ಬೆಂಗಳೂರು: 2023 ರ ವಿಶ್ವ ಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ 49ನೇ ಏಕದಿನ ಶತಕವನ್ನು ಗಳಿಸಿದ ನಂತರ ವಿರಾಟ್ ಕೊಹ್ಲಿ ಸಾಕಷ್ಟು ನಿರಾಳರಾಗಿದ್ದಾರೆ. ಕೋಲ್ಕೊತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ 120 ಎಸೆತಗಳಲ್ಲಿ 101 ರನ್ ಬಾರಿಸಿದ ಕೊಹ್ಲಿ ಅವರ ವೃತ್ತಿಜೀವನದ ಅತ್ಯಂತ ಕಠಿಣ ಶತಕಗಳಲ್ಲಿ ಒಂದು. ಹೊಸ ಮೈಲಿಗಲ್ಲು ತಲುಪಿದ ನಂತರ ಕೊಹ್ಲಿಯ ಬ್ಯಾಟಿಂಗ್ ಅನ್ನು ಶ್ರೇಷ್ಠ ರಿಕಿ ಪಾಂಟಿಂಗ್ ಸೇರಿದಂತೆ ಎಲ್ಲರೂ ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ, ವಿಶ್ವ ಕಪ್ 23 ವೀಕ್ಷಕವಿವರಣೆಗಾರರಲ್ಲಿ ಒಬ್ಬರು. ಅವರು ವಿರಾಟ್ ಕೊಹ್ಲಿಯ ಸಾಧನೆಯನ್ನು ನಾನಾ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
ಇದನ್ನೂ ಓದಿ: Virat Kohli : ಐಷಾರಾಮಿ ಅವಕಾಶ ತ್ಯಜಿಸಿ ಎಕಾನಮಿ ಕ್ಲಾಸ್ನಲ್ಲಿ ಪ್ರಯಾಣಿಸಿದ ಕಿಂಗ್ ಕೊಹ್ಲಿ
ಅತಿ ಹೆಚ್ಚು ಏಕದಿನ ಶತಕಗಳನ್ನು ಬಾರಿಸಿದ ಮಾಸ್ಟರ್ ಬ್ಲಾಸ್ಟರ್ ಅವರ ದಾಖಲೆಯನ್ನು ಕೊಹ್ಲಿ ಸರಿಗಟ್ಟುವ ಬಗ್ಗೆ ಆಸೀಸ್ನ ಮಾಜಿ ಆಟಗಾರ ವಿಭಿನ್ನವಾಗಿ ವಿಶ್ಲೇಷಣೆ ಮಾಡಿದ್ದಾರೆ. ಇಬ್ಬರೂ ಭಾರತೀಯ ಬ್ಯಾಟಿಂಗ್ ಶ್ರೇಷ್ಠರ ವಿರುದ್ಧ ಆಡಿದ ಕೆಲವೇ ಕೆಲವರಲ್ಲಿ ಒಬ್ಬರಾದ ಪಾಂಟಿಂಗ್ ಅವರ ಹೇಳಿಕೆಗಳು ಅತ್ಯಂತ ಮೌಲ್ಯಯುತವಾಗಿದೆ. ಇಬ್ಬರೂ ದಂತಕಥೆಗಳನ್ನು ಹತ್ತಿರದಿಂದ ನೋಡಿದ ಪಾಂಟಿಂಗ್ ಸಚಿನ್ ಬಗ್ಗೆ ಎಲ್ಲಾ ಮೆಚ್ಚುಗೆ ಮತ್ತು ಗೌರವವನ್ನು ಹೊಂದಿದ್ದರೂ, ವಿರಾಟ್ ಆಟದ ಬಗ್ಗೆ ಹೆಚ್ಚು ಒಲವು ಹೊಂದಿರುವನ್ನು ವೀಕ್ಷಕ ವಿವರಣೆ ವೇಳೆ ವ್ಯಕ್ತಪಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಸಂಪೂರ್ಣ ಅತ್ಯುತ್ತಮ ಆಟಗಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ಅದನ್ನು ಬಹಳ ಸಮಯದಿಂದ ಹೇಳುತ್ತಿದ್ದೇನೆ. ಹಾಗೆಂದು ವಿರಾಟ್ ಕೊಹ್ಲಿ ಸಚಿನ್ ಅವರ ದಾಖಲೆಯನ್ನು ಸರಿಗಟ್ಟುವ ಅಗತ್ಯವಿಲ್ಲ,. ಆದರೆ ಕೊಹ್ಲಿ ಅವರು 49 ಏಕದಿನ ಶತಕಗಳನ್ನು ಗಳಿಸಿ. ಸಚಿನ್ ಅವರನ್ನು ಸರಿಗಟ್ಟಿದ್ದಾರೆ ಮತ್ತು ಸಚಿನ್ ಅವರಿಗಿಂತ 175 ಕಡಿಮೆ ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ ಎಂದು ಪಾಂಟಿಂಗ್ ಐಸಿಸಿಯೊಂದಿಗೆ ಮಾತನಾಡುವಾಗ ಕೊಹ್ಲಿ ಇನ್ನಿಂಗ್ಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕೊಹ್ಲಿ ಈಗಾಗಲೇ 8 ಪಂದ್ಯಗಳಿಂದ 543 ರನ್ ಗಳಿಸುವ ಮೂಲಕ ಪಂದ್ಯಾವಳಿಯ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ . ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ಗಿಂತ ಕೇವಲ 7 ರನ್ ಹಿಂದೆ ಇದ್ದಾರೆ. ಆದರೆ, ಕೊಹ್ಲಿಯ ಬ್ಯಾಟಿಂಗ್ ವೈಭವ ಇನ್ನೂ ಮುಗಿದಿಲ್ಲ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಒಂದು ವಾರದ ಅವಧಿಯಲ್ಲಿ ಇನ್ನೂ ಒಂದು ಲೀಗ್ ಪಂದ್ಯ ನಡೆಯಲಿದ್ದು, ವಿಶ್ವಕಪ್ ಗೆಲ್ಲುವ ತಮ್ಮ ಕನಸನ್ನು ನನಸಾಗಿಸಲು ಸೆಮಿಫೈನಲ್ ಮತ್ತು ಫೈನಲ್ನಲ್ಲಿ ಕೊಹ್ಲಿ ವಿಶೇಷ ಪ್ರದರ್ಶನ ನೀಡಲಿ ಎಂದು ಭಾರತ ಬಯಸಿದೆ ಎಂದು ಪಾಟಿಂಗ್ ಹೇಳಿದ್ದಾರೆ.
ವಿರಾಟ್ ಕೊಹ್ಲಿಗೆ ದಾಖಲೆ ಮುರಿಯುವ ವಿಚಾರ ಬೆನ್ನ ಮೇಲಿನ ಬೇತಾಳನಂತೆ ಭಾಸವಾಗಿರಬಹುದು. ಸಚಿನ್ ಅವರ ದಾಖಲೆಯನ್ನು ಸರಿಗಟ್ಟಲು ಅವರು ಹೆಚ್ಚು ಶ್ರಮಿಸಿದ್ದರು. ಅದು ಈಗ ಮುಗಿದಿದೆ. ಉತ್ತಮ ಸಮಯದಲ್ಲಿಯೇ ಅವರಿಗೆ ಈ ಅವಕಾಶ ಲಭಿಸಿದೆ. ಲೀಗ್ನಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿದ್ದು, ನಂತರ ಅವರು ಸೆಮಿಫೈನಲ್ ಗೆ ಹೋಗುತ್ತಾರೆ. ಇದು ವಿರಾಟ್ ಬಹುತೇಕ ಪರಿಪೂರ್ಣ ದಿನ ಮತ್ತು ಭಾರತಕ್ಕೆ ಉತ್ತಮ ದಿನವಾಗಿತ್ತು, ಎಂದು ಆಸೀಸ್ ಶ್ರೇಷ್ಠ ಆಟಗಾರ ಹೇಳಿದರು.