Site icon Vistara News

KL Rahul : ತಂಡಕ್ಕೆ ಆಯ್ಕೆಗೊಂಡರೂ ರಾಹುಲ್​ ತಂಡದಲ್ಲಿ ಸ್ಥಾನ ಪಡೆಯೋದು ಡೌಟು?

KL Rahul

ಬೆಂಗಳೂರು: ಗಾಯದಿಂದಾಗಿ ಸುಮಾರು 3-4 ತಿಂಗಳುಗಳಿಂದ ಆಟದಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ (KL Rahul) ಅವರನ್ನು ಏಷ್ಯಾ ಕಪ್​ನಲ್ಲಿ ಆಡಲಿರುವ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಮೀಸಲು ಆಟಗಾರರ ಸಮೇತ ಕಾಂಟೆನೆಂಟಲ್​ ಟೂರ್ನಿಗೆ 17 ಸದಸ್ಯರ ತಂಡವನ್ನು ಹೆಸರಿಸಿದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ (Ajit Agarkar) ಅವರು ರಾಹುಲ್ ಮತ್ತು ಅಯ್ಯರ್ ಅವರು ತಂಡಕ್ಕೆ ವಾಪಸಾಗಿರುವುದನ್ನು ಖಚಿತಪಡಿಸಿದ್ದಾರೆ. ಏತನ್ಮಧ್ಯೆ, ಕೆ. ಎಲ್​ ರಾಹುಲ್ ಹೊಸದಾಗಿ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ ಎಂಬುವ ಮಾಹಿತಿ ಬಹಿರಂಗಗೊಂಡಿದೆ.

ರಾಹುಲ್ ಮತ್ತು ಅಯ್ಯರ್ ಇಬ್ಬರೂ ಕಳೆದ ಹಲವಾರು ವಾರಗಳಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy) ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಐಪಿಎಲ್ 2023 ರ ಸಮಯದಲ್ಲಿ ರಾಹುಲ್ ಸ್ನಾಯುಸೆಳೆತದಿಂದ ಬಳಲಿದ್ದರು. ಅಂತಿಮವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು . ಆದರೆ ಅಯ್ಯರ್ ಆಸ್ಟ್ರೇಲಿಯಾದ ತವರಿನ ಸರಣಿಯ ನಂತರ ಆಟದಿಂದ ಹೊರಗುಳಿದಿದ್ದರು. ಆಯ್ಕೆ ಸಭೆಗೆ ಮುಂಚಿತವಾಗಿ, ಇಬ್ಬರೂ ಎನ್​ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಭಾರತದ ಬ್ಯಾಟಿಂಗ್ ಕೋಚ್ ಅವರ ಕಣ್ಗಾವಲಿನಲ್ಲಿ ಹಲವಾರು ಮ್ಯಾಚ್ ಸಿಮ್ಯುಲೇಶನ್​​​ಗಳು ಮತ್ತು ಅಭ್ಯಾಸ ಪಂದ್ಯಗಳನ್ನು ನಡೆಸಿದ್ದರು. ಅಲ್ಲಿ ಅವರು ತಮ್ಮ ಬ್ಯಾಟಿಂಗ್ ಫಿಟ್ನೆಸ್ ಅನ್ನು ಸಾಬೀತುಪಡಿಸಿದ್ದರಲ್ಲದೆ 50 ಓವರ್ಗಳ ಸಂಪೂರ್ಣ ಅವಧಿಗೆ ಫೀಲ್ಡಿಂಗ್ ಮಾಡಿದ್ದರು.

ಎನ್​ಸಿಎನಿಂದ ಗ್ರೀನ್​ ಸಿಗ್ನಲ್​

ರಾಹುಲ್​ ಮತ್ತು ಶ್ರೇಯಸ್​​ಗೆ ಎನ್​ಸಿಎನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ಕಾರಣ ಆಯ್ಕೆದಾರರು ಏಷ್ಯಾ ಕಪ್ ತಂಡಕ್ಕೆ ಅವರಿಬ್ಬರನ್ನೂ ಸೇರ್ಪಡೆಗೊಳಿಸಿದರು. ಏತನ್ಮಧ್ಯೆ, ಅಗರ್ಕರ್ ಸೋಮವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಕಳೆದ ಕೆಲವು ದಿನಗಳಿಂದ ಹೊಸ ಗಾಯದ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರಿಂದಾಗಿ ಅವರು ಏಷ್ಯಾ ಕಪ್​ನ ಗುಂಪು ಹಂತದಿಂದ ಹೊರಗುಳಿಯಬಹುದು ಎಂದು ಹೇಳಿದ್ದಾರೆ. ರಾಹುಲ್ ಅವರ ಗಾಯದ ಸಮಸ್ಯೆಯಿಂದಾಗಿ ಸಂಜು ಸ್ಯಾಮ್ಸನ್ ಅವರನ್ನು ಮೀಸಲು ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂಬುದಅಗಿಯೂ ಅವರು ಹೇಳಿದ್ದಾರೆ. ಆದಾಗ್ಯೂ, ಅಯ್ಯರ್ ಅವರ ಫಿಟ್ನೆಸ್ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : Arshdeep Singh: ಯಾರ್ಕರ್​ ಕಿಂಗ್​ ಬುಮ್ರಾ ದಾಖಲೆ ಮುರಿದ ಅರ್ಶ್​ದೀಪ್​ ಸಿಂಗ್

ಶ್ರೇಯಸ್ ಸಂಪೂರ್ಣ ಫಿಟ್ ಆಗಿದ್ದಾರೆ. ರಾಹುಲ್, ಕಳೆದ ಕೆಲವು ದಿನಗಳಿಂದ ಅವರ ಮೂಲ ಗಾಯವಲ್ಲ ಮತ್ತೊಂದು ಗಾಯಕ್ಕೆ ಒಳಗಾಗಿದ್ದಾರೆ, ಅದಕ್ಕಾಗಿಯೇ ಸಂಜು ತಂಡದೊಂದಿಗೆ ಪ್ರಯಾಣಿಸಲಿದ್ದಾರೆ. ಆದರೆ ಫಿಸಿಯ ಅಧಿಕೃತ ಹೇಳಿಕೆ ನೀಡಲಿದ್ದಾರೆ ಎಂಬುದಾಗಿ ಅವರು ಹೇಳಿದ್ದಾರೆ. ರಾಹುಲ್​ ಅವರು ಏಷ್ಯಾ ಕಪ್​​ನ ಆರಂಭದಲ್ಲಿ ಅಲ್ಲದಿದ್ದರೂ, ಎರಡನೇ ಅಥವಾ ಮೂರನೇ ಪಂದ್ಯದಲ್ಲಿ ಸಂಪೂರ್ಣವಾಗಿ ಫಿಟ್ ಆಗುತ್ತಾರೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಆದರೆ ಅವರು ಉತ್ತಮ ಹಾದಿಯಲ್ಲಿದ್ದಾರೆ, “ಎಂದು ಬಿಸಿಸಿಐ ಮುಖ್ಯ ಆಯ್ಕೆದಾರ ಹೇಳಿದರು.

ಸೆಪ್ಟೆಂಬರ್ 2 ರಿಂದ ಪಲ್ಲೆಕೆಲೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತನ್ನ ಏಷ್ಯಾ ಕಪ್ ಅಭಿಯಾನವನ್ನು ಪ್ರಾರಂಭಿಸಲಿದ್ದು, ಎರಡು ದಿನಗಳ ನಂತರ ಅದೇ ಸ್ಥಳದಲ್ಲಿ ಕ್ವಾಲಿಫೈಯರ್ ನೇಪಾಳವನ್ನು ಎದುರಿಸಲಿದೆ.

Asia Cup 2023: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಒಲಿದ ಅದೃಷ್ಟ, ಇಲ್ಲಿದೆ ಪಟ್ಟಿ

ಮುಂಬೈ: ಆಗಸ್ಟ್‌ 30ರಿಂದ ಆರಂಭವಾಗುವ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ (Asia Cup 2023) ಭಾರತ ತಂಡವನ್ನು ಪ್ರಕಟಿಸಲಾಗಿದೆ. 17 ಆಟಗಾರರಿರುವ ಟೀಮ್‌ ಇಂಡಿಯಾವನ್ನು ಆಯ್ಕೆ ಸಮಿತಿಯು ಘೋಷಿಸಿದ್ದು, ಕನ್ನಡಿಗರಾದ ಕೆ.ಎಲ್‌.ರಾಹುಲ್‌ (K L Rahul) ಹಾಗೂ ಪ್ರಸಿದ್ಧ್‌ ಕೃಷ್ಣ ಸ್ಥಾನ ಪಡೆದಿದ್ದಾರೆ. ಐಪಿಎಲ್‌ ವೇಳೆ ಗಾಯಗೊಂಡಿದ್ದ ಕೆ.ಎಲ್‌.ರಾಹುಲ್‌ ಅವರು ಚೇತರಿಸಿಕೊಂಡಿದ್ದು, ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

ಕಳೆದ ಬಾರಿಯ ಐಪಿಎಲ್‌ ಹೀರೋಗಳಾದ ಶುಭಮನ್‌ ಗಿಲ್‌ ಹಾಗೂ ತಿಲಕ್‌ ಯಾದವ್‌ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೆಸ್ಟ್‌ ವಿಂಡೀಸ್‌ ವಿರುದ್ಧದ ಸರಣಿಯಲ್ಲಿ ತಿಲಕ್‌ ವರ್ಮಾ ಉತ್ತಮ ಪ್ರದರ್ಶನ ತೋರಿದ್ದು ಕೂಡ ಅವರ ಆಯ್ಕೆಗೆ ಕಾರಣವಾಗಿದೆ. ಇನ್ನು ಜಸ್‌ಪ್ರಿತ್‌ ಬುಮ್ರಾ ಕೂಡ ಗಾಯದ ಸಮಸ್ಯೆಯಿಂದ ಹೊರಬಂದು ಏಷ್ಯಾ ಕಪ್‌ ತಂಡವನ್ನು ಸೇರಿಕೊಂಡಿದ್ದಾರೆ. ಶ್ರೇಯಸ್‌ ಅಯ್ಯರ್‌ ಕೂಡ ಟೀಮ್‌ ಇಂಡಿಯಾದಲ್ಲಿದ್ದರೆ, ಸಂಜು ಸ್ಯಾಮ್ಸನ್‌ ಮೀಸಲು ಆಟಗಾರರಾಗಿದ್ದಾರೆ.

ಭಾರತ ತಂಡ ಹೀಗಿದೆ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಸರ್‌ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌ (ಮೀಸಲು ಆಟಗಾರ).

ಯುಜುವೇಂದ್ರ ಚಾಹಲ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ. ನಿರೀಕ್ಷೆಯಂತೆಯೇ ಆರ್.ಅಶ್ವಿನ್‌ ಅವರನ್ನು ತಂಡದಲ್ಲಿ ಸೇರಿಸಿಲ್ಲ. ಟಿ-20ಗೆ ಪದಾರ್ಪಣೆ ಮಾಡಿದ್ದ ತಿಲಕ್‌ ವರ್ಮಾ ಈಗ ಏಕದಿನ ತಂಡಕ್ಕೂ ಆಯ್ಕೆಯಾಗಿದ್ದಾರೆ. ಇಶಾನ್‌ ಕಿಶನ್‌ ಬದಲು ಕೆ.ಎಲ್‌.ರಾಹುಲ್‌ ಅವರೇ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಭಾರತದ ಮೊದಲ ಪಂದ್ಯ ಯಾವಾಗ?

ಭಾರತವು ಪಾಕಿಸ್ತಾನದ ವಿರುದ್ಧ ಸೆಪ್ಟೆಂಬರ್‌ 2ರಂದು ಟೂರ್ನಿಯ ಮೊದಲ ಪಂಧ್ಯ ಆಡಲಿದೆ. ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಗುಂಪಿನಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು ಸೂಪರ್‌ 4ರ ಹಂತ ತಲುಪಲಿವೆ. ಸೂಪರ್‌ 4ರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಗಳು ಸೆಪ್ಟೆಂಬರ್‌ 17ರಂದು ಕೊಲೊಂಬೊದಲ್ಲಿ ಮುಖಾಮುಖಿಯಾಗಲಿವೆ.

Exit mobile version