Site icon Vistara News

KL Rahul : ಜತೆಯಾಟದಲ್ಲಿ ಭಾರತ ಪರ ವಿಶೇಷ ದಾಖಲೆ ಬರೆದ ರಾಹುಲ್​- ಶ್ರೇಯಸ್​

Rahul

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ನವೆಂಬರ್ 12) ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ಮತ್ತು ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ಪರವಾಗಿ ನಾಲ್ಕನೇ ಅತ್ಯಧಿಕ ರನ್​ಗಳ ಜೊತೆಯಾಟವನ್ನು ದಾಖಲಿಸಿದ್ದಾರೆ. ಬೆಂಗಳೂರಿನ ಸುಂದರ ಬ್ಯಾಟಿಂಗ್ ಪಿಚ್​​ನಲ್ಲಿ ರಾಹುಲ್ ಮತ್ತು ಅಯ್ಯರ್ ನಾಲ್ಕನೇ ವಿಕೆಟ್​ಗೆ 208 ರನ್​ಗಳ ಜೊತೆಯಾಟ ನೀಡಿದರು. ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ 1999 ರಲ್ಲಿ ಟೌಂಟನ್​ನಲ್ಲಿ ಶ್ರೀಲಂಕಾ ವಿರುದ್ಧ 318 ರನ್​ಗಳ ಜತೆ ಯಾಟವನ್ನು ದಾಖಲಿಸಿದ್ದರು.

ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ 2003 ರಲ್ಲಿ ಪೀಟರ್ ಮಾರಿಟ್ಜ್​ಬರ್ಗ್​ನಲ್ಲಿ ನಮೀಬಿಯಾ ವಿರುದ್ಧ 244 ರನ್​ಗಳ ಜೊತೆಯಾಟದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ 1999ರಲ್ಲಿ ಕೀನ್ಯಾ ವಿರುದ್ಧ ಬ್ರಿಸ್ಟಲ್ ನಲ್ಲಿ 237 ರನ್ ಗಳ ಜೊತೆಯಾಟದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ರಾಹುಲ್ ಮತ್ತು ಅಯ್ಯರ್ ವಿಶ್ವಕಪ್​ನಲ್ಲಿ ನಾಲ್ಕನೇ ವಿಕೆಟ್ ಅಥವಾ ಅದಕ್ಕಿಂತ ಕಡಿಮೆ ವಿಕೆಟ್​ಗೆ ಭಾರತದ ಅತ್ಯಧಿಕ ಜೊತೆಯಾಟವನ್ನು ದಾಖಲಿಸಿದರು. 2015ರ ಮಾರ್ಚ್​ನಲ್ಲಿ ಆಕ್ಲೆಂಡ್ನ ಈಡನ್ ಪಾರ್ಕ್​ನಲ್ಲಿ ಜಿಂಬಾಬ್ವೆ ವಿರುದ್ಧ ಎಂಎಸ್ ಧೋನಿ ಹಾಗೂ ಸುರೇಶ್ ರೈನಾ ನಿರ್ಮಿಸಿದ್ದ ದಾಖಲೆಯನ್ನು ಅವರು ಮುರಿದರು/

ಅಯ್ಯರ್ ಮತ್ತು ರಾಹುಲ್ ವಿಶ್ವಕಪ್​ನಲ್ಲಿ 200 ಅಥವಾ ಅದಕ್ಕಿಂತ ಹೆಚ್ಚಿನ ಜೊತೆಯಾಟವನ್ನು ಗಳಿಸಿದ ಭಾರತದ ಆರನೇ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ಹಾಲಿ ವಿಶ್ವಕಪ್​ನಲ್ಲಿ ಭಾರತದ ಮೊದಲ ದ್ವಿಶತಕದ ಜೊತೆಯಾಟವಾಗಿದೆ.

ವಿರಾಟ್ ಕೊಹ್ಲಿ ಔಟ್ ಆದ ನಂತರ ರಾಹುಲ್ ಮತ್ತು ಅಯ್ಯರ್ ಒಟ್ಟಿಗೆ ಸೇರಿದರು. ಅಯ್ಯರ್ ಏಕದಿನ ಪಂದ್ಯಗಳಲ್ಲಿ 50 ಸಿಕ್ಸರ್​ಗಳನ್ನು ಪೂರೈಸಿದರು ಮತ್ತು 84 ಎಸೆತಗಳಲ್ಲಿ ತಮ್ಮ ಚೊಚ್ಚಲ ವಿಶ್ವಕಪ್ ಶತಕವನ್ನು ಗಳಿಸಿದರು.

ಪಂದ್ಯದಲ್ಲಿ ಏನಾಯಿತು?

ಬೆಂಗಳೂರು: ವಿಶ್ವ ಕಪ್​ನ ಲೀಗ್ ಹಂತದ ತನ್ನ ಕೊನೇ ಪಂದ್ಯದಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ (ind vs ned) ವಿರುದ್ಧ 160 ರನ್​ಗಳಿಂದ ಜಯಗಳಿಸಿದೆ. ಈ ಮೂಲಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಹಾಲಿ ವಿಶ್ವ ಕಪ್​ನ (ICC World Cup 2023) ಲೀಗ್​ ಹಂತದ 9 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದು 18 ಅಂಕಗಳೊಂದಿಗೆ ಸೆಮಿ ಫೈನಲ್​ಗೆ ಪ್ರವೇಶ ಪಡೆಯಿತು. ಭಾರತ ತಂಡ ಒಂದೇ ವಿಶ್ವ ಕಪ್ ಆವೃತ್ತಿಯಲ್ಲಿ ಸತತ 9 ಗೆಲುವು ಪಡೆಯುತ್ತಿರುವುದು ಇದೇ ಮೊದಲಾಗಿರುವ ಕಾರಣ ಅದು ಕೂಡ ದಾಖಲೆಯಾಯಿತು. ಹಿಂದೆ ಧೋನಿ ನಾಯಕತ್ವದಲ್ಲಿ ಭಾರತ ತಂಡ 8 ಗೆಲುವು ಕಂಡಿತ್ತು. ಉತ್ಸಾಹದಲ್ಲಿರುವ ಭಾರತ ಬಳಗ ಬುಧವಾರ (ನವೆಂಬರ್​ 15) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯ ನಾಲ್ಕನೇ ಸ್ಥಾನಿ ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ.

ಈ ಸುದ್ದಿಯನ್ನೂ ಓದಿ : Rohit Sharma : ನಿನಗೊಂದು ವಿಕೆಟ್​, ನನಗೊಂದು ವಿಕೆಟ್​; ರೋಹಿತ್- ಕೊಹ್ಲಿ ಹಂಚಿಕೆ ಸೂತ್ರ!

ಶ್ರೇಯಸ್​ ಅಯ್ಯರ್ (ಅಜೇಯ 128) ಮತ್ತು ಕೆ. ಎಲ್​ ರಾಹುಲ್ (102) ಅವರ ಶತಕಗಳು ಹಾಗೂ ಶುಭ್​ಮನ್​ ಗಿಲ್ (61)​, ರೋಹಿತ್​ ಶರ್ಮಾ (61) ವಿರಾಟ್​ ಕೊಹ್ಲಿ (51) ಹಾಗೂ ಅವರ ಅರ್ಧ ಶತಕಗಳು ಭಾರತ ತಂಡದ ಗೆಲುವಿಗೆ ನೆರವಾಯಿತು. ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಭಾರತ ತಂಡದ ಪರ 9 ಆಟಗಾರರು ಬೌಲಿಂಗ್ ಮಾಡಿದರು. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್​, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಕೊಹ್ಲಿ ಮತ್ತು ರೋಹಿತ್​ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತನ್ನ ನಿರ್ಧಾರಕ್ಕೆ ಪೂರಕವಾಗಿ ಆಡಿತು. ಆರಂಭದಿಂದಲೂ ಕೊನೇ ತನಕ ರನ್​ಗಳನ್ನು ಗಳಿಸುತ್ತಾ ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 40 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಸ್ಕಾಟ್ ಎಡ್ವರ್ಡ್ ನೇತೃತ್ವದ ಡಚ್ಚರ ಪಡೆ 47. 5 ಓವರ್​ಗಳಲ್ಲಿ 250 ರನ್​ಗಳಿಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು.

Exit mobile version