Site icon Vistara News

Ind vs Aus : ಭಾರತ ತಂಡದ ಪರ ನೂತನ ದಾಖಲೆ ಸೃಷ್ಟಿಸಿದ ಕೊಹ್ಲಿ- ರಾಹುಲ್​ ಜತೆಯಾಟ

Virat Kohli and Rahul

ಬೆಂಗಳೂರು: ಚೆನ್ನೈನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ (Ind vs Aus) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಏಕದಿನ ವಿಶ್ವಕಪ್​​ನಲ್ಲಿ ಭಾರತದ ಪರ 4 ನೇ ವಿಕೆಟ್ ಗರಿಷ್ಠಢ ಜೊತೆಯಾಟವನ್ನು ದಾಖಲಿಸಿದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಗೆಲುವಿನ ಬಳಿಕ ಭಾರತ ತಂಡಕ್ಕೆ ಈ ಜಯ ಸ್ಮರಣೀಯ ಎನಿಸಿತು.

ಕೊಹ್ಲಿ ಹಾಗೂ ರಾಹುಲ್ ನಾಲ್ಕನೇ ವಿಕೆಟ್​ 165 ರನ್​ಗಳ ಜತೆಯಾಟ ನೀಡಿದ್ದರು. ಈ ಮೂಲಕ ಈ ಸ್ಟಾರ್​ ಬ್ಯಾಟರ್​ಗಳು 1996ರ ವಿಶ್ವಕಪ್​​ನಲ್ಲಿ ನವಜೋತ್ ಸಿಧು ಹಾಗೂ ವಿನೋದ್ ಕಾಂಬ್ಳಿ ಜೋಡಿ ಪೇರಿಸಿದ್ದ 142 ರನ್​ಗಳ ದಾಖಲೆಯನ್ನು ಮೀರಿದರು.

ಭಾನುವಾರ ನಡೆದ ಪಂದ್ಯದಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 2 ರನ್ ಸಂಕಷ್ಟಕ್ಕೆ ಬಿತ್ತು. 200 ರನ್​ಗಳ ಗುರಿಯನ್ನು ಬೆನ್ನಟ್ಟು ಹೊರಟ ಭಾರತ ಹೀನಾಯ ಪರಿಸ್ಥಿತಿ ಎದುರಿಸುವುದನ್ನು ನೋಡಿದ ಭಾರತ ತಂಡದ ಅಭಿಮಾನಿಗಳು ಬೇಸರಕ್ಕೆ ಒಳಗಾದರು. ಬಳಿಕ ಕೊಹ್ಲಿ ಮತ್ತು ರಾಹುಲ್ ಕ್ರಮವಾಗಿ 72 ಮತ್ತು 75 ಎಸೆತಗಳಲ್ಲಿ ಅರ್ಧಶತಕಗಳನ್ನು ಗಳಿಸಿ ಗೆಲುವಿನ ಭರವಸೆ ಮೂಡಿಸಿದರು. ರಾಹುಲ್​ ಕೊನೇ ತನಕ ಹೋರಾಟ ನಡೆಸಿ 91 ರನ್​ ಗಳಿಸಿ ಗೆಲುವು ತಂದುಕೊಟ್ಟರೆ, ವಿರಾಟ್​ 85 ರನ್​ ಬಾರಿಸಿ ತಮ್ಮ ಜವಾಬ್ದಾರಿಯನ್ನು ಮೆರೆದರು.

ಭಾರತ ತಂಡದ ಪರ ಏಕ ದಿನ ಮಾದರಿಯಲ್ಲಿ 4 ವಿಕೆಟ್​ ದೊಡ್ಡ ಜತೆಯಾಟ ದಾಖಲಾಗಿದ್ದು 1998ರಲ್ಲಿ. ಜಿಂಬಾಬ್ವೆ ವಿರುದ್ಧ ಅಜಯ್ ಜಡೇಜಾ ಹಾಗೂ ಮೊಹಮ್ಮದ್ ಅಜರುದ್ದೀನ್ 275 ರನ್​ಗಳ ಜೊತೆಯಾಟವಾಡಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಭಾರತದ ದಾಖಲೆ

ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ವಿಶ್ವಕಪ್​ನ ಐದನೇ ಪಂದ್ಯ ನಡೆಯಿತು. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ಮೂಲಕ ಬಹುನಿರೀಕ್ಷಿತ ಪಂದ್ಯ ಪ್ರಾರಂಭವಾಯಿತು. ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಇನ್ನಿಂಗ್ಸ್ ಆರಂಭಿಸಲು ಮುಂದಾದರು. ಮಾರ್ಷ್ ಅವರನ್ನು ಡಕ್ ಔಟ್ ಮಾಡಿದ ಭಾರತ ಅವರನ್ನು ವಾಪಸ್​ ಪೆವಿಲಿಯನ್​ಗೆ ಕಳುಹಿಸಿತು. ಅಲ್ಲಿಗೆ ಆಸ್ಟ್ರೇಲಿಯಾದ ಸಂಭ್ರಮ ಹಾಳಾಯುತಯ. ಬುಮ್ರಾ ಅವರ ಅದ್ಭುತ ಎಸೆತದಿಂದಾಗಿ ಚೆಂಡು ನೇರವಾಗಿ ವಿರಾಟ್ ಕೊಹ್ಲಿ ಅವರ ಕೈಗೆ ಸಿಕ್ಕಿತು. ಅದ್ಭುತವಾಗಿ ಅದನ್ನು ಸ್ವೀಕರಿಸಿ ಸಂಭ್ರಮಿಸಿದರು.

ಇದನ್ನೂ ಓದಿ : ICC World Cup 2023 : ಸಚಿನ್ ತೆಂಡೂಲ್ಕರ್​ ದಾಖಲೆ ಮುರಿದ ಡೇವಿಡ್​ ವಾರ್ನರ್​, ಏನಿದು ರೆಕಾರ್ಡ್​?

ಮಾರ್ಷ್ ಆರು ಎಸೆತಗಳಲ್ಲಿ ಡಕ್ ಔಟ್ ಆಗಬೇಕಾಯಿತು. ಈ ಮೂಲಕ ಏಕದಿನ ವಿಶ್ವಕಪ್​​ನಲ್ಲಿ ಭಾರತ ಪರ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರನನ್ನು ಡಕ್ ಔಟ್ ಮಾಡಿದ್ದು ಇದೇ ಮೊದಲು.

ಪಂದ್ಯದ ಮೂರನೇ ಓವರ್ ಎಸೆದ ಬುಮ್ರಾ, ಅವರ ಎರಡನೇ ಎಸೆತದಲ್ಲಿ ಮಾರ್ಷ್ ಅವರನ್ನು ಔಟ್ ಮಾಡಲಾಯಿತು. ಚೆಂಡು ಹೊರಗೆ ಚಲಿಸುತ್ತಿದ್ದಂತೆ, ಅದು ಮಾರ್ಷ್ ಅವರ ಬ್ಯಾಟ್​​ನ ಅಂಚಿಗೆ ಅಪ್ಪಳಿಸಿತು ಮತ್ತು ಕೊಹ್ಲಿ ಮೊದಲ ಸ್ಪಿಪ್​ನಲ್ಲಿ ಡೈವ್​ ಹೊಡೆದು ಹಿಡಿದರು.

Exit mobile version