Site icon Vistara News

Raghu Raghavendra| ಆಟಗಾರರ ಶೂ ಕ್ಲೀನ್​ ಮಾಡಿದ ಕನ್ನಡಿಗ ರಘು ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

Raghu Raghavendraa

ಅಡಿಲೇಡ್​: ಐಸಿಸಿ ಟಿ20 ವಿಶ್ವ ಕಪ್​ನ ಬಾಂಗ್ಲಾದೇಶ ವಿರುದ್ಧದ ಸೂಪರ್ 12 ಪಂದ್ಯದಲ್ಲಿ ಭಾರತ ತಂಡ ಐದು ರನ್‌ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮೈದಾನದ ಸುತ್ತ ತಿರುಗಿ ಟೀಮ್​ ಇಂಡಿಯಾದ ಆಟಗಾರರಿಗೆ ನೆರವಾದ ಥ್ರೋಡೌನ್​ ಸ್ಪೆಷಲಿಸ್ಟ್​ ಕನ್ನಡಿಗ ರಘು ರಾಘವೇಂದ್ರ(Raghu Raghavendra) ಕಾರ್ಯಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ 6 ವಿಕೆಟ್​ಗೆ 184 ರನ್​ ಗಳಿಸಿ ಸೊವಾಲೊಡ್ಡಿತು. ಆದರೆ ಬಾಂಗ್ಲಾ ಇನಿಂಗ್ಸ್​ ವೇಳೆ ಮಳೆ ಬಂದ ಕಾರಣ ಡಕ್​ವರ್ತ್​ ಲೂಯಿಸ್​ ನಿಯಮದನ್ವಯ 16 ಓವರ್​ಗೆ ಪಂದ್ಯ ಸೀಮಿತಗೊಳಿಸಿ ಬಾಂಗ್ಲಾಗೆ 151 ರನ್​ ಗುರಿ ನೀಡಲಾಯಿತು. ಇದೇ ವೇಳೆ ಬ್ಯಾಟಿಂಗ್​ಗೆ ಬಂದ ಲಿಟ್ಟನ್​ ದಾಸ್​ ರನ್​ ಗಳಿಸುವ ವೇಳೆ ಜಾರಿ ಬಿದ್ದರು. ಮಳೆ ಬಂದ ಕಾರಣ ಮೈದಾನದ ತೇವಾಂಶವನ್ನು ಅರಿತ ರಘು ಆಟಗಾರರ ಸುರಕ್ಷತೆ ಮತ್ತು ಪಂದ್ಯವನ್ನು ಗೆಲ್ಲುವು ಪಣ ತೊಟ್ಟು ಮೈದಾನದ ಸುತ್ತ ಓಡಾಟ ನಡೆಸಿ ಆಟಗಾರರ ಶೂಗಳಿಗೆ ಅಂಟಿಕೊಂಡಿದ್ದ ಹುಲ್ಲುಗಳ ಜತೆಗೆ ಮಣ್ಣನ್ನು ಕ್ಲೀನ್ ಮಾಡುವ ಮೂಲಕ ಯಾವುದೇ ಅವಘಡವಾಗದಂತೆ ನೋಡಿಕೊಂಡಿದ್ದಾರೆ. ರಘು ಅವರ ಈ ಕಾರ್ಯಕ್ಕೆ ನಾಯಕ ರೋಹಿತ್​ ಶರ್ಮಾ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪಂದ್ಯ ಗೆದ್ದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ “ನಮ್ಮ ತಂಡ ಅದ್ಭುತ ಫೀಲ್ಡಿಂಗ್ ನಡೆಸಿತು. ಇದರ ಶ್ರೇಯಸ್ಸು ರಘು ಸರ್​ ಅವರಿಗೂ ಸಲ್ಲುತ್ತದೆ. ಆಟಗಾರರು ಎಲ್ಲೂ ಜಾರದಂತೆ ನೆರವಾದ ರಘು ಭಾರತದ ಗೆಲುವಿನಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಕ್ಯಾಪ್ ತೊಟ್ಟವರಷ್ಟೇ ತಂಡದ ಹೀರೋಗಳಲ್ಲ ಎಂಬುದನ್ನು ರಘು ಅವರು ಸಾಧಿಸಿದ್ದಾರೆ” ಎಂದು ರಘು ಅವರ ಕಾರ್ಯಕ್ಕೆ ರೋಹಿತ್​ ಶ್ಲಾಘನೆ ವ್ಯಕ್ತಪಡಿಸಿದರು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ರಘು ಕಾರ್ಯವನ್ನು ಮೆಚ್ಚಿನ ಅನೇಕರು ಟ್ವೀಟ್ ಮೂಲಕ ”ನಿಮ್ಮ ಕಾರ್ಯ ನಿಜಕ್ಕೂ ಗ್ರೇಟ್. ಸೆಲ್ಯೂಟ್ ಯು ಸರ್” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ | Virat Kohli | ಕೊಹ್ಲಿ ಮೋಸದಾಟದಿಂದ ಪಂದ್ಯ ಸೋಲುವಂತಾಯಿತು; ನೂರುಲ್​ ಹಸನ್​ ಆರೋಪ

Exit mobile version