Site icon Vistara News

Virat Kohli: ದಕ್ಷಿಣ ಆಫ್ರಿಕಾದಿಂದ ದಿಢೀರ್​ ಭಾರತಕ್ಕೆ ಮರಳಿದ ವಿರಾಟ್​ ಕೊಹ್ಲಿ

Virat Kohli

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ದಿಢೀರ್​ ಭಾರತಕ್ಕೆ ಮರಳಿದ್ದಾರೆ. ಬೆರಳಿನ ಗಾಯಕ್ಕೀಡಾದ ಯುವ ಬ್ಯಾಟರ್​ ಋತುರಾಜ್ ಗಾಯಕ್ವಾಡ್​(Ruturaj Gaikwad) ಟೆಸ್ಟ್​ ಸರಣಿಯಿಂದ ಹೊರಬಿದ್ದಾರೆ.

ಟೆಸ್ಟ್ ಸರಣಿ ಆರಂಭಕ್ಕೂ 10 ದಿನ ಮುಂಚಿತವಾಗಿ ಕೊಹ್ಲಿ ಏಕಾಂಗಿಯಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು. ಅಲ್ಲದೆ ಅಭ್ಯಾಸ ಕೂಡ ಆರಂಭಿಸಿದ್ದರು. ಇದೀಗ ಕೊಹ್ಲಿ ಕೌಟುಂಬಿಕ ತುರ್ತುಪರಿಸ್ಥಿತಿಯಿಂದಾಗಿ ಮತ್ತೆ ಭಾರತಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ. ಟೆಸ್ಟ್​ ಸರಣಿ ಡಿಸೆಂಬರ್​ 26ರಿಂದ ಆರಂಭಗೊಳ್ಳಲಿದೆ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ಶನಿವಾರ ಮತ್ತೆ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.

ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮ ಗರ್ಭಿಣಿಯಾಗಿರುವುದು ಈಗಾಗಲೇ ತಿಳಿದ ವಿಚಾರ, ಅವರ ಆರೋಗ್ಯದ ಸಲುವಾಗಿಯೇ ಕೊಹ್ಲಿ ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಮರಳಿದ್ದಾರೆ ಎನ್ನಲಾಗಿದೆ. ಆದರೆ ಇದು ಖಚಿತವಾಗಿಲ್ಲ.

ಗಾಯಕ್ವಾಡ್​ ಔಟ್​

ಡಿಸೆಂಬರ್ 19 ರಂದು ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಬೆರಳಿನ ಗಾಯಕ್ಕೀಡಾಗ 26 ವರ್ಷ ವರ್ಷದ ಗಾಯಕ್ವಾಡ್​ ಟೆಸ್ಟ್​ ಸರಣಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಫೀಲ್ಡಿಂಗ್ ಮಾಡುವಾಗ ಗಾಯಕ್ವಾಡ್​ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರು ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ರಜತ್​ ಪಾಟೀದಾರ್​ ಅವರು ಕಣಕ್ಕಿಳಿದ್ದರು. ಇದೀಗ ಗಂಭೀರ ಸ್ವರೂಪದ ಗಾಯದಿಂದಾಗಿ ಅವರು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಶನಿವಾರ ಭಾರತ ತಲುಪುವ ಸಾಧ್ಯತೆ ಇದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ Most ODI wins: ಆಸ್ಟ್ರೇಲಿಯಾದ ದಾಖಲೆ ಮುರಿದ ಟೀಮ್​ ಇಂಡಿಯಾ

ದಿಢೀರ್​ ಹಿಂದೆ ಸರಿದಿದ್ದ ಇಶಾನ್​ ಕಿಶನ್

ಕಳೆದ ವಾರವಷ್ಟೇ ಯುವ ಎಡಗೈ ಬ್ಯಾಟರ್​ ಇಶಾನ್ ಕಿಶನ್​ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಟೆಸ್ಟ್​ ಸರಣಿಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಇವರ ಸ್ಥಾನಕ್ಕೆ ಶ್ರೀಕರ್​ ಭರತ್​ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದರು. ಸದ್ಯ ಗಾಯಕ್ವಾಡ್​ ಬದಲಿಗೆ ಆಟಗಾರನ ಆಯ್ಕೆಯಾಗಿಲ್ಲ.

ಭಾರತ ಟೆಸ್ಟ್​ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, , ಕೆ.ಎಲ್ ರಾಹುಲ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್​ಪ್ರೀತ್​ ಬುಮ್ರಾ (ಉಪ ನಾಯಕ), ಪ್ರಸಿದ್ಧ್ ಕೃಷ್ಣ, ಕೆ.ಎಸ್ ಭರತ್ (ವಿಕೆಟ್​ ಕೀಪರ್​).

Exit mobile version