಕ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ಆ ಬಳಿಕ ಭಾರತದ ಬೌಲಿಂಗ್ ದಾಳಿಯನ್ನು ಎದುರಿಸಲು ಮಂಕಾಗಿ 45.5 ಓವರ್​ಗಳಲ್ಲಿ 218 ರನ್​ಗಳಿಗೆ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡು ತವರಿನಲ್ಲಿ ಸರಣಿ ಸೋಲಿನ ಕಹಿ ಅನುಭವಿಸಿತು.

ಇದನ್ನೂ ಓದಿ KL Rahul: ವಿರಾಟ್​ ಕೊಹ್ಲಿಯ ದಾಖಲೆ ಸರಿಗಟ್ಟಿದ ಕನ್ನಡಿಗ ಕೆ.ಎಲ್ ರಾಹುಲ್​

ಕೊಹ್ಲಿ ದಾಖಲೆ ಸರಿಗಟ್ಟಿದ ರಾಹುಲ್​

ಸರಣಿ ಗೆಲುವಿನ ಮೂಲಕ ರಾಹುಲ್​ ಅವರು ಕೊಹ್ಲಿ ಬಳಿಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿ ಗೆದ್ದ ಎರಡನೇ ಭಾರತೀಯ ನಾಯಕ ಎನಿಸಿಕೊಂಡರು. ಧೋನಿ, ರೋಹಿತ್​ ಸೇರಿ ಯಾರಿಂದಲ್ಲೂ ಕೂಡ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಗೆಲ್ಲಲು ಸಾಧ್ಯವಾಗಿರಲಿಲ್ಲ. 2018ರಲ್ಲಿ ಕೊಹ್ಲಿ ನಾಯಕತ್ವದಲ್ಲಿ 6 ಪಂದ್ಯಗಳ ಸರಣಿಯಲ್ಲಿ ಭಾರತ 5-1 ಅಂತರದಿಂದ ಗೆದ್ದು ಬೀಗಿತ್ತು, ಇದು ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ಗೆದ್ದ ಮೊತ್ತ ಮೊದಲ ಏಕದಿನ ಸರಣಿಯಾಗಿತ್ತು. ಇದೀಗ 5 ವರ್ಷಗಳ ಬಳಿಕ ರಾಹುಲ್​ ಸಾರಥ್ಯದಲ್ಲಿ ಭಾರತ ತಂಡ ಸರಣಿ ಗೆದ್ದಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿ ಗೆದ್ದಿದ್ದ ಕೊಹ್ಲಿ ನಾಯಕತ್ವದ ದಾಖಲೆಯನ್ನು ರಾಹುಲ್​ ಸರಿಗಟ್ಟಿದ್ದಾರೆ.

Exit mobile version