ವಿಸ್ತಾರ ನ್ಯೂಸ್ ಬೆಂಗಳೂರು : ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಕೆ.ಎಲ್. ರಾಹುಲ್ ತಮ್ಮ ಸೌಮ್ಯ ಸ್ವಭಾವ ಹಾಗೂ ಬದ್ಧತೆಗೆ ಹೆಸರುವಾಸಿ. ಅಂತೆಯೇ ಅವರು ತಮ್ಮ ಅಭಿಮಾನಿಗಳ ಬಗ್ಗೆಯೂ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅವರು ತಮ್ಮ ಕಟ್ಟರ್ ಅಭಿಮಾನಿಯೊಬ್ಬರ ವಿವಾಹ ಸಂಭ್ರಮಕ್ಕೆ ತೆರೆಳಿ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಿದ ಪ್ರಸಂಗ ನಡೆದಿದೆ. ಅದರ ಚಿತ್ರ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳಿಗೆ ಬಿಸಿಸಿಐ ಶುಕ್ರವಾರ ಭಾರತ ತಂಡವನ್ನು ಪ್ರಕಟಿಸಿದ್ದು, ಕೆಎಲ್ ರಾಹುಲ್ ಅವರನ್ನು ಪ್ರಾಥಮಿಕ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆ ಮಾಡಲಾಗಿದೆ. ಈ ನಡುವೆಯೂ ಅವರು ಕುನಾಲ್ ಯಾದವ್ ಎಂಬ ಅಭಿಮಾನಿಯ ಮದುವೆಗೆ ತೆರಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.
“ನನ್ನ ಮದುವೆಗೆ ಬಂದಿದ್ದಕ್ಕಾಗಿ ಬಾಸ್ ಕೆಎಲ್ ರಾಹುಲ್ ಅವರಿಗೆ ತುಂಬಾ ಧನ್ಯವಾದಗಳು ಎಂದು ಕುನಾಲ್ ಯಾದವ್ ಬರೆದುಕೊಂಡಿದ್ದಾರೆ.
Thank you so much Boss KL Rahul for coming to my wedding and makes it so special. 🙏❤️ pic.twitter.com/ba1VAy8JpH
— Kunal Yadav (@Kunal_KLR) January 12, 2024
ಕಳೆದ ವರ್ಷದ ಐಪಿಎಲ್ ವೇಳೆ ಗಾಯಗೊಂಡಿದ್ದ ರಾಹುಲ್ ಏಷ್ಯಾ ಕಪ್ 2023ರ ಸಮಯದಲ್ಲಿ ಏಕದಿನ ಕ್ರಿಕೆಟ್ಗೆ ಮರಳಿದ್ದರು. ಅಲ್ಲಿ ಪರಿಣಾಮ ಬೀರಿದ್ದ ಅವರು 2023ರಲ್ಲಿ ತಮ್ಮ ಅದ್ಭುತ ಫಾರ್ಮ್ ಮೂಲಕ ಮಿಂಚಿದ್ದರು. ಅಲ್ಲದೇ ಅವರು ಟೀಮ್ ಇಂಡಿಯಾದ ಬೆನ್ನೆಲುಬಾಗಿ ಕೆಲಸ ಮಾಡಿದ್ದರು.
ಇದನ್ನೂ ಓದಿ : Virat kohli : ಶೋಯೆಬ್ ಅಖ್ತರ್ ಅಂದ್ರೆ ಕೊಹ್ಲಿಗೂ ಭಯವಿತ್ತಾ? ವಿರಾಟ್ ಮಾತಿನ ಅರ್ಥವೇನು?
2023ರ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ತಂಡದಿಂದ ಹೊರಗುಳಿದಿದ್ದ ಕೆ.ಎಲ್ ರಾಹುಲ್ ಇದೀಗ ಟೆಸ್ಟ್ ಕ್ರಿಕೆಟ್ಗೆ ಮತ್ತೆ ಮರಳಿದ್ದಾರೆ. ಅವರು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ವಿಶೇಷ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆಯಾಗಿದ್ದರು. ಸೆಂಚೂರಿಯನ್ನಲ್ಲಿ ಅವರು ಶತಕ ಬಾರಿಸಿದ್ದರು. ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸ್ಪೆಷಲಿಸ್ಟ್ ವಿಕೆಟ್ ಕೀಪರ್ ಕೀಪರ್ ಆಗಿ ಆಯ್ಕೆಯಾಗಿರುವ ಕೆಎಲ್ ರಾಹುಲ್, ಬ್ಯಾಟಿಂಗ್ ಮೂಲಕ ಗಮನಾರ್ಹ ಕೊಡುಗೆ ನೀಡುವ ಸಾಧ್ಯತೆ ಇದೆ.
ರಾಹುಲ್ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಎಲ್ಎಸ್ಜಿ ಕೋಚ್
ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಮೊದಲ ಬಾರಿಗೆ ಐಪಿಎಲ್ನಲ್ಲಿ ತಂಡಕ್ಕೆ ಕೋಚ್ ಆಗಿ ಕೆಲಸ ಮಾಡಲಿದ್ದಾರೆ. ಅವರು ಮುಂಬರುವ ಐಪಿಎಲ್ 2024 ರಲ್ಲಿ ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ತಮ್ಮ ಮೊದಲ ಎರಡು ಋತುಗಳಲ್ಲಿ ಪ್ಲೇಆಫ್ಗೆ ಪ್ರವೇಶಿಸಿರುವ ಆದರೆ ಇನ್ನೂ ಫೈನಲ್ಗೆ ಅರ್ಹತೆ ಪಡೆಯದ ಎಲ್ಎಸ್ಜಿ ಪರ ಲ್ಯಾಂಗರ್ ಕೆಲಸ ಮಾಡಲಿದ್ದಾರೆ. ಸೊಂಟದ ಗಾಯದಿಂದಾಗಿ ಕೆಎಲ್ ರಾಹುಲ್ ಐಪಿಎಲ್ 2023 ರ ದ್ವಿತೀಯಾರ್ಧದಿಂದ ಹೊರಗುಳಿಯಬೇಕಾಯಿತು.
ರಾಹುಲ್ ಏಷ್ಯಾ ಕಪ್ 2023ರ ಮೂಲಕ ಅಂತಾರಾಷ್ಟ್ರಿಯ ತಂಡಕ್ಕೆ ಮರಳಿದ್ದಾರೆ. ಈ ವೇಳೆ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್ 2023 ರಲ್ಲಿಯೂ ತಮ್ಮ ಫಾರ್ಮ್ ಮುಂದುವರಿಸಿದ್ದರು. ಈ ಎಲ್ಲ ಪ್ರದರ್ಶನದ ಹಿನ್ನೆಲೆಯಲ್ಲಿ ಲ್ಯಾಂಗರ್ ಎಲ್ಎಸ್ಜಿ ನಾಯಕನನ್ನು ಶ್ಲಾಘಿಸಿದರು. ಅವರನ್ನು “ಸುಂದರ, ಸೊಗಸಾಗಿ ಆಡುವ ಆಟಗಾರ” ಎಂದು ಬಣ್ಣಿಸಿದ್ದಾರೆ.
ನಾನು ಆಸ್ಟ್ರೇಲಿಯಾದ ಕೋಚ್ ಆಗಿದ್ದಾಗ ಮತ್ತು ನಾವು ಭಾರತದ ವಿರುದ್ಧ ಸರಣಿಯನ್ನು ಹೊಂದಿದ್ದಾಗ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಔಟಾಗುವವರೆಗೂ ನಾನು ವಿಶ್ರಾಂತಿ ಪಡೆಯುತ್ತಿರಲಿಲ್ಲ. ಏಕೆಂದರೆ ಅವರು (ರಾಹುಲ್) ತುಂಬಾ ಅಪಾಯಕಾರಿ ಆಟಗಾರ ಮತ್ತು ಅವರು ಅಂತಹ ಸುಂದರ ಸೊಗಸಾದ ಆಟಗಾರ ಎಂದು ಲ್ಯಾಂಗರ್ ಬಣ್ಣಿಸಿದ್ದಾರೆ.
ರಾಹುಲ್ಗೆ ಅನುಭವವಿದೆ. ಅವರು ಮೈದಾನದ ಎರಡೂ ಬದಿಗಳಲ್ಲಿ ಆಡಬಹುದು. ಅವರು ಸ್ಪಿನ್ ಮತ್ತು ವೇಗದ ಬೌಲಿಂಗ್ ಅನ್ನು ಚೆನ್ನಾಗಿ ಆಡುತ್ತಾರೆ. ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಮತ್ತು ಕೆಎಲ್ ರಾಹುಲ್ ಅವರಂತಹ ನಾಯಕನನ್ನು ಹೊಂದಲು ನಾನು ಹೆಮ್ಮೆ ಪಡುತ್ತೇನೆ. ಅದೇ ರೀತಿ ಕೆಎಲ್ ರಾಹುಲ್ ಅವರೊಂದಿಗೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ,” ಎಂದು ಲ್ಯಾಂಗರ್ ಎಲ್ಎಸ್ಜಿಯ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಅಪ್ಲೋಡ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.