ಬೆಂಗಳೂರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಜನಪ್ರಿಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮಂಗಳವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮ ಅಯೋಜಿಸಿತ್ತು. ಈ ವೇಳೆ ತಮ್ಮ ತಂಡದ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಸ್ಮೃತಿ ಮಂದಾನ ಅವರು ಆರ್ಸಿಬಿಯ ಹೊಸ ಮ್ಯಾಚ್ ಕಿಟ್ ಅನ್ನು ಬಿಡುಗಡೆ ಮಾಡಿದರು. ಪ್ರಸಿದ್ಧ ಡಿಜೆ ಮತ್ತು ಸಂಗೀತ ನಿರ್ಮಾಪಕ ಅಲನ್ ವಾಕರ್ ಕೂಡ ಸಮಾರಂಭದಲ್ಲಿ ಹಾಜರಿದ್ದರು.
Virat, Faf & Smriti gifted a RCB Jersey to Alan Walker. 👏 #RoyalAnnouncement #RCBUnbox #RCBChampions #RCBvMI #ROSE #ViratKohli𓃵 pic.twitter.com/yPJgmHkU7I
— RoKo(Rohit &kohli)fav. (@Dk__0024) March 19, 2024
ಹಿಂದಿನ ಋತುವಿಗೆ ಹೋಲಿಸಿದರೆ, ಜೆರ್ಸಿಯ ಮೇಲಿನ ಅರ್ಧವನ್ನು ಕಪ್ಪು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಯಿಸಲಾಗಿದೆ. ಆರ್ಸಿಬಿಯ ಬಣ್ಣಗಳಿಗೆ ಹೊಸ ವಿನ್ಯಾಸ ಸೇರಿಸಲಾಗಿದೆ. ರಘು ದೀಕ್ಷಿತ್, ನೀತಿ ಮೋಹನ್, ಅಲನ್ ವಾಕರ್ ಮತ್ತು ಇತರ ಹಲವಾರು ಕಲಾವಿದರ ಪ್ರದರ್ಶನಗಳ ನಡುವೆ ಈ ಜೆರ್ಸಿ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ : Paris Olympics : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸೆಕ್ಸ್ಗೆ ಇಲ್ಲ ಬ್ಯಾನ್; ಫ್ರೀ ಕಾಂಡೋಮ್ ವಿತರಣೆ ನಿರಂತರ
ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್ ವಿಜಯಕ್ಕಾಗಿ ಆರ್ಸಿಬಿ ಮಹಿಳಾ ತಂಡಕ್ಕೆ ಪುರುಷರ ತಂಡವು ಗಾರ್ಡ್ ಆಫ್ ಹಾನರ್ ನೀಡುವುದರೊಂದಿಗೆ ಸಮಾರಂಭ ಪ್ರಾರಂಭವಾಯಿತು. ಸ್ಮೃತಿ ಮಂದಾನ ನೇತೃತ್ವದ ಭಾರತ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿ ಎರಡನೇ ಆವೃತ್ತಿಯ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಡಬ್ಲ್ಯುಪಿಎಲ್ ಚಾಂಪಿಯನ್ಸ್ ಮೈದಾನದಲ್ಲಿ ವಿಜಯೋತ್ಸವ ಆಚರಿಸಿದರು. ಬೆಂಗಳೂರು ಪ್ರೇಕ್ಷಕರು ಫ್ರಾಂಚೈಸಿಯ ಮೊದಲ ಪ್ರಶಸ್ತಿ ವಿಜಯವನ್ನು ಸಂಭ್ರಮಿಸಿದರು. ನಾಯಕಿ ಮಂದಾನ, ರೇಣುಕಾ ಸಿಂಗ್ ಠಾಕೂರ್, ಸ್ಥಳೀಯ ಹುಡುಗಿ ಶ್ರೇಯಂಕಾ ಪಾಟೀಲ್ ಮತ್ತು ತಂಡದ ಇತರ ಎಲ್ಲಾ ಸದಸ್ಯರು ಸಂತೋಷದಿಂದ ಸ್ಟ್ಯಾಂಡ್ ಗಳಲ್ಲಿ ಅಭಿಮಾನಿಗಳತ್ತ ಕೈ ಬೀಸುತ್ತಿರುವುದು ಕಂಡುಬಂತು.
ತಂಡದ ಹೆಸರು ಬದಲಿಸಿಕೊಂಡ ಆರ್ಸಿಬಿ
ಬೆಂಗಳೂರು: ಐಪಿಎಲ್ (IPL 2024) ನ 17 ನೇ ಆವೃತ್ತಿ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಆರ್ಸಿಬಿ (Royal Challengers Bangalore) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಅನ್ಬಾಕ್ಸ್ (RCB UNBOX) ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳು ನಡೆದವು. ಇದೇ ವೇಳೆ ತಂಡಕ್ಕೆ ಹೊಸ ಹೆಸರನ್ನೂ ಇಡಲಾಗಿದೆ. ಅಂದರೆ ಇನ್ನು ಮುಂದೆ ರಾಯಲ್ ಚಾಲೆಂಜರ್ಸ್ ಬೆಂಗ್ಳೂರ್ (Royal Challengers Bangalore) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಆಗಿ ಬದಲಾವಣೆಯಾಗಿದೆ.
“ನಾವು ಪ್ರೀತಿಸುವ ನಗರ, ನಾವು ಅಪ್ಪಿಕೊಳ್ಳುವ ಪರಂಪರೆ ಮತ್ತು ಇದು ಹೊಸ ಅಧ್ಯಾಯ ಆರಂಭವಾಗುವ ಸಮಯ. ನಿಮಗಿದೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಅರ್ಪಣೆ. ನಿಮ್ಮ ತಂಡ, ನಿಮ್ಮ ಆರ್ಸಿಬಿ “ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ.