ತಿರುವನಂತಪುರಂ: ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ವಿಶ್ವ ಕಪ್ ಪಂದ್ಯಕ್ಕೂ (ICC World Cup 2023) ಮುನ್ನ ಭಾರತ ಕ್ರಿಕೆಟ್ ತಂಡವು ಸೋಮವಾರ ತಿರುವನಂತಪುರಂನಲ್ಲಿ ಬಿಡುವಿಲ್ಲದ ಅಭ್ಯಾಸ ನಡೆಸಿತ್ತು. ರೋಹಿತ್ ಶರ್ಮಾ ಮತ್ತು ಬಳಗ ಬೆಳಿಗ್ಗೆ ಫೋಟೋ ಶೂಟ್ ಮಾಡಿದರು. ಮಧ್ಹಾಹ್ನದ ಬಳಿಕ ಅಭ್ಯಾಸಕ್ಕೆ ಬಂದರು. ಏತನ್ಮಧ್ಯೆ, ಕೆಎಲ್ ರಾಹುಲ್ ವಿಶಿಷ್ಟ ರೀತಿಯಲ್ಲಿ ಅಭ್ಯಾಸ ಮಾಡುವ ಮೂಲಕ ಗ್ಲೌಸ್ ಧರಿಸಿದ್ದರು. ಥ್ರೋಡೌನ್ ಸ್ಪೆಷಲಿಸ್ಟ್ಗಳು ಅವರ ಮೇಲೆ ಚೆಂಡುಗಳನ್ನು ಎಸೆದರು. ನೆದರ್ಲ್ಯಾಂಡ್ಸ್ ವಿರುದ್ಧದ ಅಭ್ಯಾಸಕ್ಕೆ ಮೊದಲು ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ವಿರುದ್ಧ ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸಿದರು.
ಕೆಎಲ್ ರಾಹುಲ್ ಅವರ ಮುಂದೆ ದೊಡ್ಡ ಟೈರ್ ಹಿಡಿದು ವಿಕೆಟ್ ಕೀಪಿಂಗ್ ಮಾಡುತ್ತಿದ್ದರು. ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರಿಗೆ ಸೂಚನೆಗಳನ್ನು ನೀಡಿದರು. ಕಾರಣವೇನು. ಕೆ.ಎಲ್. ರಾಹುಲ್ ನಿಯಮಿತವಾಗಿ ವಿಕೆಟ್ ಕೀಪಿಂಗ್ ಮಾಡದ ಕಾರಣ ವಿಕೆಟ್ ಕೀಪಿಂಗ್ ಮಾಡಲು ಹೆಣಗಾಡುತ್ತಿದ್ದಾರೆ. ಕಾಲಿನ ಬದಿಯಲ್ಲಿ ಪಿಚ್ ಮಾಡುವ ಸ್ಪಿನ್ ಮತ್ತು ನಿಧಾನಗತಿಯ ಎಸೆತಗಳ ವಿರುದ್ಧ ಅವರ ಕೀಪಿಂಗ್ ಚೆನ್ನಾಗಿಲ್ಲ. ಹೀಗಾಗಿ ಟೈರ್ ಬಳಸಿ ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸಿದರು.
ಕೆಎಲ್ ರಾಹುಲ್ ಟೈರ್ ಬಳಸಿದ್ದೇಕೆ?
ದೊಡ್ಡ ಟೈರ್ ಪಂದ್ಯದ ಸಮಯದಲ್ಲಿ ನೆರಳಾಗಿ ಅಥವಾ ಬ್ಯಾಟರ್ ನ ಬದಲಿಯಾಗಿ ಕಾರ್ಯನಿರ್ವಹಿಸುತ್ತದೆ. ಕುಲದೀಪ್ ಯಾದವ್ ಅವರು ತಮ್ಮ ಎಸೆತಗಳನ್ನು ಕಾಲಿನ ಬದಿಯಲ್ಲಿ ಪಿಚ್ ಮಾಡುವ ರೀತಿಯಲ್ಲೇ ಟೈರ್ ಪಕ್ಕದಲ್ಲಿ ಚೆಂಡನ್ನು ಸ್ಪಿನ್ ಮಾಡಲಾಯಿತು. ಅಂತೆಯೇ ಅಶ್ವಿನ್ ಮತ್ತು ಜಡೇಜಾ ಕೂಡ ಚೆಂಡನ್ನು ಲೆಗ್ಸೈಡ್ಗೆ ತಿರುಗಿಸುತ್ತಾರೆ. ಆ ಮಾದರಿಯ ಚೆಂಡುಗಳನ್ನೂ ಟೈರ್ಗಳ ಪಕ್ಕದಿಂದ ಹಾಕಲಾಯಿತು. ಕೆ. ಎಲ್ ರಾಹುಲ್ ಅಂಥ ಚೆಂಡುಗಳನ್ನೂ ಕೀಪಿಂಗ್ ಮಾಡಿದರು.
ಇದನ್ನೂ ಓದಿ : World Cup History: 2007ರ ವಿಶ್ವಕಪ್; ಟೂರ್ನಿಯಲ್ಲಿ ಹತ್ತಾರು ಮೇನಿಯಾ, ಆಸ್ಟ್ರೇಲಿಯಾ ಏಕಮೇವಾದ್ವಿತೀಯ!
ಕೆಎಲ್ ರಾಹುಲ್ ನಿಯಮಿತವಾಗಿ ವಿಕೆಟ್ ಕೀಪಿಂಗ್ ಮಾಡುವುದಿಲ್ಲ. ಆದರೆ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ, ಕೆಎಲ್ ರಾಹುಲ್ ಅವರಿಗೆ ಆ ಜವಾಬ್ದಾರಿ ನೀಡಲಾಗಿದೆ. ಯಾಕೆಂದರೆ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟರ್. ವಿಕೆಟ್ ಕೀಪಿಂಗ್ ನೆರವೂ ಸಿಕ್ಕರೆ ತಂಡಕ್ಕೆ ದೊಡ್ಡ ಲಾಭವಿದೆ. ಹೀಗಾಗಿ ಅವರನ್ನೇ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ, ಅವರ ವಿಕೆಟ್ ಕೀಪಿಂಗ್ ವೈಫಲ್ಯಗಳು ಕೆಲವೊಂದು ಬಾರಿ ಟೀಕಾಕಾರರ ಬಾಯಿಗೆ ಆಹಾರವಾಗುತ್ತದೆ.
ಇದನ್ನೂ ಓದಿ: ICC World Cup 2023 : ವಿಶ್ವ ಕಪ್ ಉದ್ಘಾಟನಾ ಸಮಾರಂಭದಲ್ಲಿ ಏನೇನಿರುತ್ತವೆ? ಇಲ್ಲಿದೆ ಎಲ್ಲ ವಿವರ
ಗಾಯದಿಂದ ಮರಳಿದ ನಂತರ ಕೆಎಲ್ ರಾಹುಲ್ ಕುಲದೀಪ್ ಯಾದವ್ ಅವರ ಸ್ಪಿನ್ ಅಥವಾ ಭಾರತದ ವೇಗದ ಬೌಲರ್ಗಳು ಲೆಗ್ ಸೈಡ್ನಲ್ಲಿ ಹಾಕುವ ನಿಧಾನಗತಿಯ ಎಸೆತಗಳ ವಿರುದ್ಧ ಪ್ರಯಾಸ ಪಡುತ್ತಾರೆ. ಹೀಗಾಗಿ ಅವರು ಹೆಚ್ಚುವರಿ ಕೀಪಿಂಗ್ ಅಭ್ಯಾಗಳನ್ನು ನಡೆಸುತ್ತಿದ್ದಾರೆ.
ಮಂಗಳವಾರ ನಡೆಯಲಿರುವ ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಸಂಪೂರ್ಣ 50 ಓವರ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ತನ್ನ ತಪ್ಪುಗಳಿಂದ ಪಾಠ ಕಲಿಯಲು ಇದು ಅವರಿಗೆ ಇದು ಉತ್ತಮ ಅವಕಾಶವಾಗಿದೆ.