Site icon Vistara News

Ind vs Aus : ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮೊಹಾಲಿಯಲ್ಲಿ ಅಭ್ಯಾಸ ನಡೆಸಲಿದೆ ರಾಹುಲ್ ಬಳಗ

Team India

ಮೊಹಾಲಿ: ಐಸಿಸಿ ಏಕದಿನ ವಿಶ್ವಕಪ್ 2023ಕ್ಕೆ ಕೇವಲ ಎರಡು ವಾರಗಳು ಬಾಕಿ ಇದೆ. ಭಾರತ ಕ್ರಿಕೆಟ್ ತಂಡದ ಏಷ್ಯಾ ಕಪ್ ಗೆದ್ದ ಸಂಭ್ರಮವೂ ಕೊನೆಗೊಂಡಿದೆ. ಏತನ್ಮಧ್ಯೆ ಸೆಪ್ಟೆಂಬರ್ 22ರಿಂದ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಗಾಗಿ (Ind vs Aus) ಭಾರತ ತಂಡ ಅಭ್ಯಾಸ ನಡೆಸಿದೆಮೊದಲ ಏಕದಿನ ಪಂದ್ಯಕ್ಕೂ ಮುನ್ನ ಕೆಎಲ್ ರಾಹುಲ್ ನೇತೃತ್ವದ ಟೀಮ್ ಇಂಡಿಯಾ ಇಂದು ಪಿಸಿಎ ಮೊಹಾಲಿಯಲ್ಲಿ ಅಭ್ಯಾಸ ನಡೆಸಲಿದೆ. ಅಭ್ಯಾಸದಲ್ಲಿ ಎಲ್ಲರ ಕಣ್ಣುಗಳು ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಆರ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಮೇಲೆ ನೆಟ್ಟಿವೆ.

ಪಿಸಿಎ ಕ್ರೀಡಾಂಗಣದಲ್ಲಿ ಇಂದು (ಸೆಪ್ಟೆಂಬರ್ 21) ಅಭ್ಯಾಸ

ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ

ಸಂಪೂರ್ಣ ಫಿಟ್ ಆಗಿರುವ ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾ ವಿರುದ್ಧದ ಭಾರತದ ಪ್ಲೇಯಿಂಗ್ ಇಲೆವೆನ್​ಗೆ ಮರಳಲಿದ್ದಾರೆ. ಏಕೆಂದರೆ ಅವರಿಗೆ ವಿಶ್ವ ಕಪ್​ಗೆ ಮೊದಲು ಸುಧಾರಿಸಿಕೊಳ್ಳುವುದಕ್ಕೆ ಇದು ಉತ್ತಮ ಅವಕಾಶ. ಏಕದಿನ ಪಂದ್ಯಗಳಲ್ಲಿ ಇನ್ನೂ ತಮ್ಮ ಸ್ಥಾನವನ್ನು ಕಂಡುಕೊಳ್ಳದ ಸೂರ್ಯಕುಮಾರ್ ಯಾದವ್ ಅವರ ಮೇಲೂ ಗಮನ ಹರಿದಿದೆ.

ಇದನ್ನೂ ಓದಿ : Asian Games 2023 : ಮೊದಲ ಪಂದ್ಯ ರದ್ದಾದರೂ ಸೆಮಿಫೈನಲ್​ಗೇರಿದ ಮಹಿಳೆಯರ ತಂಡ

ಪ್ರಸ್ತುತ ನಂ.1 ಏಕದಿನ ಬೌಲರ್ ಮತ್ತು ಏಷ್ಯಾ ಕಪ್ ಫೈನಲ್ ಹಣಾಹಣಿಯ ಪಂದ್ಯಶ್ರೇಷ್ಠ ಮೊಹಮ್ಮದ್ ಸಿರಾಜ್, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಿಂದ ವಿಶ್ರಾಂತಿ ಪಡೆಯುವ ಸಾಧ್ಯತೆಗಳಿವೆ. ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಶಮಿಗೆ ಅವಕಾಶ ನೀಡಲು ಅವರು ಬೆಂಚು ಕಾಯಲಿದ್ದಾರೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಮೊದಲ ಎರಡು ಏಕದಿನ ಪಂದ್ಯಗಳಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಎಲ್ ರಾಹುಲ್ ಮತ್ತೆ ನಾಯಕನ ಸ್ಥಾನ ಪಡೆದಿರುವುದರಿಂದ ಭಾರತವು ಹಲವಾರು ಆಯ್ಕೆಗಳನ್ನು ಮಾಡಬೇಕಾಗಿದೆ.

ಸಂಭಾವ್ಯ ಆಡುವ ಬಳಗ

ಇಶಾನ್ ಕಿಶನ್
ಶುಬ್ಮನ್ ಗಿಲ್
ಋತುರಾಜ್ ಗಾಯಕ್ವಾಡ್
ಶ್ರೇಯಸ್ ಅಯ್ಯರ್
ಕೆಎಲ್ ರಾಹುಲ್ (ವಿಕೆಟ್ ಕೀಪರ್)
ಸೂರ್ಯಕುಮಾರ್ ಯಾದವ್
ರವೀಂದ್ರ ಜಡೇಜಾ
ಆರ್ ಅಶ್ವಿನ್
ಮೊಹಮ್ಮದ್ ಶಮಿ
ಜಸ್ಪ್ರೀತ್ ಬುಮ್ರಾ
ಪ್ರಸಿದ್ಧ್ ಕೃಷ್ಣ

Exit mobile version