Site icon Vistara News

KL Rahul : ಜಿಂಕೆಯಂತೆ ಚಂಗನೆ ನೆಗೆದು ಅದ್ಭುತ್ ಕ್ಯಾಚ್ ಹಿಡಿದ ಕೆ. ಎಲ್​ ರಾಹುಲ್​

KL Rahul

ಪುಣೆ: ಎಂಸಿಎ ಸ್ಟೇಡಿಯಂನಲ್ಲಿ ಗುರುವಾರ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಕೆಎಲ್ ರಾಹುಲ್ (KL Rahul) ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದರು. 25ನೇ ಓವರ್​​ನಲ್ಲಿ ಮೆಹಿದಿ ಹಸನ್ ಮಿರಾಜ್ ಅವರ ಅದ್ಭುತ ಕ್ಯಾಚ್ ಪಡೆದು ಭಾರತಕ್ಕೆ ನಿರ್ಣಾಯಕ ವಿಕೆಟ್ ತಂದುಕೊಟ್ಟರು. ಮೊಹಮ್ಮದ್ ಸಿರಾಜ್ ಅವರ ಲೆಂಥ್​ ಎಸೆತವನ್ನು ಎಸೆದರು. ಮೆಹಿದಿ ಬ್ಯಾಟ್​​ನ ಅಂಚು ಸವರಿ ಚೆಂಡು ಹಿಂದಕ್ಕೆ ಹೋಯಿತು. ಆದರೆ ರಾಹುಲ್ ತನ್ನ ಎಡಕ್ಕೆ ಜಿಂಕೆಯಂತೆ ಹಾರಿ ಕ್ಯಾಚ್ ಹಿಡಿದುಕೊಂಡರು.

ಪಂದ್ಯದ ಬಗ್ಗೆ ಮಾತನಾಡುವುದಾದರೆ, ಬಾಂಗ್ಲಾದೇಶದ ಆರಂಭಿಕರ ಅದ್ಭುತ ಆರಂಭದ ನಂತರ ಟೀಮ್ ಇಂಡಿಯಾ ಪುನರಾಗಮನ ಮಾಡಿದೆ. ತಂಝಿದ್ ಹಸನ್ (51) ಮತ್ತು ಲಿಟನ್ ದಾಸ್ (66) 93 ರನ್​ಗಳ ಜೊತೆಯಾಟವಾಡಿದರು.

ನಂತರ ಭಾರತದ ಸ್ಪಿನ್ ಜೋಡಿ ಕುಲ್ದೀಪ್ ಮತ್ತು ರವೀಂದ್ರ ಜಡೇಜಾ ಬಾಂಗ್ಲಾ ತಂಡಸ ಸ್ಕೋರ್ ರೇಟ್​ಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು. ಇದು ಹೆಚ್ಚಿನ ವಿಕೆಟ್​ಗಳಿಗೆ ಕಾರಣವಾಯಿತು. ಸದ್ಯ ಮುಷ್ಫಿಕರ್ ರಹೀಮ್ ಹಾಗೂ ತೌಹಿದ್ ಹೃದೋಯ್ ಅಜೇಯರಾಗಿ ಉಳಿದಿದ್ದಾರೆ. ಇದಕ್ಕೂ ಮುನ್ನ ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸ್ಸಿಯಾನ್ ಶಾಂಟೊ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಹುಮ್ಮಸ್ಸಿನಲ್ಲಿದೆ. ಇದೇ ವೇಳೆ ಬಾಂಗ್ಲಾದೇಶ ಆಡಿರುವ 3 ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಗೆಲುವು ಸಾಧಿಸಿದೆ.

ಈ ಸುದ್ದಿಯನ್ನೂ ಓದಿ : IND vs BAN: ಹಾರ್ದಿಕ್​ ಪಾಂಡ್ಯಗೆ ಗಾಯ; ಟೀಮ್​ ಇಂಡಿಯಾಕ್ಕೆ ಆತಂಕ

ತಂಡಗಳು ಈ ರೀತಿ ಇವೆ

ಭಾರತ ತಂಡ: ರೋಹಿತ್ ಶರ್ಮಾ (ಸಿ), ಶುಭಮನ್ ಗಿಲ್, ವಿರಾಟ್ ಕೊಹ್ಲಿ (ಸಿ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಬಾಂಗ್ಲಾದೇಶ ತಂಡ: ಲಿಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹುಸೇನ್ ಶಾಂಟೊ (ಸಿ), ಮೆಹಿದಿ ಹಸನ್ ಮಿರಾಜ್, ತೌಹಿದ್ ಹೃದೋಯ್, ಮುಷ್ಫಿಕರ್ ರಹೀಮ್ (ವಿಕೆ), ಮಹಮುದುಲ್ಲಾ, ನಸುಮ್ ಅಹ್ಮದ್, ಹಸನ್ ಮಹಮೂದ್, ಮುಸ್ತಾಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ.

ಎಂಟು ವರ್ಷದ ಬಳಿಕ ವಿಶ್ವ ಕಪ್​ನಲ್ಲಿ ಬೌಲಿಂಗ್​

ಪುಣೆ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(virat kohli) ಅವರು 8 ವರ್ಷಗಳ ಬಳಿಕ ವಿಶ್ವಕಪ್​ ಟೂರ್ನಿಯಲ್ಲಿ ಬೌಲಿಂಗ್​ ನಡೆಸಿ ಗಮನಸೆಳೆದಿದ್ದಾರೆ. ಬಾಂಗ್ಲಾ(India vs Bangladesh) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಅವರು ಗಾಯಗೊಂಡ ಕಾರಣ ಅವರ ಓವರ್​ ಅನ್ನು ಪೂರ್ತಿಗೊಳಿಸುವ ಮೂಲಕ ಈ ಸಾಧನೆ ಮಾಡಿದರು.

ವಿರಾಟ್​ ಕೊಹ್ಲಿ ಅವರು ಏಕದಿನ ವಿಶ್ವಕಪ್​ನಲ್ಲಿ ಮೊದಲ ಬಾರಿ ಬೌಲಿಂಗ್​ ನಡೆಸಿದ್ದು 2011ರ ವಿಶ್ವಕಪ್​ನಲ್ಲಿ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಕೊಹ್ಲಿ ಒಂದು ಓವರ್​ ಎಸೆದು 6 ರನ್​ ನೀಡಿದ್ದರು. ಇದಾದ ಬಳಿಕ ಶ್ರೀಲಂಕಾ ವಿರುದ್ಧ ನಡೆದ ಫೈನಲ್​ ಪಂದ್ಯದಲ್ಲಿಯೂ ಒಂದು ಓವರ್​ ಎಸೆದಿದ್ದರು. ಇಲ್ಲಿಯೂ 6 ರನ್​ ಬಿಟ್ಟುಕೊಟ್ಟಿದ್ದರು. ಕೊನೆಯ ಬಾರಿ ವಿಶ್ವಕಪ್​ನಲ್ಲಿ ಕೊಹ್ಲಿ ಬೌಲಿಂಗ್​ ನಡೆಸಿದ್ದು 2015ರಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಆಸೀಸ್​ ವಿರುದ್ಧ ಒಂದು ಓವರ್​ ಬೌಲಿಂಗ್​ ನಡೆಸಿ 7 ರನ್​ ಬಿಟ್ಟುಕೊಟ್ಟಿದ್ದರು. ಇದೀಗ 8 ವರ್ಷಗಳ ಬಳಿಕ ಮತ್ತೆ ವಿಶ್ವಕಪ್​ನಲ್ಲಿ ಬೌಲಿಂಗ್​ ನಡೆಸಿದ್ದಾರೆ. ಆದರೆ ಇಲ್ಲಿ ಮೂರು ಬೌಲ್​ ಮಾತ್ರ ಎಸೆದರು.

Exit mobile version