ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರು ಸ್ನಾಯು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆಯ ಹಾದಿಯಲ್ಲಿದ್ದಾರೆ. ಇದೇ ಕಾರಣದಿಂದ ಅವರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದ ಹೊರಬಿದ್ದಿದ್ದರು. ಆದರೆ ಕೆಲ ದಿನಗಳ ಹಿಂದೆ ಲಂಡನ್ನ ಸ್ಟ್ರಿಪ್ ಕ್ಲಬ್ (ಬೆತ್ತಲೆ ಕೂಟ)ದಲ್ಲಿರುವ ವಿಡಿಯೊಗಳು ವೈರಲ್ ಆಗಿ ಹಲವು ಟೀಕೆಗಳು ಬಂದಿದ್ದವು. ಇದೀಗ ಈ ಘಟನೆಗೆ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಮೇ 1ರಂದು ನಡೆದ ಆರ್ಸಿಬಿ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರಾಹುಲ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಟಗಾರರ ಸಹಾಯದಿಂದ ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಗಿತ್ತು. ಗಾಯದ ಪ್ರಮಾಣ ಗಂಭಿರವಾದ ಪರಿಣಾಮ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸದ್ಯ ಶಸ್ತ್ರಚಿಕಿತ್ಸೆಗೊಳಗಾಗಿ ಲಂಡನ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ಯಶಸ್ವಿಗೊಂಡ ವಿಚಾರವನ್ನು ಅವರು ಊರುಗೋಲಿನ ಸಹಾಯದಿಂದ ನಡೆಯುತ್ತಿರುವ ಫೋಟೊ ಹಂಚಿಕೊಂಡು ತಿಳಿಸಿದ್ದರು. ಆದರೆ ಶನಿವಾರ ರಾಹುಲ್ ಕ್ಲಬ್ಗೆ ತೆರಳಿರುವ ಫೋಟೊ ಮತ್ತು ವಿಡಿಯೊ ವೈರಲ್ ಆಗಿತ್ತು. ಬೆತ್ತಲೆ ಕೂಟದಲ್ಲಿ ಅವರು ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಅವರ ಪತ್ನಿ ಅಥಿಯಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ IPL 2023: ಮೀಸಲು ದಿನವಾದರೂ ನಡೆಯಲಿದೆಯಾ ಫೈನಲ್? ಇಲ್ಲಿದೆ ಮಾಹಿತಿ
KL Rahul recovering well in London pic.twitter.com/Wi1EVOxCY4
— Mufaddal Vohra ➐ (@Man_issssh) May 26, 2023
“ನಾನು ಸಾಮಾನ್ಯವಾಗಿ ಇಂತಹ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ಈ ಬಾರಿ ಸುಮ್ಮನಿರುವುದು ಸರಿಯಲ್ಲ ಎನಿಸಿತು. ನಾನು, ರಾಹುಲ್ ಮತ್ತು ನಮ್ಮಿಬ್ಬರ ಗೆಳೆಯರು ಸಾಮಾನ್ಯವಾಗಿ ಹೋಗುವ ಸ್ಥಳಕ್ಕೆ ತೆರಳಿದ್ದೆವು. ಇದಕ್ಕೆ ರೆಕ್ಕೆಪುಕ್ಕ ಕಟ್ಟಬೇಕಾಗಿಲ್ಲ. ಯಾವುದೇ ಒಂದು ವಿಚಾರವನ್ನು ಮಾತನಾಡುವ ಮೊದಲು ಅದು ನಿಜವೇ ಎಂದು ಮತ್ತೊಮ್ಮೆ ಪರಿಶೀಲಿಸಿ’ ಎಂದು ನೆಟ್ಟಿಗರ ವರ್ತನೆಗೆ ತಿರುಗೇಟು ನೀಡಿದ್ದಾರೆ.
ರಾಹುಲ್ ಅವರ ಫೋಟೊ ಕಂಡ ಕೆಲವರು ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವ ಯಾವುದೇ ಚಿಂತೆ ಇಲ್ಲ, ಗಾಯವಾಗಿದ್ದರೂ ಮೋಜು ಮಸ್ತಿಗೆ ಯಾವುದೇ ಅಡ್ಡಿ ಇಲ್ಲ ಹೀಗೆ ಹಲವು ರೀತಿಯ ಕಮೆಂಟ್ ಮೂಲಕ ರಾಹುಲ್ ಅವರನ್ನು ಟೀಕಿಸಿದ್ದರು.
ಕೆ.ಎಲ್. ರಾಹುಲ್(Athiya Shetty KL Rahul wedding) ಮತ್ತು ಬಾಲಿವುಡ್ ತಾರೆ ಅಥಿಯಾ ಶೆಟ್ಟಿ(Athiya kl rahul marriage) ಜನವರಿ 23ರಂದು ಖಾಸಗಿ ಸಮಾರಂಭದಲ್ಲಿ ಸಪ್ತಪದಿ ತುಳಿದಿದ್ದರು. ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಐಷಾರಾಮಿ ಬಂಗಲೆಯಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.