Site icon Vistara News

ಇಂಗ್ಲೆಂಡ್‌ ಪ್ರವಾಸಕ್ಕಿಲ್ಲ ಕೆ.ಎಲ್​. ರಾಹುಲ್, ಚಿಕಿತ್ಸೆ ಪಡೆಯಲು ಹಾರುತ್ತಿರೋದೆಲ್ಲಿಗೆ?

kl rahul

ಬೆಂಗಳೂರು: ಟೀಂ ಇಂಡಿಯಾದ ಡ್ಯಾಷಿಂಗ್‌ ಕ್ರಿಕೆಟರ್‌ ಕೆ.ಎಲ್​. ರಾಹುಲ್​ ಗಾಯದಿಂದ ಬಳಲುತ್ತಿರುವ ಕಾರಣ ಇಂಗ್ಲೆಂಡ್‌ ಪ್ರವಾಸದಿಂದ ಹೊರಗುಳಿಯುವುದು ಖಚಿತಪಟ್ಟಿದೆ. ಈ ತಿಂಗಳ ಅಂತ್ಯದಲ್ಲಿ ಅಥವಾ ಜುಲೈನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಅಧಿಕೃತ ಮಾಹಿತಿ ನೀಡಿದೆ.

ಶನಿವಾರ ಎನ್​ಸಿಎಯಲ್ಲಿ ಫಿಟ್ನೆಸ್​ ಪರೀಕ್ಷೆಗೆ ಹಾಜರಾಗುವಂತೆ ಕೆ.ಎಲ್. ರಾಹುಲ್​ಗೆ ತಿಳಿಸಲಾಗಿತ್ತು. ಆದರೆ, ತೊಡೆ ಸಂದು ಗಾಯದಿಂದಾಗಿ ಪೂರ್ಣ ಗುಣಮುಖರಾಗದ ಅವರು ಫಿಟ್ನೆಸ್‌ ಪರೀಕ್ಷೆಯಲ್ಲಿ ಪಾಲ್ಗೊಳ್ಳುವುದು ಡೌಟ್‌. ಸಂಪೂರ್ಣ ಗುಣಮುಖರಾಗದ ಹಿನ್ನೆಲೆಯಲ್ಲಿ ಕೆ.ಎಲ್.​ ರಾಹುಲ್​ರನ್ನು ಇಂಗ್ಲೆಂಡ್‌ ಪ್ರವಾಸದಿಂದ ಕೈ ಬಿಡಲು ಬಿಸಿಸಿಐ ನಿರ್ಧರಿಸಿದ್ದು, ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿಗೆ ಕಳಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ​ ತಿಳಿಸಿದ್ದಾರೆ.

ಇದನ್ನು ಓದಿ| ಕ್ರಿಕೆಟ್‌ಗೆ ವಿದಾಯ ಹೇಳಲು ಹೊರಟ ಸೆಹ್ವಾಗ್‌ಗೆ ಧೈರ್ಯ ತುಂಬಿದ್ದು ಸಚಿನ್

ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ 20 ಸರಣಿಯ ಆರಂಭಕ್ಕೂ ಮುನ್ನವೇ ರಾಹುಲ್ ತಮ್ಮ ತೊಡೆಸಂದಿನ ಗಾಯಕ್ಕೆ ತುತ್ತಾಗಿದ್ದರು. ಈವರೆಗೂ ಅದರಿಂದ ಚೇತರಿಕೆ ಕಾಣದೇ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಇಂಗ್ಲೇಂಡ್ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದಾರೆ.

ಈಗಾಗಲೇ ಇಂದು (ಗುರುವಾರ) ಭಾರತದ ತಂಡದ ಒಂದು ಬ್ಯಾಚ್​ ಮುಂಬೈನಿಂದ ಇಂಗ್ಲೆಂಡ್‌ಗೆ ಹೊರಟಿದ್ದು, ಲಂಡನ್​ ತಲುಪಿದೆ. ಸದ್ಯಕ್ಕೆ ಕೆ.ಎಲ್. ರಾಹುಲ್ ಟೂರ್ನಿಯಿಂದ ಹೊರಗುಳಿಯುವ ಕಾರಣ ಅವರ ಸ್ಥಾನಕ್ಕೆ ಪರ್ಯಾಯ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

Exit mobile version