Site icon Vistara News

Virat Kohli : ಕೊಹ್ಲಿಯನ್ನು ಹೊಗಳಿದ ಮಾಜಿ ವೇಗದ ಬೌಲರ್​

Virat Kohli

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ ಎಕ್ಸ್​ನಲ್ಲಿ ನಡೆದ ಕ್ರಿಕೆಟ್ ಅಭಿಮಾನಿಗಳ ನಡುವಿನ ಪ್ರಶ್ನೋತ್ತರ ಸಂದರ್ಭದಲ್ಲಿ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿಯನ್ನು (Virat Kohli) ಶ್ಲಾಘಿಸಿದ್ದಾರೆ. ಅವರು ಅವರನ್ನು ಚಾಂಪಿಯನ್ ಎಂದು ಕರೆದಿರುವ ಜತೆಗೆ ಮತ್ತು 2023 ಅವರ ವರ್ಷವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ 2023 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ 2048 ರನ್ ಗಳಿಸುವ ಮೂಲಕ ಫಾರ್ಮ್​ಗೆ ಮರಳಿದ್ದರು. ಭಾರತ ಪರ 2154 ರನ್ ಗಳಿಸಿದ ಶುಭ್ಮನ್ ಗಿಲ್ ನಂತರ ಎರಡನೇ ಸ್ಥಾನ ಪಡೆದಿದ್ದಾರೆ. ಅದೇ ರೀತಿ ವಿಶ್ವ ಕಪ್​ನಲ್ಲಿ 11 ಪಂದ್ಯಗಳಲ್ಲಿ 3 ಶತಕ ಮತ್ತು 6 ಅರ್ಧಶತಕಗಳೊಂದಿಗೆ 765 ರನ್ ಗಳಿಸುವ ಮೂಲಕ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು (673) ಮುರಿದಿದ್ದರು.

ಈ ವರ್ಷ ಕೊಹ್ಲಿ ಏಕದಿನ ಕ್ರಿಕೆಟ್​ನ್ಲಲಿ ಒಟ್ಟು 50 ಶತಕಗಳ ಮೈಲಿಗಲ್ಲನ್ನು ದಾಟಿದ್ದರು. ಈ ಮೂಲಕವೂ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದರು. ವೆಂಕಟೇಶ್ ಪ್ರಸಾದ್ ಎಕ್ಸ್ ನಲ್ಲಿ #AskVenky ಸೆಷನ್ ನಡೆಸುವಾಗ ಅವರ ಈ ಎಲ್ಲ ಸಾಧನೆಗಳನ್ನು ಕೊಂಡಾಡಿದ್ದಾರೆ. ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಕೇಳಿಕೊಂಡಾಗ ಅವರು ಮುಕ್ತ ಮನಸ್ಸಿನಿಂದ ಕೊಂಡಾಡಿದ್ದಾರೆ.

ಪ್ರಸಾದ್​ ಹೇಳಿಕೆಯೇನು?

ಅವರು ಚಾಂಪಿಯನ್ ಮತ್ತು ಈ ಪೀಳಿಗೆಯ ಅತ್ಯುತ್ತಮ ಬ್ಯಾಟರ್​​ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದು ಅವರಿಗೆ ಅಸಾಧಾರಣ ವರ್ಷವಾಗಿದೆ. ಇದು ಅವರ ಅತ್ಯುತ್ತಮ ವರ್ಷವೆಂದು ರೇಟ್ ಮಾಡಬೇಕಿದೆ. ವಿಶೇಷವಾಗಿ ಇದು ಅವರಿಗೆ ಒಂದೆರಡು ಕಷ್ಟಕರ ವರ್ಷಗಳ ನಂತರ ಬಂದಿರುವ ಸುಮಧುರ ವರ್ಷವಾಗಿದೆ. ಆ ರನ್​ ಗಳಿಕೆಯ ದಾಹ ನೀಗಿದೆ. ಅವರು ನಿಜವಾದ ಚಾಂಪಿಯನ್ ಎನಿಸಿಕೊಂಡಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ.

ಸೆಂಚೂರಿಯನ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಕೊಹ್ಲಿ 76 ರನ್ ಗಳಿಸುವ ಮೂಲಕ ಭಾರತಕ್ಕೆ ನೆರವಾಗಿದ್ದರು. ಆದರೆ, ಉಳಿದವರ ವೈಫಲ್ಯದಿಂದಾಗಿ ಭಾರತ ಸೋತಿತ್ತು. ಭಾರತವು 131 ರನ್​ಗಳಿಗೆ ಆಲೌಟ್ ಆಗಿದೆ. ಭಾರತ ತನ್ನ ಮುಂದಿನ ಟೆಸ್ಟ್ ಪಂದ್ಯವನ್ನು ಜನವರಿ 3 ರಂದು ಕೇಪ್ ಟೌನ್ ನಲ್ಲಿ ಆಡಲಿದೆ.

ವರ್ಷದ ಕ್ರಿಕೆಟ್​ ತಂಡದಲ್ಲಿ ವಿರಾಟ್​ ಕೊಹ್ಲಿ, ಸ್ಟ್ರೀವ್ ಸ್ಮಿತ್​ಗೆ ಸ್ಥಾನವಿಲ್ಲ!

ನವದೆಹಲಿ: ಆಧುನಿಕ ಕಾಲದ ದಂತಕಥೆಗಳಾದ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಅವರು ಸಾಂಪ್ರದಾಯಿಕ ಕ್ರಿಕೆಟ್​ ಮಾದರಿಯಲ್ಲಿ ಎಲ್ಲರಿಗಿಂತಲೂ ಶ್ರೇಷ್ಠ ಆಟಗಾರರು. ಕಳೆದ 12 ತಿಂಗಳುಗಳ ಕಾಲ ಅತ್ಯುತ್ತಮ ರೀತಿಯಲ್ಲಿ ಕ್ರಿಕೆಟ್​ ಆಡಿದ್ದಾರೆ ಅವರು. ಆದರೆ, ಅವರಿಬ್ಬರೂ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ವರ್ಷದ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಭಾರತದ ಶ್ರೇಷ್ಠ ಆಟಗಾರ ಕೊಹ್ಲಿ ಎರಡು ಶತಕಗಳನ್ನು ಬಾರಿಸಿದರೆ, ಆಸೀಸ್ ಸ್ನೇಹಿತ ಸ್ಮಿತ್ ಮೂರು ಶತಕಗಳನ್ನು ಗಳಿಸಿದ್ದಾರೆ. ಸಿಎ ವರ್ಷದ ಗೌರವಾನ್ವಿತ ಟೆಸ್ಟ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡಿಲ್ಲ ಎಂಬುದು ಚರ್ಚೆಯ ಸಂಗತಿಯಾಗಿದೆ.

ಕೊಹ್ಲಿ ಮತ್ತು ಸ್ಮಿತ್ ಅವರ ಜತೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಕೇನ್ ವಿಲಿಯಮ್ಸನ್ ಮತ್ತು ಜೋ ರೂಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. cricket.com.au ಹೆಸರಿಸಿದ ವಿಶೇಷ ಇಲೆವೆನ್ ನ ಭಾಗವಾಗಿದ್ದಾಋಎ ಅವರು. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ಮಾಜಿ ನಾಯಕರು ಬ್ಯಾಟಿಂಗ್ ವಿಭಾಗದಲ್ಲಿ 3 ಮತ್ತು 4 ನೇ ಸ್ಥಾನದಲ್ಲಿದ್ದಾರೆ.

ವಿಲಿಯಮ್ಸನ್ ಬ್ಲ್ಯಾಕ್ ಕ್ಯಾಪ್ಸ್ ಪರ ಏಳು ಟೆಸ್ಟ್ ಮತ್ತು 13 ಇನ್ನಿಂಗ್ಸ್​ಗಳಲ್ಲಿ 57.91 ಸರಾಸರಿಯಲ್ಲಿ ನಾಲ್ಕು ಶತಕಗಳನ್ನು ಒಳಗೊಂಡ ಒಟ್ಟು 695 ರನ್ ಗಳಿಸಿದ್ದರೆ, ರೂಟ್ ಎಂಟು ಟೆಸ್ಟ್ ಮತ್ತು 14 ಇನ್ನಿಂಗ್ಸ್​ಗಳಲ್ಲಿ ತ್ರಿ ಲಯನ್ಸ್ ಪರ 787 ರನ್ ಗಳಿಸಿದ್ದಾರೆ.’

Exit mobile version