Site icon Vistara News

Ind vs Eng : ಮೊದಲ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಭಾರತಕ್ಕೆ 127 ರನ್ ಮುನ್ನಡೆ

Ravindra Jadeja

ಹೈದರಾಬಾದ್​: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ (Ind vs Eng) ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 175 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಭಾರತ ತಂಡದ ಬಳಿಕ ಇನ್ನೂ ಮೂರು ವಿಕೆಟ್​ಗಳು ಉಳಿದಿವೆ. ಮೊದಲ ದಿನ 246 ರನ್​ಗಳಿಗೆ ಎದುರಾಳಿ ತಂಡವನ್ನು ಆಲ್​ಔಟ್ ಮಾಡಿದ್ದ ರೋಹಿತ್ ಪಡೆ 127 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ದಿನದಾಟ ಆರಂಭಿಸಿತ್ತು. ಮೊದಲ ಓವರ್​ನಲ್ಲಿಯೇ ವಿಕೆಟ್ ಕಳೆದುಕೊಂಡಿತ್ತು. ಆದಾಗ್ಯೂ 57ನೇ ಓವರ್​ನಲ್ಲಿ ಮುನ್ನಡೆ ಪಡೆದುಕೊಳ್ಳುವ ಜತೆಗೆ ಕೆಎಲ್ ರಾಹುಲ್ (86) ಮತ್ತು ರವೀಂದ್ರ ಜಡೇಜಾ ( 81 ಬ್ಯಾಟಿಂಗ್​ ) ಅವರ ಅರ್ಧಶತಕಗಳೊಂದಿಗೆ ಮೇಲುಗೈ ಸಾಧಿಸಿದೆ.

ಇಂಗ್ಲೆಂಡ್​ ತಂಡದ ಸ್ಪಿನ್ ಬೆದರಿಕೆಯನ್ನು ಜಡೇಜಾ ಮತ್ತು ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ (80) ಹಿಮ್ಮೆಟ್ಟಿಸಿದರು. ಆದಾಗ್ಯೂ ಎರಡನೇ ದಿನದಾಟದ ಆರಂಭದಲ್ಲಿ ಶುಬ್ಮನ್ ಗಿಲ್ (23) ಹಾರ್ಟ್ಲೆಗೆ ವಿಕೆಟ್ ಒಪ್ಪಿಸಿದರು. ಸತತವಾಗಿ ವೈಫಲ್ಯ ಕಾಣುತ್ತಿರುವ ಗಿಲ್ ಮತ್ತೊಂದು ಬಾರಿ ಚರ್ಚೆಗೆ ಆಸ್ಪದ ಕೊಟ್ಟರು.

ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾದ ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ 64 ರನ್​ಗಳ ಜೊತೆಯಾಟದ ಮೂಲಕ ಭಾರತ ತನ್ನ ಅಧಿಕಾರಯುತ ನಡೆ ಇಟ್ಟಿತು. ರಾಹುಲ್​ 86 ರನ್​ಗಳನ್ನು ವೇಗವಾಗಿ ಬಾರಿಸುವ ಮೂಲಕ ಎದುರಾಳಿ ತಂಡದ ಮೊತ್ತವನ್ನು ದಾಟಲು ನೆರವಾದರು.

ಇದನ್ನೂ ಓದಿ : India A vs England Lions: ಸರ್ಫರಾಜ್, ಪಡಿಕ್ಕಲ್ ಶತಕ; ಉತ್ತಮ ಸ್ಥಿತಿಯಲ್ಲಿ ಭಾರತ ‘ಎ’ ತಂಡ

ಟೀಮ್ ಇಂಡಿಯಾ ದೊಡ್ಡ ಮೊತ್ತ ಪೇರಿಸಲು ಆರಾಮವಾಗಿ ಸಿದ್ಧಗೊಂಡಿದ್ದ ಸಮಯದಲ್ಲಿ ರಾಹುಲ್ ಔಟಾದರು. ಆಲ್​​ರೌಂಡರ್​ ರವೀಂದ್ರ ಜಡೇಜಾ ಅವರೊಂದಿಗೆ 68 ರನ್​ಗಳ ಜೊತೆಯಾಟದಲ್ಲಿ ವಿಕೆಟ್ ಕೀಪರ್ ಕೆ.ಎಸ್ ಭರತ್ 41 ರನ್​ಗಳನ್ನು ಸೇರಿಸಿದರು. ಇಬ್ಬರು ಕ್ರಿಕೆಟಿಗರು ಭಾರತದ ಮುನ್ನಡೆಯನ್ನು 100 ರನ್​ಗಳಿಗೆ ವೃದ್ಧಿಸಿದರು.

ಮೊದಲ ದಿನ ಮೂರು ಪ್ರಮುಖ ಇಂಗ್ಲೆಂಡ್ ಬ್ಯಾಟರ್​ಗಳನ್ನು ಟ್​ ಮಾಡಿದ್ದ ಜಡೇಜಾ ತಮ್ಮ 20ನೇ ಟೆಸ್ಟ್ ಅರ್ಧಶತಕ ಪೂರೈಸಿದರು ದಿನದಾಟದಂತ್ಯಕ್ಕೆ 81* ರನ್ ಗಳಿಸಿರುವ ಸ್ಟಾರ್ ಆಲ್ರೌಂಡರ್, ಅಕ್ಷರ್ ಪಟೇಲ್ (35*) ಅವರೊಂದಿಗೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Exit mobile version