Site icon Vistara News

ಕೇಪ್​ ಟೌನ್​ ಬೀಚ್​ನಲ್ಲಿ ಪತ್ನಿ ಜತೆ ಕೆಎಲ್​ ರಾಹುಲ್​ ಮಸ್ತ್​ ಮಜಾ​; ಫೋಟೊ ವೈರಲ್

kl rahul and athiya shetty

ಕೇಪ್​ ಟೌನ್​: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮುಕ್ತಾಯಕಂಡಿದ್ದು ಟೀಮ್​ ಇಂಡಿಯಾ ಆಟಗಾರರು ವಿಶ್ರಾಂತಿ ಮೂಡ್​​ನಲ್ಲಿದ್ದಾರೆ. ಸದ್ಯ ಕೇಪ್​ ಟೌನ್​ನ ಕೆಲ ಪ್ರವಾಸಿ ತಾಣಗಳಿಗೆ ಮತ್ತು ಪ್ರಸಿದ್ಧ ಬೀಚ್​ಗಳಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಕೆ.ಎಲ್​ ರಾಹುಲ್(KL Rahul)​ ಮತ್ತು ಪತ್ನಿ ಆಥಿಯಾ ಶೆಟ್ಟಿ(Athiya Shetty) ಇಲ್ಲಿನ ಬೀಚ್​ ಒಂದರಲ್ಲಿ ಫೋಟೊಶೂಟ್​ ಮಾಡಿಸಿಕೊಂಡಿದ್ದಾರೆ. ಈ ಫೋಟೊವನ್ನು ರಾಹುಲ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಕಳೆದ ವರ್ಷ ಐಪಿಎಲ್​ ಆಡುವ ವೇಳೆ ಗಾಯಗೊಂಡು ಸರಿ ಸುಮಾರು 6 ತಿಂಗಳು ಕ್ರಿಕೆಟ್​ನಿಂದ ದೂರ ಉಳಿದಿದ್ದ ರಾಹುಲ್​ ಚೇತರಿಕೆ ಕಂಡು ಏಷ್ಯಾಕಪ್​ ಟೂರ್ನಿಯಲ್ಲಿ ಕಣಕ್ಕಿಳಿದ್ದಿದ್ದರು. ಕಮ್​ಬ್ಯಾಕ್​ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ ರಾಹುಲ್​ ಬಳಿಕ ಆಡಿದ ಎಲ್ಲ ಟೂರ್ನಿಯಲ್ಲೂ ಶ್ರೇಷ್ಠ ಮಟ್ಟದ ಬ್ಯಾಟಿಂಗ್​ ನಡೆಸಿ ತಮ್ಮ ಹಳೆಯ ಬ್ಯಾಟಿಂಗ್​ ಫಾರ್ಮ್​ ಕಂಡುಕೊಂಡರು.

ವಿಶ್ವಕಪ್​ ಟೂರ್ನಿಯಲ್ಲಿ ಬ್ಯಾಟಿಂಗ್​ ಜತೆಗೆ ಕೀಪಿಂಗ್​ ನಡೆಸಿದ್ದ ರಾಹುಲ್​ ಎರಡರಲ್ಲೂ ಯಶಸ್ಸಿಯಾಗಿದ್ದರು. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ತಂಡವನ್ನು ಮುನ್ನಡೆಸಿ ಸರಣಿ ಜಯ ಸಾಧಿಸಿದ್ದರು. ಒಟ್ಟಾರೆ ಬ್ಯಾಟಿಂಗ್​ ಮತ್ತು ಕೀಪಿಂಗ್ ಎರಡರಲ್ಲೂ ರಾಹುಲ್​ ಮಿಂಚುತ್ತಿದ್ದು ಭಾರತ ತಂಡದ ಮುಂದಿನ ನಾಯಕ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ಧ


ಆರಂಭಿಕ ಆಟಗಾರನಾಗಿದ್ದ ರಾಹುಲ್​ ಅವರನ್ನು ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಇದಾದ ಬಳಿಕ ರಾಹುಲ್​ ಸದ್ಯ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಮಧ್ಯಮ ಕ್ರಮಾಂಕದಲ್ಲೇ ಬ್ಯಾಟಿಂಗ್​ ನಡೆಸುತ್ತಿದ್ದಾರೆ. ತಮ್ಮ ಬ್ಯಾಟಿಂಗ್​ ಕ್ರಮಾಂಕದ ಬಗ್ಗೆ ಸುನಿಲ್ ಗವಾಸ್ಕರ್ ಮತ್ತು ಇರ್ಫಾನ್ ಪಠಾಣ್ ಜತೆಗಿನ ಮಾತುಕತೆಯಲ್ಲಿ ರಾಹುಲ್, ಯಾವ ಸ್ಥಾನವಾದರೂ ಆಡಲು ರೆಡಿ ಎಂದಿದ್ದಾರೆ.

ಇದನ್ನೂ ಓದಿ IND vs SA: ದಕ್ಷಿಣ ಆಫ್ರಿಕಾದಲ್ಲಿ ಕನ್ನಡದ ಕಂಪು ಸಾರಿದ ಕೆಎಲ್​ ರಾಹುಲ್​-ಪ್ರಸಿದ್ಧ್​ ಕೃಷ್ಣ


‘ಈಗ ನನಗೆ 31 ವರ್ಷ. ನನಗೆ ಅವಕಾಶ ಸಿಕ್ಕಾಗ ಗಾಯದ ಕಾರಣದಿಂದ ಅನೇಕ ಬಾರಿ ತಂಡದಿಂದ ಹೊರಗುಳಿದಿದ್ದು ಇದೆ. ಹೀಗಾಗಿ ನಾನೀಗ ತಂಡದಲ್ಲಿ ನನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಯೋಚನೆ ಮಾಡುವ ಪರಿಸ್ಥಿತಿಯಲ್ಲಿಲ್ಲ. ಯಾವುದೇ ಕ್ರಮಾಂಕವಾದರೂ ಸರಿ, ನಾನು ಬ್ಯಾಟಿಂಗ್​ ನಡೆಸಲು ಸಿದ್ಧ ಎನ್ನುವ ಆ್ಮವಿಶ್ವಾಸ ನನ್ನಲ್ಲಿದೆ” ಎಂದು ರಾಹುಲ್​ ಹೇಳಿದ್ದಾರೆ.

ಸೆಂಚುರಿಯನ್​ನಲ್ಲಿ ದಾಖಲೆ ಬರೆದ ರಾಹುಲ್​


ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್​ನಲ್ಲಿ ನಡೆದಿದ್ದ ಮೊದಲ ಟೆಸ್ಟ್​ ಪಂದ್ಯದಲ್ಲಿ ರಾಹುಲ್​ ಶತಕ ಬಾರಿಸುವ ಮೂಲಕ ದಾಖಲೆಯೊಂದನ್ನು ಬರೆದಿದ್ದರು. ಈ ಮೈದಾನದಲ್ಲಿ ಸತತವಾಗಿ 2 ಶತಕ ಬಾರಿಸಿದ ಮೊದಲ ವಿದೇಶಿ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರಾಹುಲ್ ಹೊರತುಪಡಿಸಿ ಸೆಂಚುರಿಯನ್​ನಲ್ಲಿ ಉಳಿದ ಯಾವುದೇ ವಿದೇಶಿ ಬ್ಯಾಟರ್‌ ಟೆಸ್ಟ್‌ನಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿಲ್ಲ. 2021ರಲ್ಲಿ ರಾಹುಲ್​ ಇಲ್ಲಿ ಆರಂಭಿಕನಾಗಿ ಕಣಕ್ಕಿಳಿದು 123 ರನ್​ ಬಾರಿಸಿದ್ದರು.

Exit mobile version