Site icon Vistara News

IND vs ZIM ODI | ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದ ಕೆ. ಎಲ್‌ ರಾಹುಲ್‌ ಬೌಲಿಂಗ್‌ ಮಾಡಲು ನಿರ್ಧಾರ

IND vs ZIM ODI

ಹರಾರೆ : ಭಾರತ ಹಾಗೂ ಆತಿಥೇಯ ಜಿಂಬಾಬ್ವೆ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯ ಹರಾರೆಯ ಸ್ಪೋರ್ಟ್ಸ್‌ ಕ್ಲಬ್‌ ಗ್ರೌಂಡ್‌ನಲ್ಲಿ ಗುರವಾರ ಆರಂಭಗೊಂಡಿದೆ. ಟಾಸ್‌ ಗೆದ್ದಿರುವ ಟೀಮ್‌ ಇಂಡಿಯಾ ನಾಯಕ ಕೆ. ಎಲ್‌ ರಾಹುಲ್‌ ಮೊದಲು ಬೌಲಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಪಿಚ್‌ ಬೆಳಗಿನ ಅವಧಿಯಲ್ಲಿ ಬೌಲಿಂಗ್‌ಗೆ ಹೆಚ್ಚು ಪೂರಕವಾಗಿರುವ ಕಾರಣ ರಾಹುಲ್‌ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ೩೦೦ ರನ್‌ಗಳ ಮೊತ್ತವನ್ನೂ ಈ ಸ್ಟೇಡಿಯಮ್‌ನಲ್ಲಿ ಚೇಸ್‌ ಮಾಡಲು ಸಾಧ್ಯವಿದೆ ಎಂಬುದು ಆ ಗ್ರೌಂಡ್‌ನಲ್ಲಿ ಇತ್ತೀಚೆಗೆ ನಡೆದ ಸರಣಿಯಿಂದ ಸಾಬೀತಾಗಿರುವ ಕಾರಣ ಭಾರತ ಅದಕ್ಕೆ ಪೂರಕ ನಿರ್ಧಾರ ಕೈಗೊಂಡಿದೆ.

ಆರು ವರ್ಷಗಳ ಬಳಿಕ ಭಾರತ ತಂಡ ಜಿಂಬಾಬ್ವೆಗೆ ಪ್ರವಾಸ ಮಾಡಿದ್ದು, ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಯೋಜನೆಯೊಂದಿಗೆ ಕಣಕ್ಕೆ ಇಳಿಯಲಿದೆ. ಅಂತೆಯೇ ಕೆ. ಎಲ್‌ ರಾಹುಲ್‌ ಅವರಿಗೆ ಇದು ನಾಯಕತ್ವದ ಸವಾಲಾಗಿದೆ.

ತಂಡಗಳು:

ಭಾರತ: ಕೆ. ಎಲ್‌ ರಾಹುಲ್‌ ನಾಯಕ (ನಾಯಕ), ಶಿಖರ್‌ ಧವನ್‌ (ಉಪನಾಯಕ), ಶುಬ್ಮನ್ ಗಿಲ್‌, ದೀಪಕ್‌ ಹೂಡ, ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌, ದೀಪಕ್ ಚಾಹರ್‌, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಪ್ರಸಿದ್ಧ್‌ ಕೃಷ್ಣ, ಮೊಹಮ್ಮದ್‌ ಸಿರಾಜ್‌.

ಜಿಂಬಾಬ್ವೆ ತಂಡ

ರೆಗಿನ್‌ ಚಕಬ್ವಾ (ನಾಯಕ), ರಿಯಾನ್‌ ಬರ್ಲ್‌, ಟನಕಾ, ಬ್ರಾಡ್ಲಿ ಎವಾನ್ಸ್‌, ಲೂಜ್‌ ಜಾಂಗ್ವೆ, ಇನೋಸೆಂಟ್‌ ಕೈಯಾ, ತುಕಾಡ್ಜ್‌ವಾನೆಶ್‌ ಕೈತಾನೊ, ಕ್ಲೈವ್‌ ಮದಂಡೆ, ವೆಸ್ಸೆಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರಾ, ಟೋನಿ ಮುನಿಯೋಂಗಾ, ರಿಚರ್ಡ್ ಎನ್‌ಗರವ, ವಿಕ್ಟರ್ ನ್ಯುಚಿ, ಸಿಕಂದರ್‌ ರಾಜಾ, ಮಿಲ್ಟನ್‌ ಶುಂಭಾ, ಡೊನಾಲ್ಡ್ ತಿರಿಪಾನೊ.

Exit mobile version